ಅಪ್ಪಟ ಕನ್ನಡದಲ್ಲಿ ದಿನಸಿ / ಸಾಮಾನುಗಳ ಹೆಸರು ಹೇಳಿ ಖರೀದಿಸಿದರೆ ಶೇ. 30 ರಿಯಾಯಿತಿ ಎಂದು. ಸಾಹಿತ್ಯ ಪ್ರೇಮಿಯೊಬ್ಬ ತನ್ನ ಅಂಗಡಿ ಮುಂದೆ ಬೋರ್ಡ್ ಹಾಕಿಕೊಂಡಿದ್ದ.
ಆ ಅಂಗಡಿಗೆ ತಿಮ್ಮ ಹೋದ.
ಅಂಗಡಿಯವ: ಅಲ್ಪ ಮಾತ್ರವೂ ಇಂಗ್ಲಿಷ್ ಬಳಸದೇ ಏನಾದರೂ ಖರಿದಿಸಿದವರಿಗೆ ಶೇ. 30 ರಿಯಾಯಿತಿ ಕೊಡಲಾಗುವುದು ಎಂದ.
ತಿಮ್ಮ: ‘ಸೂಕ್ಷ್ಮಾತಿ ಸೂಕ್ಷ್ಮ ವಿಷಾಣು ಆಗಮನ ನಿರ್ಗಮನ ಅವರೋಧ ಮುಖೋಷ್ಟನ್ಯಾಸಿಕಾಧಿ ರಕ್ಷಾಣಾರ್ಥ ಕರ್ಣದ್ವಯಸಮರ್ಥಿತ ದ್ವಿವಸ್ತ್ರ ಪಟ್ಟಿಕಾ’ ಕೊಡಿ.
ಅಂಗಡಿಯವ: ತಲೆ ಚಚ್ಚಿಕೊಂಡು, ಕೇಳಿದ ಅದೇನು ಇಂಗ್ಲೀಷ್ ನಲ್ಲೆ ಬೊಗಳೋ ಶೇ. 50 ರಿಯಾಯಿತಿ ಕೊಡ್ತೇನೆ.
ತಿಮ್ಮ: ಮಾಸ್ಕ್ ಕೊಡಿ
-**************
ಪ್ರೀತಿಸಿ ಮದುವೆಯಾಗಿದ್ದರೂ ಗಂಡ ಹೆಂಡತಿ ನಡುವೆ ಮೊದಲೆರಡು ವರ್ಷದಲ್ಲಿದ್ದ ಅನ್ಯೋನ್ಯತೆ ಇರಲಿಲ್ಲ. ಪ್ರತೀದಿನ ಪತಿಪತ್ನಿಯರ ಜೊತೆ ಜಗಳ. ಇದರಿಂದ ಬೇಸತ್ತ ಪತಿ, ಕೌನ್ಸಿಲರ್ ಸಲಹೆ ಕೇಳಲು ಅವರ ಬಳಿಗೆ ಹೋದ.
ಪತಿ: ನಮ್ಮಿಬ್ಬರ ನಡುವೆ ಯಾವಾಗಲೂ ಜಗಳ. ಜಗಳವಾದಾಗಲೆಲ್ಲಾ ಪತ್ನಿ ತನ್ನ ಸಹೋದರನನ್ನು ಮನೆಗೆ ಕರೆಸುತ್ತಾಳೆ. ನನ್ನ ಭಾವಮೈದ ಮುಂಬೈನಿಂದ ವಿಮಾನದಿಂದ ಬಂದು ನನಗೆ ನಾಲ್ಕು ಕಪಾಳಕ್ಕೆ ಬಿಗಿದು ಮತ್ತೆ ವಿಮಾನದಲ್ಲಿ ಮುಂಬೈಗೆ ವಾಪಸ್ ಆಗುತ್ತಿದ್ದ. ಇಷ್ಟೇ ಅಲ್ಲಾ.. ಅವನ ಫ್ಲೈಟ್ ಟಿಕೆಟ್ ದುಡ್ಡು ನನ್ನ ಕ್ರೆಡಿಟ್ ಕಾರ್ಡ್ ನಿಂದ ಸ್ವೈಪ್ ಮಾಡುತ್ತಾಳೆ
ಕೌನ್ಸಿಲರ್: ನಿಮ್ಮ ಪರಿಸ್ಥಿತಿ ನೋಡಿ ನನಗೆ ಬಹಳ ವಿಷಾದವಾಗುತ್ತದೆ. ಇವತ್ತಿನ ಪ್ರಪಂಚದಲ್ಲಿ ನಮಗೆಲ್ಲಾ ಇಂತಹ ಸಮಸ್ಯೆಗಳು ಕಾಮನ್ ಆಗಿಬಿಟ್ಟಿದೆ. ನೀವು ಒಂದು ಕೆಲಸ ಮಾಡಿ.
ಪತಿ: ಏನ್ ಸರ್? ಕೌನ್ಸಿಲರ್: ನೀವೇ ಮುಂಬೈಗೆ ಶಿಫ್ಟ್ ಆಗಿಬಿಡಿ. ನಿಮ್ಮ ವಿಮಾನ ಪ್ರಯಾಣದ ದರ ಉಳಿಯುತ್ತೆ..