ಮನೆ ಸುದ್ದಿ ಜಾಲ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ

ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ

0

ಚೆನ್ನೈ(Chennai): ಶನಿವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿರುವ ಘಟನೆ  ಶನಿವಾರ ಬೆಳಿಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ನಡೆದಿದೆ.

ಸ್ಕೂಟರ್ ನ ಮಾಲೀಕ ಸತೀಶ್ ಅವರು ಕಳೆದ ವರ್ಷ ಒಕಿನಾವಾ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನವನ್ನು ಖರೀದಿಸಿದ್ದರು.

ಶನಿವಾರ ಮುಂಜಾನೆ ಸತೀಶ್ ತಮ್ಮ ಕಚೇರಿಯ ಸಮೀಪ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ಮುಂದಾಗಿದ್ದಾರೆ. ಆಗಲೇ ಸೀಟ್‌ ಕೆಳಗೆ ಹೊಗೆ ಹೊರಹೊಮ್ಮುವುದನ್ನು ಗಮನಿಸಿದ್ದಾರೆ. ಅವರು ಸೀಟ್ ಅನ್ನು ಎತ್ತಿದ ಸ್ವಲ್ಪ ಸಮಯದ ನಂತರ, ಬೆಂಕಿ ಆವರಿಸಿಕೊಂಡು ಅವರ ಸ್ಕೂಟರ್ ಸುಟ್ಟುಹೋಗಿದೆ.ಕೂಡಲೇ ಸ್ಥಳೀಯರ ಸಹಾಯದಿಂದ ಸತೀಶ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಆ ವೇಳೆಗಾಗಲೇ ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಹೋಗಿದೆ.