ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಹೆಂಡತಿ: “ನೀವು ಇಷ್ಟು ಬೇಗನೆ ಮನೆಗೆ ಬಂದಿದ್ದೀರಿ ?” 

ಗಂಡ : “ನನ್ನ ಬಾಸ್ ನರಕಕ್ಕೆ ಹೋಗಿ ಎಂದರು!”

Join Our Whatsapp Group

************

ರಾತ್ರಿ ೨ ಗಂಟೆಗೆ ಕುಡಿದು ಬಂದ ಗಂಡನನ್ನು ನೋಡಿದ ಹೆಂಡತಿ ಪೊರಕೆಯನ್ನು ಕೈಯಲ್ಲಿ ಹಿಡಿದು ಅವನ ಮುಂದೆ ಬಂದು ನಿಲ್ಲತ್ತಾಳೆ.  

ಆಗ ಗಂಡ-ಎಷ್ಟು ಅಂತ ಕೆಲಸ ಮಾಡ್ತೀಯೆ ಸಾಕು ಮಲಗು ಹೋಗು ಅಂದ. 

************

ಬಾಯ್ : ಹಲೋ, ಪಮ್ಮಿ ಡಾರ್ಲಿಂಗ್ … ಹೇಗಿದ್ದೀಯಾ ?

ಗರ್ಲ್ : ಯಾರಿದು .  ಬಾಯ್ : ನಾನು ನಿನ್  ಪ್ರಣಯಕಾಂತ!!

ಗರ್ಲ್ : ನೀನು ದಿವ್ಯರಾಜ್ ತಾನೆ… 

ಬಾಯ್ : ಹೌದು, ನಿನಗೇಗೆ ಗೊತ್ತು ? 

ಗರ್ಲ್ : ನೀನು ನಾರಾಯಣ ಹೆಗ್ಡೆ ಮಗ ತಾನೆ……,?? 

ಬಾಯ್ : ನಿನಗೆ ಹೆಗೋತ್ತು ?? 

ಗರ್ಲ್ : ನೀನು ರಂಗ ನ ಮೊಮ್ಮಗ ತಾನೆ….? 

ಬಾಯ್ : ಯಸ್ !! ಆದರೆ ಜಾನು , ನಿಂಗೆ ಏಗೆ ನನ್ನ ಬಗ್ಗೆ ಇಷ್ಟೆಲ್ಲ ಗೊತ್ತಾಯ್ತು….? 

ಗರ್ಲ್ : ಕಚ್ಡಾ ನನ್ನ ಮಗನೇ…. ನಿನ್ನಮ್ಮ ಕಣೋ ನಾನು !!..  ನೀನು ಕುಡಿದು ‘ಪಮ್ಮಿ’ ಗೆ ಅಲ್ಲ, ‘ಮಮ್ಮಿ’ ಗೆ ಫೋನ್ ಮಾಡಿದಿಯಾ  

***********

ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು.

ಗುಂಡಾ: ನಾವು ಆದಷ್ಟು ಬೇಗ ಆ ಮಹಿಳೆಯನ್ನು ಕಂಡುಹಿಡಿಯಬೇಕು ಸಾರ್ ಎಂದ.       

***********

ಮೇಷ್ಟ್ರು : ಗುಂಡನ  ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ? ಕಾರಿನ ನಂಬರನ್ನು ಗುರ್ತು ಮಾಡ್ಕೊಳ್ಳಬೇಕು..!    

ಗುಂಡಣ್ಣ: ಡಾಕ್ಟರ್ ಯಾಕೋ ನನಗೆ ತುಂಬಾ ಹೊಟ್ಟೆ ನೋವು.  ಡಾಕ್ಟರ್: ಓಹ್! ಗ್ಯಾಸ್ ಪ್ರಾಬ್ಲಮ್ ಆಗಿರಬೇಕು. 

ಗುಂಡಣ್ಣ: ಹೌದು ಡಾಕ್ಟರ್, ಗ್ಯಾಸ್ ಬುಕ್ ಮಾಡಿ ಒಂದು ತಿಂಗಳಾಯಿತು ಇನ್ನೂ ಬಂದಿಲ್ಲ. 

*************

ಪ್ರಿಯಕರ: ಅಯ್ಯೋ ಮಳೆ ಜೋರಾಯ್ತು. ತಗೋ ನನ್ನ ಕೋಟ್ ನೀನು ಹಾಕು.

ಪ್ರಿಯತಮೆ: ಆಗ ನೀನು ನೆನೆಯುವುದಿಲ್ವಾ? 

ಪ್ರಿಯಕರ: ನನ್ನ ಬಳಿ ಕೊಡೆ ಇದೆ.

***********

ಗುಂಡಣ್ಣ: ವೈದ್ಯರೇ ನನಗೆ ಜ್ಞಾಪಕಶಕ್ತಿ ಪೂರ್ಣ ಹೋಗಿದೆ, ಈಗ ಹೇಳಿದ್ದನ್ನು ಈಗಲೇ ಮರೆಯುತ್ತೇನೆ. 

ವೈದ್ಯ: ಹೌದಾ? ಕುಳಿತುಕೊಳ್ಳಿ, ಯಾವಾಗಿನಿಂದ ಈ ಸಮಸ್ಯೆ?  ಗುಂಡಣ್ಣ: ಯಾವ ಸಮಸ್ಯೆ?