ಮನೆ ದೇವರ ನಾಮ ತುಳಜಾಪುರದ ತುಳಜಾಭವಾನಿ

ತುಳಜಾಪುರದ ತುಳಜಾಭವಾನಿ

0

ತುಳಜಾಪುರದ ತುಳಜಾಭವಾನಿ |

ನೀ ನನ್ನ ಮನೆಯ ಕುಲಸ್ವಾಮಿನಿ |

ನಿನ್ನ ನಂಬಿದ ನನಗೆ ಇಲ್ಲ ಭಯ |

ಭವಾನಿ ನಿನ್ನಿಂದಲೇ ಎಲ್ಲ ನನಗೆ ಅಭಯ || ಪ

ಮಹಾಕ್ಷೇತ್ರ ತುಳಜಾಪುರ |

ಅಲ್ಲಿ ಬರುವ ಭಕ್ತರು ಅಪಾರ |

ನಿತ್ಯ ನಿನಗೆ ಹಾಲು ಮೊಸರು ಹಣ್ಣಿನ ಅಭಿಷೇಕ |

ಸಾಲುಗಟ್ಟಿ ನಿಂತ ಭಕ್ತರು ಭಾವ ಅತಿರೇಕ || 1

ಮದುವೆ, ಮುಂಜಿಗಳ ಮನೆಯೊಳು ಮಾಡಿ |

ನಿನ್ನ ಸನ್ನಿಧಿಯಲ್ಲಿ ಗೊಂದಲ ಹೂಡಿ |

ಧನ್ಯ ಧನ್ಯರಾಗುವ ಸತಿಪತಿ ಜೋಡಿ |

ನಿನಗೆ ಹೊಸ ಸೀರೆ ಉಡಿಸಿ ತುಂಬುವರು ಉಡಿ || 2

ಸಿಂಹವಾಹಿನಿ ಮಹಿಷಾಸುರ ಮರ್ದಿನಿ |

ತುಳಜಾ ಭವಾನಿ ನಿನ್ನ ದರುಶನ ಕರುಣಿಸೆಣೆಗೆ ನಿ |

ನಿನ್ನ ನಂಬಿದ ಭಕ್ತರಿಗೆ ಇಲ್ಲ ಯಾವ ಭಯ |

ಸಲಹುತಿರು ಜಗನ್ಮಾತೆ ಜಹ್ನವಿ ವಿಠಲನ ತೋರಿ || 3