ಮನೆ ರಾಜ್ಯ ಶಿವಮೊಗ್ಗ: ಹೊತ್ತಿ ಉರಿದ ಕಾರು,  ಪೊಲೀಸರಿಂದ ಮಾಲೀಕರ ಹುಡುಕಾಟ

ಶಿವಮೊಗ್ಗ: ಹೊತ್ತಿ ಉರಿದ ಕಾರು,  ಪೊಲೀಸರಿಂದ ಮಾಲೀಕರ ಹುಡುಕಾಟ

0

ಶಿವಮೊಗ್ಗ(Shivamogga): ರಾತ್ರೋರಾತ್ರಿ ರಸ್ತೆ ಪಕ್ಕ ನಿಂತಿದ್ದ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಶಿವಮೊಗ್ಗ ತಾಲೂಕು ಬೀರನಕೆರೆ ಗ್ರಾಮದ ಬಳಿ ನಡೆದಿದೆ.

ಶಾರ್ಟ್ ಸರ್ಕ್ಯೂಟ್ ಕಾರಣ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಕಾರಿನ ಮಾಲೀಕರ ಪತ್ತೆಯಾಗಿಲ್ಲ.

ಕಾರಿಗೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಅಗ್ನಿ ಶಾಮಕ ದಳವನ್ನು ಕರೆಯಿಸಿ ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿ ಯಾರು ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ವಾಹನದ ಮಾಲೀಕರನ್ನು ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸ್ ಇಲಾಖೆ ನಡೆಸಿದೆ.

ಕೆಲ ಸ್ಥಳೀಯರ ಪ್ರಕಾರ ಕಾರಿಗೆ ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಕಾರಿನಲ್ಲಿದ್ದ ಇಬ್ಬರು ಹೊರಗಿಳಿದು ಹೋಗಿದ್ದಾರೆ ಎನ್ನಲಾಗಿದೆ.