ಮನೆ ಉದ್ಯೋಗ ಜೆಎನ್’ಯು ಯೂನಿವರ್ಸಿಟಿಯಲ್ಲಿ 88 ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಜೆಎನ್’ಯು ಯೂನಿವರ್ಸಿಟಿಯಲ್ಲಿ 88 ಪ್ರೊಫೆಸರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಜವಹರ್’ಲಾಲ್ ನೆಹರು ಯೂನಿವರ್ಸಿಟಿ 88 ಪ್ರೊಫೆಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಸುತ್ತಿದೆ. ಪಿಚ್.ಡಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಹಾಗೂ ಬೋಧನಾ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವರು ಈ ಕೂಡಲೇ ಅರ್ಜಿ ಹಾಕಿ. ನವೆಂಬರ್ 9ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಡಿಸೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನ ವಾಗಿದೆ. ಆಸಕ್ತರು ಆನ್’ಲೈನ್ ಮೂಲಕ ಅರ್ಜಿ ಹಾಕಬೇಕು.

ಅರ್ಜಿ ಶುಲ್ಕ:

ಎಸ್ಸಿ/ಎಸ್ಟಿ/PWD/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ.

ಉಳಿದ ಅಭ್ಯರ್ಥಿಗಳು 2000 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ವಿದ್ಯಾರ್ಹತೆ:

ಜವಹರ್’ಲಾಲ್ ನೆಹರು ಯೂನಿವರ್ಸಿಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಪಿಎಚ್.ಡಿ ಪೂರ್ಣಗೊಳಿಸಿರಬೇಕು. ಜೊತೆಗೆ ರಾಷ್ಟ್ರ ಮಟ್ಟದ ಯಾವುದೇ ವಿಶ್ವವಿದ್ಯಾಲಯ/ಸಂಸ್ಥೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್/ ಅಸೋಸಿಯೇಟ್ ಪ್ರೊಫೆಸರ್/ ಪ್ರೊಫೆಸರ್ ಆಗಿ ಕನಿಷ್ಠ 10 ವರ್ಷಗಳ ಕಾಲ ಬೋಧನೆ ಮಾಡಿದ ಅನುಭವ ಹೊಂದಿರಬೇಕು.

ಉದ್ಯೋಗದ ಸ್ಥಳ:

ಜವಹರ್’ಲಾಲ್ ನೆಹರು ಯೂನಿವರ್ಸಿಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಉದ್ಯೋಗ ನೀಡಲಾಗುತ್ತದೆ.

ವೇತನ:

ಜವಹರ್’ಲಾಲ್ ನೆಹರು ಯೂನಿವರ್ಸಿಟಿ ನೇಮಕಾತಿ ಅಧಿಸೂಚನೆ ಪ್ರಕಾರ, ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 1,44,200-2,18,200 ವೇತನ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ದಾಖಲಾತಿ ಪರಿಶೀಲನೆ

ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09/11/2022

ಅರ್ಜಿ ಸಲ್ಲಿಸಲು ಕೊನೆ ದಿನ: 05/12/2022