ಮನೆ ಅಪರಾಧ ಬೀದಿ ವ್ಯಾಪಾರಿಗಳ ಮೇಲೆ ಹರಿದ ವಾಹನ: ಶಿಶು ಸಾವು, ನಾಲ್ವರಿಗೆ ಗಾಯ

ಬೀದಿ ವ್ಯಾಪಾರಿಗಳ ಮೇಲೆ ಹರಿದ ವಾಹನ: ಶಿಶು ಸಾವು, ನಾಲ್ವರಿಗೆ ಗಾಯ

0

ತೆಲಂಗಾಣ: ಶಾಸಕರ ಸ್ಟಿಕ್ಕರ್​ ಹೊಂದಿರುವ ವಾಹನವೊಂದು ತನ್ನ ನಿಯಂತ್ರಣ ಕಳೆದುಕೊಂಡಿದ್ದು, ಫುಟ್ ಪಾತ್‍ ಮೇಲೆ ಹರಿದ ಪರಿಣಾಮ 2.5 ತಿಂಗಳ ನವಜಾತ ಗಂಡು ಮಗು ಸಾವನ್ನಪ್ಪಿದ್ದು, 1 ವರ್ಷದ ಮಗು ಸೇರಿದಂತೆ ನಾಲ್ವರು ಗಾಯಗೊಂಡಿರುವ ಘಟನ ಹೈದರಾಬಾದ್​​ನ ಜುಬಿಲಿ ಹಿಲ್ಸ್​​​ನಲ್ಲಿ ನಡೆದಿದೆ.

ನಿನ್ನೆ ರಾತ್ರಿ 9ಗಂಟೆಗೆ ಈ ವಾಹನ ಮಾದಾಪುರದಿಂದ ಕೇಬಲ್ ಸೇತುವೆ ಮೇಲಿನ ಜುಬಿಲಿ ಹಿಲ್ಸ್ ರಸ್ತೆ 45ರ ಕಡೆ ವೇಗವಾಗಿ ತೆರಳುತ್ತಿತ್ತು. ಸೇತುವೆ ದಾಟಿದ ಬಳಿಕ ಏಕಾಏಕಿ ನಿಯಂತ್ರಣ ಕಳೆದುಕೊಂಡಿದ್ದು ಫುಟ್​ಪಾತ್​​ನಲ್ಲಿ ಬಲೂನ್​ ಮಾರುತ್ತಿದ್ದ ಬೀದಿ ವ್ಯಾಪಾರಿಗಳ ಮೇಲೆ ನುಗ್ಗಿದೆ. ಪರಿಣಾಮ ಮಹಾರಾಷ್ಟ್ರದ ಕಾಜಲ್​, ಸಾರಿಕಾ ಹಾಗೂ ಸುಷ್ಮಾ ಗಾಯಗೊಂಡಿದ್ದಾರೆ.

ಅಪಘಾತದ ವೇಳೆ ಕಾಜಲ್​ ಕೈಯಲ್ಲಿದ್ದ ಎರಡೂವರೆ ತಿಂಗಳ ಮಗು ರಣವೀರ್​ ಸಾವನ್ನಪ್ಪಿದ್ದು, ಸಾರಿಕಾ ಕೈಯಲ್ಲಿದ್ದ ಒಂದು ವರ್ಷದ ಮಗು ಗಂಭೀರವಾಗಿ ಗಾಯಗೊಂಡಿದೆ. ಅಪಘಾತ ನಡೆಯುತ್ತಿದ್ದಂತೆ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಜುಬಿಲಿ ಹಿಲ್ಸ್​​ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಸಕ ಶಕೀಲ್​ ಅಮೀರ್ ಮೊಹಮ್ಮದ್​ ಹೆಸರಿನ ಸ್ಟಿಕ್ಕರ್ ಹೊಂದಿರುವ ಕಾರು ಇದಾಗಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.