ಮನೆ ಮನೆ ಮದ್ದು ನೆಲ್ಲಿಕಾಯಿ

ನೆಲ್ಲಿಕಾಯಿ

0

ಮಧ್ಯಮಾಕಾರ, ಸುಂದರ ಮರ, ಕಾಲಿಂಚು ದಪ್ಪನೆ ಕಾಂಡ. ಕೆಂಪು ಕಾಂಡದ ಮರದ ಬಡ್ಡೆ ಕಠಿಣ ಮೋಪು, ಹುಣಸೆ ಎಲೆಯಂತಹ ಕಿರಿ ಎಲೆಗಳು, ಸಾಸಿವೆ ಗಾತ್ರದ ಪುಟಾಣಿ ಬಿಳಿ ಹೂ. ಹಳದಿ ಗೊಂಚಲುಗಳಲ್ಲಿ ತುದಿ ರಂಬೆಗಳಲ್ಲಿ ಇರುವಂಥವು. ಚೈತ್ರದಿಂದ ಕಾರ್ತಿಕ ಪರ್ಯಂತ ಅರಳುವ ಹೂಗಳು. ಅನಂತನ ನಿಧಾನ ಬಲಿಯುವ ಕಾಯಿಗಳು.

ಮಂದ ಸುಗಂಧವಿರುವ ಹೂಗಳು. ಕಾಯಿಗಳು ಗುಂಡನೆ ಆರು ರೇಖೆಗಳಿಂದ ಕೂಡಿದ ಸುಂದರ ಫಲ. ಹಸಿರಿನಿಂದ ಹಳದಿ ಬಣ್ಣಕ್ಕೆ ನಿಧಾನ ತಿರುಗುವ ಫಲ. ಒಣಗಿದಾಗ ಹೋಗುವ ಸ್ವಭಾವ. ಒಳಗೆ ಗಟ್ಟಿಗುಂಡನೆ ಬೀಜ. ಅದು ಸಹ ಬಿರಿಯುವಂಥದ್ದು. ಆದರ ಆರೆಂಟು ಸಂಪುಟಗಳಲ್ಲಿ ಪುನಃ ಹುಟ್ಟು, ನೆಲ್ಲಿಕಾಯಿ ಸಾಧಾರಣವಾಗಿ 12 ಗ್ರಾಂ ತೂಕ. ಬನಾರಸಿ ಜಾತಿಯ ಅಥವಾ ರಾಮದುರ್ಗದ ಕಾಡು ಜಾತಿಯ ಅಧಿಕ ಇಳುವರಿ ನೆಲ್ಲಿಯ ಗಾತ್ರ ದೊಡ್ಡ ಲಿಂಬೆಯಷ್ಟು ಇರುತ್ತದೆ.

ಟ್ಯಾನಿನ್, ಗ್ಯಾಲಿಕ್ ಆಮ್ಲ, ಎಲ್ಲಾಗಿಕ್ ಆಮ್ಲ, ಶರ್ಕರಾಂಶವಿದೆ. ಪೆಕ್ಷಿನ್ ಎಂಬ ಸತ್ವವಿದೆ. ಪ್ರತಿ 100 ಗ್ರಾಂ ಕಾಯಿಯಲ್ಲಿ ೬೦೦ ರಿಂದ ೯೨೧ ಮಿ. ತನಕ ಸಿ ಅನ್ನಾಂಗ ವಿರುತ್ತದೆ. ನೆಲ್ಲಿ ಒಣಗಿದರೂ ಸಹ ಅದರಲ್ಲಿರುವ ಸಿ ಅನ್ನಾಂಗ ನಷ್ಟವಾಗದಿರುವಂತೆ ಟ್ಯಾನಿನ್ ತಡೆಗೋಡೆ ಒಡ್ಡುತ್ತದೆ.  ಚೆನ್ನಾಗಿ ಬಲಿತ ಮತ್ತು ಆಗ ತಾನೇ ಕೈಯಿಂದ ಕೊಯ್ದ ನೆಲ್ಲಿಕಾಯಿ ಅತ್ಯಂತ ಪ್ರಶಸ್ತ ಎಂದು ಚರಕ ಸಂಹಿತೆ ವರ್ಣಿಸುತ್ತದೆ.

ಮುಪ್ಪು ಮತ್ತು ರೋಗ ತಡೆಯುವ ಸಂಜೀವಿನಿ ನೆಲ್ಲಿ. ಹಿಂದಿನ ಕಾಲದಲ್ಲಿ ಹಸಿವೆ, ನೀರಡಿಕೆ ಹೀರುವ ನೆಲ್ಲಿಕಾಯಿಯನ್ನು ಸದಾ ಕಾಲ ಕೈಯಲ್ಲಿ ಹಿಡಿದು ಋಷಿಗಳು ಸಂಚರಿಸುತ್ತಿದ್ದರು. ಹಸ್ತಮಲಕ ಅಥವಾ ಅಂಗೈ ನಲ್ಲಿಕಾಯಿ ನುಡಿಗಟ್ಟು ಹುಟ್ಟಿದ್ದು ಹೀಗೆಯೇ. ಇದು ಅತ್ಯಂತ ಬೇಡಿಕೆಯ ಚ್ಯವನಪ್ರಾಶ ಲೇಹ ತಯಾರಿಕೆಯ ಮೂಲ ವಸ್ತು ನೆಲ್ಲಿಕಾಯಿ.

ಮಹಾಭಾರತದ ಕತೆಯಲ್ಲಿ, ಅದಕ್ಕೂ ಹಿಂದೆ ವೇದ ಸಾಹಿತ್ಯದಲ್ಲಿ ಸುಕನ್ಯೆಯಿಂದ ಕಣ್ಣು ಕುರುಡಾದ ಚ್ಯವನ ಋಷಿ ಆಕೆಯನ್ನು ಮದುವೆಯಾಗುವ ಅನಿವಾರ್ಯತೆ ಉದ್ಭವಿಸುತ್ತದೆ. ಆ ಮುನಿಯು ತನ್ನ ಮುಪ್ಪನೀಗಿ ಯುವತಿ ಸುಕನ್ಯೆಯ ಅನುರೂಪ ಪತಿಯಾಗಲು ಚ್ಯವನಪ್ರಾಶ ತಯಾರಿಸಿ ತಿಂದ ಕಥೆ ಚರಕ ಸಂಹಿತೆಯಲ್ಲಿ ವರ್ಣಿತ. ಅಬಾಲ ವೃದ್ಧರು ನೆಲ್ಲಿ ಸೇವಿಸಲು ಅಡ್ಡಿ ಇಲ್ಲ.

ವಿಶೇಷವಾಗಿ ಇದನ್ನು ಮಧುಮೇಹ ತಡೆ ಮತ್ತು ಪರಿಹಾರಿ ಎಂಬುದಾಗಿ ಕೂಡ ಭಾವಿಸುತ್ತಾರೆ. ಮುದಿತನದ ಸವಕಳಿ ತಡೆಗೆ ಸಿ ಅನ್ನಂಗ ವಿಶೇಷ ಸಹಕಾರಿ. ಸಹಸ್ರಾರು ಬಳಕೆಯ ವಿಧಾನ ದೇಶಾದ್ಯಂತ ಪ್ರಚಲಿತ.

ಔಷಧೀಯ ಗುಣಗಳು :-

* ನೆಲ್ಲಿ ಚೂರ್ಣದ ವಿಶೇಷ ಬಳಕೆ ಮೂಲವ್ಯಾಧಿ. ಭೇದಿ, ಅತಿಸ್ರಾವ ಮತ್ತು ಹಳೆ ನೆಗಡಿಯನ್ನು ನಿವಾರಿಸುತ್ತದೆ.

* ಕಾಮಾಲೆ ಮತ್ತು ರಕ್ತಹೀನತೆಯಲ್ಲಿ ಲೋಹಭಸ್ಮ ಕಬ್ಬಿಣ ಶುದ್ಧೀಕರಿಸಿ ಭಸ್ಮಿಕರಿಸಿದ್ದು ಸಂಗಡ ಸೇವಿಸಿದರೆ ವಿಶೇಷ ಪರಿಣಾಮವಿದೆ.

* ಕಣ್ಣಿನ ತೊಂದರೆ, ಉರಿಯುತದಲ್ಲಿ ನೆಲ್ಲಿಯ ಬಳಕೆಗೆ ವಿಶೇಷ ಸ್ಥಾನವಿದೆ. ನೆಲ್ಲಿಕಾಯಿ ಕೊಯ್ದಾಗ ಒರಸರುವ ಹನಿರಸ ಸಂಗ್ರಹಿಸಿ ಅದನ್ನ ಕಣ್ಣಿಗೆ ಹಚ್ಚಿದರೆ ಕಣ್ಣಿನ ಉರಿಯುತ ಉಪಶಮನ, ಬೀಜದ ಕಷಾಯದಿಂದ ಕಣ್ಣು ತೊಳೆದರೆ ಕಣ್ಣಿನ ಉರಿಯು ಪರಿಹಾರವಾಗುತ್ತದೆ. ರಾತ್ರಿಕಾಲ ನೀರಿನಲ್ಲಿ ನೆಲ್ಲಿ ಪುಡಿಯನ್ನು ನೆನಸಿ ಅದನ್ನು ಕಣ್ಣು ತೊಳೆಯಲು ಬಳಸಿದರೆ, ಕಣ್ಣಿನ ಉರಿ ಮತ್ತು ಕಣ್ಣಿನ ಕೆಂಪು ಬಣ್ಣವಾಸಿಯಾಗುತ್ತದೆ.

*  ನೆಲ್ಲಿ ಮರದ ಒಣ ಎಲೆ ಅಥವಾ ಹಸಿ ಎಲೆಯ ಕಷಾಯದಲ್ಲಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು ಉಪಶಮನ, ಚಿಗುರಲೆ ಅಥವಾ ಒಣ ತೊಗಟೆ ತಂಬುಳಿ ಸೇವನೆಯಿಂದ ಅಜೀರ್ಣ ಮತ್ತು ಆಮಶಂಕೆ, ಭೇದಿ ಮತ್ತು ಕಾಮಾಲೆಯು ಪರಿಹಾರವಾಗುತ್ತದೆ. ಎಲೆ ಅರೆದು ಕಣ್ಣಿನ ಹೊರ ಭಾಗಕ್ಕೆ ಹಚ್ಚಿದರೆ ಕಣ್ಣಿಗೆ ಹಿತ.

*  ನೆಲ್ಲಿ ಎಲೆ ಅರೆದು ಮೊಸರಿನ ಸಂಗಡ ಸೇವಿಸಿದರೆ ಅದರಿಂದ ಭೇದಿ ನಿಲುಗಡೆಯಾಗುತ್ತದೆ.