ಮನೆ ಯೋಗ ಆಸನ

ಆಸನ

0

ಯೋಗದ ಮೂರನೆಯ ಅಂಗ ಆಸನ. ಇದು ಅಂಗಗಳ ನಿಲುವು ದೇಹಕ್ಕೆ ಆರೋಗ್ಯ ಮತ್ತು ಲಘುತ್ವವನ್ನು ಇದು ನೀಡುತ್ತದೆ. ನಿಶ್ಚಲವಾದ ಮತ್ತು ಆನಂದ ಕರವಾದ ನಿಲುವು ಮನಸ್ಸಿನ ಚಂಚಲ ನಿವಾರಿಸಿ ಅದಕ್ಕೆ ಧ್ರುವತ್ವವನ್ನೂ ನೀಡುತ್ತದೆ. ಆಸನಗಳು ಕೇವಲ ದೈಹಿಕ ವ್ಯಾಯಾಮಗಳಲ್ಲ ಅವು ನಿಲುವುಗಳು ಅವುಗಳನ್ನು ವ್ಯಕ್ತಪಡಿಸಲು ಅಗತ್ಯವಾದುದು — ಶುಭ್ರವಾದ ಸ್ಥಳ, ಒಂದು ಜಮಖಾನ ಮತ್ತು ಮನಸ್ಸಿನ ಧೃಡತೆ, ಇತರ ವ್ಯಾಯಾಮಗಳಿಗೆ ವಿಸ್ತಾರವಾದ ಸ್ಥಳಗಳು, ಹೆಚ್ಚು ಖರ್ಚಿನ ಸಾಧನ ಸಾಮಗ್ರಿಗಳು ಬೇಕು. ಆಸನಗಳನ್ನು ಒಂಟಿಯಾಗಿಯೇ ಮಾಡಬಹುದು. ದೇಹಕ್ಕೆ ಬೇಕಾದ ಭಾರಪ್ರತಿಭಾರಗಳನ್ನು ಅಂಗಗಳೇ ಒದಗಿಸುತ್ತದೆ. ಅವುಗಳನ್ನು ಬಳಸಿಕೊಂಡಲ್ಲಿ ಅವಶ್ಯಕವಾದ ಕ್ಷಿಪ್ರತಾ, ಸಮತಾ, ಸಹಿಷ್ಣುತ ಮತ್ತು ಹೆಚ್ಚಿನ ಶಕ್ತಿಗಳು ಬರುತ್ತವೆ.

ಅನೇಕ ಶತಮಾನಗಳ ಅನುಭವದಿಂದ ದೇಹದ ಪ್ರತಿಯೊಂದು ಅಂಗಕ್ಕೂ ಮಾಂಸಖಂಡಕ್ಕೂ, ನರಕ್ಕೂ, ಗ್ರಂಥಿಗೂ, ವ್ಯಾಯಾಮ ಸಿಗುವಂತೆ ಆಸನಗಳನ್ನು ನಿಯೋಜಿಸಲಾಗಿದೆ. ಅವು ಒಳ್ಳೆಯ ದೇಹವನ್ನು ಬೆಳೆಸುತ್ತದೆ. ಅಂದರೆ ದೃಢಕಾಯವಾಗಿ ಮೃದುವಾಗಿ ಮಾಂಸಗಳ ಮುದ್ದೆಯಾಗದೆ ರೋಗವರ್ಜಿತವಾಗಿ ಬೆಳೆಯುತ್ತದೆ. ಅವು ತಡೆಗಟ್ಟಿ ನರಗಳಿಗೆ ಶಾಂತಿಯನ್ನು ಕೊಡುತ್ತದೆ. ಆದರೆ ಅವುಗಳ ಮುಖ್ಯ ಉಪಯೋಗ ಆಡಗಿರುವುದು ಮನಸ್ಸಿಗೆ ಅವು ನೀಡುವ ಶಿಸ್ತಿನಲ್ಲಿ.

ಅನೇಕ ನಟ̧ರು ಸರ್ಕಸ್ ವ್ಯಾಯಾಮಕಾರ̧ರು, ಕುಸ್ತಿಕಾರರು, ನೃತ್ಯಗಾರರು, ಸಂಗೀತಗಾರರು, ಕ್ರೀಡಾಪಟುಗಳು, ಅತ್ಯುತ್ತಮ ದೇಹ ಸಂಪತ್ತು ಪಡೆದಿರಬಹುದು, ದೇಹದ ಮೇಲೆ ಶಕ್ತಿಯನ್ನು ಪಡೆದಿರಬಹುದು. ಆದರೆ ಮನಸ್ಸು, ಬುದ್ಧಿ, ಮತ್ತು ಆತ್ಮಗಳ ಮೇಲೆ ಅವರು ಹತೋಟಿ ಪಡೆದಿರುವುದಿಲ್ಲ. ಆದ್ದರಿಂದ ತಮಗೆ ತಾವೇ ಸಮರಸ್ಯ ಹೊಂದಿರುವುದಿಲ್ಲ. ಸಾಮರಸ್ಯ ಹೊಂದಿರುವಂತಹ ವ್ಯಕ್ತಿಗಳು ಅವರಲ್ಲಿ ಅಪರೂಪ. ದೇಹವನ್ನು ನಿರ್ಲಕ್ಷಿಸಿದರು ಅವರ ಪರಿಪೂರ್ಣತೆ ಕಡೆಗೆ ಎಲ್ಲಾ ದೃಷ್ಟಿಯನ್ನೂ ಹಾಯಿಸದೆ ಇಂದ್ರಿಯಗಳ, ಮನಸ್ಸಿನ, ಬುದ್ಧಿಯ ಮತ್ತು ಆತ್ಮದ ಪೂರ್ಣತೆಯ ಕಡೆಗೆ ಗಮನ ನೀಡುತ್ತಾರೆ.

ಯೋಗಿಯು ಆಸನಗಳ ಮೂಲಕ ದೇಹವನ್ನು ನಿಗ್ರಹಿಸಿ ಆತ್ಮಕ್ಕೆ ಅದನ್ನು ಸರಿಯಾದ ವಾಹನವಾಗುವಂತೆ ಮಾಡುತ್ತಾನೆ. ಅದು ಆತ್ಮಕ್ಕೆ ಅಗತ್ಯವಾಗುವ ವಾಹನವೆಂದು ಆತನಿಗೆ ಗೊತ್ತು. ದೇಹವಿಲ್ಲದ ಆತ್ಮ ಶಕ್ತಿಯನ್ನು ಕಳೆದುಕೊಂಡ ಪಕ್ಷಿಯಂತೆ.

ಯೋಗಿಯು ಸಾವಿಗೆ ಅಂಜುವುದಿಲ್ಲ. ಏಕೆಂದರೆ ಕಾಲವೇ ಮಾಸದ ಎಲ್ಲಾ ಉಪಗೋಗವನ್ನೂ ಪಡೆಯಬೇಕು. ತನ್ನ ದೇಹ ಸದಾ ಬದಲಾಗುತ್ತಿರುವುದು – ಬಾಲ್ಯದಿಂದ ಯವ್ವನ ಮತ್ತೆ ಮುದಿತನ ಹೀಗೆ – ಆತನಿಗೆ ಗೊತ್ತು. ಜನ್ಮ ಮತ್ತು ಮರಣಗಳು ಸಹ ಸ್ಥಿತಿಗಳೇ ಆದರೆ ಆತ್ಮಕ್ಕೆ ಮಾತ್ರ ಅವೆರಡುವ ಇಲ್ಲ. ಅಂದರೆ ಹೇಗೆ ಬಟ್ಟೆಗಳನ್ನು ತೆಗೆದುಹಾಕಿ ಹೊಸ ಹುಡುಕುಗಳನ್ನು ಧರಿಸುತ್ತೇವೆಯೋ ಹಾಗೆ ಆತ್ಮನು ಹಳೆಯ ದೇಹಗಳನ್ನು ತೊರೆದು ಹೊಸ ದೇಹವನ್ನು ಧರಿಸುತ್ತದೆ.

ಈ ವಿಷಯವನ್ನು ಶ್ರೀ ಕೃಷ್ಣನು ಅರ್ಜುನನನ್ನು ಕುರಿತು ಹೀಗೆ ವಿಷಾದ ಪಡಿಸುತ್ತಾನೆ ;

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ ನವಾನಿ ಗೃಹ್ಣಾತಿ ನರೋsಪರಾಣಿ |

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ ||

                                                __ಭ.ಗೀ. ೨-೨೨

ಅಂದರೆ — ಯೋಗಿಯು ತನ್ನ ದೇಹವು ದೇವರಿಂದ ಬಂದದ್ದೆಂದೂ,  ತನ್ನ ಉಪಯೋಗಕ್ಕೆ ಮಾತ್ರವಲ್ಲದೆ, ತಾನು ಬದುಕಿದ್ದ ಕಾಲದಲ್ಲಿ ಅದು ಇತರರ ಸೇವೆಗೆ ಮೀಸಲಾದದ್ದು ಎಂದು ತಿಳಿದಿರುತ್ತಾನೆ. ಅದು ಆತನ ಸ್ವಂತ ಆಸ್ತಿ ಎಂದು ಆತನು ಎಂದಿಗೂ ಬಗೆದಿರುವುದಿಲ್ಲ. ದೇಹವನಿತ್ತ ದೇವರು ಒಂದು ದಿನ ಅದನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಾನೆಂದು ಆತನು ಚೆನ್ನಾಗಿ ಬಲ್ಲ.

ಆಸನಗಳನ್ನು ಮಾಡುವುದರಿಂದ ಕೇವಲ ಆರೋಗ್ಯವಾಗಿರುವುವಿಕೆಯನ್ನು ಮಾತ್ರ ಸಾಧಕನು ಗಳಿಸುವುದಿಲ್ಲ. ಅದು ಹಣ ಕೊಟ್ಟು ಪಡೆಯುವ ವಸ್ತುವಲ್ಲ. ಕಷ್ಟದ ಅರ್ಜನೆಯಿಂದ ಮಾತ್ರಗಳಿಸಬಹುದಾದ ಆಸ್ತಿ ಅದು. ಅದು ದೇಹ ಮನಸ್ಸು ಮತ್ತು ಆತ್ಮಗಳ ಸಾಮರಸ್ಯದ ಅವಸ್ಥೆ. ದೈಹಿಕ ಮತ್ತು ಮಾನಸಿಕ ಅರಿವುಗಳನ್ನು ಮರೆಯುವುದೇ ಆರೋಗ್ಯ.

ಯೋಗಿಯಾದವನು ಆಸನಗಳ ದೆಸೆಯಿಂದ ದೈಹಿಕ ಕುಂದುಗಳಿಂದಲೂ ಮಾನಸಿಕ ಚಂಚಲತೆಗಳಿಂದಲೂ ಮುಕ್ತನಾಗಿರುತ್ತಾನೆ. ಪ್ರಪಂಚದ ಸೇವೆಯಲ್ಲಿ ತನ್ನ ಎಲ್ಲಾ ಕೆಲಸಗಳನ್ನು ಅವುಗಳ ಫಲಗಳನ್ನು ದೇವರಿಗೆ ಅರ್ಪಿಸುತ್ತಾನೆ.

ಯೋಗಿಯು ತನ್ನ ಜೀವನ ಮತ್ತು ಅದರ ಚಟುವಟಿಕೆಗಳೆಲ್ಲ ಮಾನವ ರೂಪದಲ್ಲಿ ವ್ಯಕ್ತಗೊಂಡು ಕೆಲಸ ಮಾಡುತ್ತಿರುವ ದೇವರ ಒಂದಂಶವಾದ ಪ್ರಕೃತಿಯೆಂದು ಭಾವಿಸುತ್ತಾನೆ. ತನ್ನ ನಾಡಿಯ ಮಿಡಿತಗಳಲ್ಲಿ ಉಸಿರಾಟ, ಲಯಗಳಲ್ಲಿ ಆತನು ಋತುಗಳ ಪ್ರವಾಹವನ್ನು ವಿಶ್ವಚೇತನದ ಮಿಡಿಯುವಿಕೆಯನ್ನು ಕಾಣುತ್ತಾನೆ. ತನ್ನ ದೇಹವು ಜ್ವಲಿಸುವ ಒಂದು ದೇವಾಲಯವಿದ್ದಂತೆ. ತನ್ನ ದೇಹದ ಬೇಡಿಕೆಗಳನ್ನು ಪೂರೈಸಲಾಗದಂತಾಗುತ್ತದೆ ; ತನ್ನ ದೇಹದ ಮೂಲಕ ಜೀವಿಸುವ ದೈವಿಕಾಂಶದ ಬೇಡಿಕೆಗಳೇ ದೇಹದಬೇಡಿಕೆಗಳು. ಯೋಗಿಯು ದೇವರನ್ನು ಹುಡುಕಲು ದೇಹದ ಹೊರಗೆ ನೋಡುವುದಿಲ್ಲ. ಏಕೆಂದರೆ ಅಂತರ್ಯಾಮಿಯಾಗಿ ದೇವರು ತನ್ನಲ್ಲೇ ಅಡಗಿರುತ್ತಾನೆ ಎಂದು ತಿಳಿಯುತ್ತಾನೆ. ದೇವರ ಸಾಮ್ರಾಜ್ಯ ತನ್ನಲ್ಲಿಯೂ ಹೊರಗೂ ಇರುವಂತೆ ಕಂಡು ಸ್ವರ್ಗವನ್ನು ಇಲ್ಲೇ ಕಾಣುತ್ತಾನೆ.

ಎಲ್ಲಿ ದೇಹ ಕೊನೆಗೊಂಡು ಮನಸ್ಸು ಪ್ರಾರಂಭವಾಗುತ್ತದೆ ? ಎಲ್ಲಿ ಮನಸ್ಸು ಅಂತ್ಯಗೊಂಡು ಆತ್ಮ ಪ್ರಾರಂಭವಾಗುತ್ತದೆ ? ಅದನ್ನು ಹಾಗೆ ವಿಭಜಿಸಲು ಸಾಧ್ಯವಿಲ್ಲ. ಏಕೆಂದರೆ ಅವೆಲ್ಲವೂ ಅಖಂಡವಾದ ಒಂದು ವಿಶ್ವಚೈತನ್ಯದ ವಿವಿಧ ಅಂಶಗಳು.

ಯೋಗಿಯೂ ದೇಹವನ್ನು ಮತ್ತು ಮನಸ್ಸನ್ನು ದಂಡಿಸುವುದಾಗಲಿ, ಉಪೇಕ್ಷಿಸುವುದಾಗಲಿ ಮಾಡದೆ ಎರಡನ್ನು ಏಕ ರೀತಿಯಲ್ಲಿ ಕಾಣುತ್ತಾನೆ. ಆತನಿಗೆ ದೇಹವು ಆಧ್ಯಾತ್ಮಮೋಕ್ಷಕ್ಕೆ ಬಂಧನವಲ್ಲ, ಅಥವಾ ಪತನಕ್ಕೆ ಕಾರಣವೂ ಅಲ್ಲ, ಆದರೆ ಮೋಕ್ಷ ಸಾಧನೆಗೆ ಅನುಕೂಲವಾದ ಸಾಧನಾ ಮಿಂಚಿನಂತ ಶಕ್ತವಾದ ಆರೋಗ್ಯವಾದ ಯಾತನೆಗಳಿಂದ ಮುಕ್ತವಾದ ದೇಹವನ್ನು ಆತನು ಕೋರುತ್ತಾನೆ. ಏಕೆಂದರೆ ಅದು ದೇವರ ಸೇವೆಗೆ ನಿಯೋಜಿತವಾಗುವುದೆಂದು ಆತನ ತಿಳುವಳಿಕೆ ಉಪನಿಷತ್ತಿನಲ್ಲಿ ಹೇಳಿರುವಂತೆ :

ನಾsಯಮಾತ್ಮಾ ಬಲಹೀನೇನ ಲಭ್ಯಾಃ | ನ ಚ ಪ್ರಮಾದಾತ್ ತಪಸೋ ವಾsಪ್ಯಲಿಂಗಾತ್ ||

ಮುಂಡಕ ೩-೨-೪

ಅಂದರೆ ಆತ್ಮವನ್ನು ಬಲಹೀನನಿಂದ ಗಳಿಸಲಾಗದು, ಪ್ರಮಾದದಿಂದಲೂ ಅಲ್ಲ, ಗುರಿ ಇಲ್ಲದೆ ಅದು ಸಾಧ್ಯವಿಲ್ಲ. ಸುಡದ ಮಡಕೆಯು ನೀರಿನಲ್ಲಿ ಕರಗಿ ಹೋಗುವಂತೆ ಆ ದೇಹ ಬೇಗ ಕ್ಷಯಿಸುತ್ತದೆ. ಆದ್ದರಿಂದ ಅದನ್ನು ಯೋಗಿಕ ಶಿಕ್ಷಣವೆಂಬ ಬೆಂಕಿಯಿಂದ ಸುಡಬೇಕು. ಹಾಗಾದರೆ ಮಾತ್ರ ಅದಕ್ಕೆ ಬಲ ಬಂದಿತು ಶುದ್ಧವಾದೀತು.

ಆಸನಗಳ ಹೆಸರು ವಿಕಾಸತತ್ವವನ್ನು ಸೂಚಿಸುವ ಅರ್ಥಗಳನ್ನು ಹೊಂದಿದೆ. ಹಲವು ಆಸನಗಳು ಸಸ್ಯಗಳ ಎಂದರೆ ವೃಕ್ಷ, ಪದ್ಮ ಮುಂತಾದ ಹೆಸರುಗಳಿಂದ ಕರಿಯಲ್ಪಟ್ಟಿದೆ ; ಶಾಲಾಭ, ಮಿಡತೆ, ಚೇಳು ಮುಂತಾದ ಕ್ರಿಮಿಗಳ ಹೆಸರುಗಳಿಂದಲೂ ಹಲವು ಆಸನಗಳು ನಾಮಕರಣಗೊಂಡಿದೆ. ಹಲವು ಆಸನಗಳು ಜಲಚರಗಳಾದ ಮತ್ಸ್ಯ, ಕೂರ್ಮ, ಮಂಡೂಕ, ನಕ್ರ ಮುಂತಾದ ಹೆಸರುಗಳಿಂದ ಕರೆಯಲ್ಪಟ್ಟಿದೆ. ಮತ್ತೆ ಕೆಲವು ಆಸನಗಳ ಹೆಸರು ಪಕ್ಷಿಗಳದ್ದಾಗಿದೆ ಕುಕ್ಕುಟ, ಮಯೂರ, ಬಕಾ, ಹಂಸ, ಶ್ವಾನ, ವಾತಾಯನ, ಕುದುರೆ, ಉಷ್ಟ್ರ ಸಿಂಹ ಇತ್ಯಾದಿ.

ಚತುಷ್ಟಾದಿಗಳ ಹೆಸರು ಆಸನದಾಗಿದೆ. ಹರಿದಾಡುವ ಪ್ರಾಣಿಗಳಾದ ಭುಜಂಗ ಮುಂತಾದವುಗಳನ್ನು ಗರ್ಭಪಿಂಡ ಮುಂತಾದವುಗಳನ್ನ ಮರೆತಿಲ್ಲ. ಹಲವು ಆಸನಗಳನ್ನು ಪೌರಾಣಿಕ ವ್ಯಕ್ತಿಗಳ ಹೆಸರುಗಳಿಂದಲೂ ಕರೆದಿದ್ದಾರೆ. – ವೀರಭದ್ರ, ಹನುಮಾನ್, ಋಷಿಗಳ ಹೆಸರುಗಳು ಇವೆ. ಭಾರದ್ವಾಜ, ಕಪಿಲಾ, ವಸಿಷ್ಠ, ವಿಶ್ವಾಮಿತ್ರ, ಹಲವು ಆಸನಗಳ ದೇವರ ಅವತಾರಗಳ ಹೆಸರುಗಳನ್ನು ಹೊಂದಿದೆ. ಆಸನಗಳನ್ನ ಮಾಡುವಾಗ ಯೋಗಿಯು ದೇಹವು ಅನೇಕ ಜಂತುಗಳ ರೂಪವನ್ನು ತೋರಿಸುತ್ತದೆ. ಯಾವ ಜಂತುವನ್ನು ಹೀನವಾಗಿ ಕಾಣದಂತೆ ಮನಸ್ಸನ್ನು ಶಿಕ್ಷಣ ಗೊಳಿಸುವ ಪ್ರಯತ್ನ ಇಲ್ಲಿದೆ. ಏಕೆಂದರೆ ಸಣ್ಣ ಕ್ರಿಮಿಯಿಂದ ಹಿಡಿದು ಮಹತ್ತರವಾದ ರೂಪದವರೆಗೂ ಎಲ್ಲವೂ ಆ ಪರಮಾತ್ಮನ ಒಂದೇ ಅಂಶ ಎಂಬ ಭಾವ ಯೋಗಿಯಲ್ಲಿರಬೇಕು. ಅತಿ ಉತ್ಕೃಷ್ಟವಾದ ರೂಪ ಅಪರೂಪವೆಂದು ಆತನಿಗೆ ಗೊತ್ತು ಎಲ್ಲದರಲ್ಲೂ ಏಕತೆಯನ್ನು ಆತನು ಕಾಣುತ್ತಾನೆ. ಬ್ರಹ್ಮನ ವಿಚಾರ ಸುಲಲಿತವಾಗಿ ನಿರಂತರವಾಗಿ ಮನಸ್ಸಿನಲ್ಲಿ ಹರಿಯುವುದೇ ಸಾಧಕನ ನಿಜವಾದ ಆಸನ.

ಆಸನಗಳ ಮೇಲೆ ಜಯಸಂಪಾದನೆ ಮಾಡಿದರೆ ದ್ವಂದಗಳಾದ ಲಾಭ- ನಷ್ಟ, ಜಯ – ಅಪಜಯ, ಕೀರ್ತಿ- ನಾಚಿಕೆ, ದೇಹ – ಮನಸ್ಸು, ಮನಸ್ಸು – ಆತ್ಮ ಮುಂತಾದವು ಮಾಯವಾಗಿ ಸಾಧಕನು ಯೋಗದ ನಾಲ್ಕನೇ ಹಂತವಾದ ಪ್ರಾಣಾಯಾಮಕ್ಕೆ ಹೋಗುತ್ತಾನೆ. ಪ್ರಾಣಾಯಾಮದ ಆಚರಣೆಯಲ್ಲಿ ದೇಹಂಗಗಳಾದ ಮೂಗು, ಮೂಗಿನ ಕೊಳ್ಳೆಗಳು, ವಾಯು ಕೊಳವೆ, ಶ್ವಾಸಕೋಶಗಳು ಮತ್ತು ವಪೆ ಭಾಗವಹಿಸುತ್ತದೆ. ಇವು ಮಾತ್ರ ಪ್ರಾಣಶಕ್ತಿಯ ಪ್ರಭಾವವನ್ನು ಅನುಭವಿಸುತ್ತದೆ. ಆದ್ದರಿಂದ ಯಾರು ಪ್ರಾಣಾಯಾಮವನ್ನು ಸಾಧಿಸಲು ಆತುರಗೊಳ್ಳಕೂಡದು. ಏಕೆಂದರೆ ಅದು ಪ್ರಾಣದೊಂದಿಗೆ ಚೆಲ್ಲಾಟ ಮಾಡಿದಂತೆ ಆಗುತ್ತದೆ. ಕ್ರಮರಹಿತ ಅಭ್ಯಾಸದಿಂದ ಉಸಿರಾಟಕ್ಕೆ ಸಂಬಂಧಪಟ್ಟ ರೋಗಗಳು ಉದ್ಭವಿಸಿ ನರಗಳು ಧ್ವಂಸವಾಗಬಹುದು. ಇದರ ಸರಿಯಾದ ಸಾಧನೆಯಿಂದ ಅನೇಕ ಕಾಯಿಲೆಗಳು ಜಯಿಸಬಹುದು. ಪ್ರಾಣಾಯಾಮವನ್ನು ಯಾರೊಬ್ಬನು ಏಕಾಂಗಿಯಾಗಿ ಅಭ್ಯಾಸ ಮಾಡಬಾರದು ಶಿಷ್ಯನ ಮಿತಿಗಳನ್ನು ಅರಿತ ಗುರು ಯಾವಾಗಲೂ ಹತ್ತಿರ ಇರಬೇಕಾಗುತ್ತದೆ.