ಮನೆ ಅಪರಾಧ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

0

ಸುರತ್ಕಲ್: ಕಾರೊಂದು ನಿಯಂತ್ರಣ ತಪ್ಪಿ ಹೋಟೆಲ್ ಮುಂಭಾಗದ ಹೋರ್ಡಿಂಗ್, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಜ್ಜುಗುಜ್ಜಾದ ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಸುಭಾಷಿತ ನಗರ ಜಂಕ್ಷನ್ ಬಳಿ ಮಾ.4ರ ಬೆಳಗ್ಗೆ ನಡೆದಿದೆ.

ಆಸ್ಪತ್ರೆಯೊಂದರ ವೈದ್ಯ ಹಾಗೂ ಮತ್ತೊಬ್ಬರು ಆ ಕಾರಿನಲ್ಲಿದ್ದರು. ಅಪಘಾತದ ಪರಿಣಾಮ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿರುದ್ಧ ದಿಕ್ಕಿನಿಂದ ಸುಭಾಷಿತನಗರ ಕಡೆಗೆ ಹೋಗಲು ಕಾರು ಚಾಲಕ ಏಕಾಏಕಿ ಹೆದ್ದಾರಿಗೆ ನುಗ್ಗಿದ್ದು, ಈ ವೇಳೆ ಉಡುಪಿ ಕಡೆಯಿಂದ ಬರುತ್ತಿದ್ದ ಕ್ಯಾಂಟರ್ ಚಾಲಕ ಬಲಬದಿಗೆ ತಿರುಗಿಸಿದ್ದರಿಂದ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪರಾಗಿದ್ದಾರೆ.

ಸ್ಥಳಕ್ಕೆ ಬೈಕಂಪಾಡಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.