ಮನೆ Uncategorized ನಕ್ಕು ನಲಿಯಿರಿ

ನಕ್ಕು ನಲಿಯಿರಿ

0

ಲಿಪ್ ಸ್ಟಿಕ್ ಪ್ರಸಂಗ

ಸ್ನೇಹಿತರಿಬ್ಬರು ಮಾತನಾಡುತ್ತಾ,

ಒಬ್ಬ ಹೇಳ್ತಾನೆ, “ನನ್ ಹೆಂಡತಿ ಯಾವಾಗ್ಲೂ ವಟ ವಟ ಮಾತಾಡ್ತಾನೆ ಇರ್ತಾಳೆ, ತಲೆ ಕೆಟ್ಟು ಗೊಬ್ರ ಆಗೋಗಿದೆ”.

ಎರಡನೇ ಸ್ನೇಹಿತ, “ನನ್ ಹೆಂಡ್ತಿನೂ ಸಖತ್ ಮಾತಾಡ್ತಾಳಪ್ಪ. ಆದ್ರೆ ನಿನ್ನೆಯಿಂದ ಬಾಯಿ ಮುಚ್ಚಿಸಿದ್ದೀನಿ” ಅಂತ ಹೇಳ್ತಾನೆ.

ಮೊದಲನೇ ಸ್ನೇಹಿತನಿಗೆ ಆಶ್ಚರ್ಯ ಆಗುತ್ತೆ, “ಅಂಥದ್ದೇನು ಮಾಡಿದೆ?”.

ಎರಡನೇ ಸ್ನೇಹಿತ: “ಹೆಂಡ್ತಿ ಮೇಕಪ್ ಮಾಡ್ಕೋಬೇಕಾದ್ರೆ ಲಿಪ್ ಸ್ಟಿಕ್ ಕೊಡೋಕೆ ಹೇಳಿದ್ಳು. ನಾನು ಫೆವಿಕಾಲ್ ಡಬ್ಬಿ ಕೊಟ್ಟೆ ಅಷ್ಟೇ. ಆಗಿನಿಂದ ಆಕೆ ಬಾಯಿ ತೆಗೀತಾನೆ ಇಲ್ಲ” ಅಂತಾನೆ.

************

ಒಂದು ದೊಡ್ಡ ಮಾಲ್’ನಲ್ಲಿ  ಸುಂದರವಾದ ಮಹಿಳೆ ಶಾಪಿಂಗ್ ಮಾಡುತ್ತಿರುತ್ತಾಳೆ.

ಆಗ ಗುಂಡ ಅವಳ ಬಳಿ ಹೋಗಿ ಮಾತನಾಡಿಸುತ್ತಾನೆ: “ಮೇಡಂ ನನ್ ಹೆಂಡ್ತಿ ಈ ಮಾಲ್ನಲ್ಲಿ ಕಾಣ್ತಿಲ್ಲ. ನೀವು ನನ್ ಜೊತೆ ಸ್ವಲ್ಪ ಹೊತ್ತು ಮಾತಾಡ್ತೀರಾ?”.

ಆ ಹುಡುಗಿ ಕಣ್ಣು ಹುಬ್ಬೇರಿಸಿ, “ನಿಮ್ ಹೆಂಡ್ತಿ ಕಾಣಿಸ್ತಿಲ್ಲ ಅಂದ್ರೆ ನನ್ ಹತ್ರ ಯಾಕೆ ಬಂದಿದ್ದೀರಿ?” ಎಂದು ಕೇಳುತ್ತಾಳೆ.

ಅದಕ್ಕೆ ಗುಂಡ, “ಇಲ್ಲ ಮೇಡಂ, ನಾನು ಚೆನ್ನಾಗಿರೋ ಹುಡುಗಿ ಜೊತೆ ಎಲ್ಲಾದ್ರೂ ಮಾತಾಡಿದ್ರೆ ಸಾಕು ನನ್ ಹೆಂಡ್ತಿ ಅದೆಲ್ಲಿರ್ತಾಳೋ ಕೂಡಲೇ ಪ್ರತ್ಯಕ್ಷ ಆಗಿಬಿಡ್ತಾಳೆ” ಎನ್ನುತ್ತಾನೆ.