“ಹೊರಗೆ ತುಂಬಾ ಜೋರು ಮಳೆ ಬರ್ತಿದೆ ಕಣೇ” ಎಂದು ಉತ್ಸಾಹದಿಂದ ಗಂಡ, ಹೆಂಡತಿಯ ಬಳಿ ಹೇಳಿದ..
ಆಗ, ಹೆಂಡತಿ ಶುರು ಹಚ್ಕೊಂಡ್ಳು ನೋಡಿ.. ಮನೆಯಲ್ಲಿ ಕಡಲೆಹಿಟ್ಟು ಖಾಲಿಯಾಗಿದೆ… ಪಕೋಡ, ಬೋಂಡಾ ಅಂತ ಆಸೆ ಇಟ್ಕೋಬೇಡಿ…
*****
ಗುಂಡ ತನ್ನ ಮಡದಿ ಮತ್ತು ಅತ್ತೆಯ ಜೊತೆಗೆ ಗುರುಗಳ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಹೋದ. ಅಲ್ಲಿ..
ಗುರು: ಸ್ವರ್ಗಕ್ಕೆ ಹೋಗೋ ಇಚ್ಛೆ ಇರೋರು ಕೈಯೆತ್ತಿ,
ಗುಂಡನ ಅತ್ತೆ ಮತ್ತು ಹೆಂಡತಿ ಕೈ ಎತ್ತಿದ್ರು, ಆದರೆ ಗುಂಡ ಕೈ ಎತ್ತಲಿಲ್ಲ.
ಗುರು: ನೀನು ಸ್ವರ್ಗಕ್ಕೆ ಹೋಗುವುದಿಲ್ಲವೇ?
ಗುಂಡ: ಇಲ್ಲ.. ಗುರುಗಳೇ.. ಇವರಿಬ್ಬರು ಹೋದರೆ ನನಗಿಲ್ಲೇ ಸ್ವರ್ಗ
ಗುರು: ಶಿಷ್ಯರೇ ಈ ಮಹಾಜ್ಞಾನಿಯನ್ನು ನಮ್ಮ ಆಶ್ರಮಕ್ಕೆ ಸೇರಿಸ್ಕೊಳ್ಳಿ!
*****
ತಿಮ್ಮ ತನ್ನ ಆಪ್ತ ಸ್ನೇಹಿತ ಗುಂಡನ ಮನೆಗೆ ಬರುತ್ತಾನೆ..
ತಿಮ್ಮ: ಏನೋ ಇದು, ಬಟ್ಟೆ ಒಗಿತಾ ಇದ್ಯಾ?
ಗುಂಡ : ಹೌದು, ಏನ್ ಮಾಡೋದಪ್ಪಾ..
ತಿಮ್ಮ: ಅಲ್ವೋ..ಮನೆ ಕೆಲಸಕ್ಕೆ ಕೆಲಸದವಳನ್ನು ಇಟ್ಟುಕೊಂಡಿದ್ದೆಲ್ಲಾ.. ಎಲ್ಲಿ ಅವಳು.. ನೀನ್ಯಾಕೆ ಈ ಕೆಲಸ ಮಾಡ್ತಾ ಇದ್ಯಾ?