ಮನೆ ಅಪರಾಧ ಆಟೋ-ಬೊಲೆರೋ ಮಧ್ಯೆ ಅಪಘಾತ: 7 ಮಂದಿ ಸಾವು

ಆಟೋ-ಬೊಲೆರೋ ಮಧ್ಯೆ ಅಪಘಾತ: 7 ಮಂದಿ ಸಾವು

0

ಕಾಸ್ಗಂಜ್ (ಉತ್ತರಪ್ರದೇಶ): ಬೊಲೆರೋ ಮತ್ತು ಆಟೋ ನಡುವೆ ಡಿಕ್ಕಿ ಸಂಭವಿಸಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದರಿಯಾಗಂಜ್ ಬಳಿಯ ಬದೌನ್-ಮೈನ್‌ಪುರಿ ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಮೃತ ಕುಟುಂಬಗಳಿಗೆ ಸಿಎಂ ಯೋಗಿ ಸಂತಾಪ ಸೂಚಿಸಿದ್ದಾರೆ.

ವಿವರ: ಫರೂಖಾಬಾದ್ ಪ್ರದೇಶದ 10ಕ್ಕೂ ಹೆಚ್ಚು ಭಕ್ತರು ಆಟೋ ಮೂಲಕ ಭೋಲೆ ಬಾಬಾನ ದರ್ಶನಕ್ಕೆ ತೆರಳುತ್ತಿದ್ದರು. ಬೊಲೆರೋದಲ್ಲಿ ಏಳು ಪ್ರಯಾಣಿಕರು ಫರೂಖಾಬಾದ್​ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಶೋಕಪುರ ಗ್ರಾಮದ ಬಳಿ ಎರಡು ವಾಹನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಬೊಲೆರೋ ಚಾಲಕ ಸೇರಿದಂತೆ ಆಟೋದಲ್ಲಿದ್ದ ಆರು ಭಕ್ತಾದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪಟಿಯಾಲಿ ತಹಸೀಲ್ದಾರ್ ರಾಜೀವ್ ನಿಗಮ್ ಖಚಿತಪಡಿಸಿದ್ದಾರೆ.

ಎರಡೂ ವಾಹನಗಳಲಿದ್ದ ಪ್ರಯಾಣಿಕರು ಫರೂಕಾಬಾದ್‌ನ ನಿವಾಸಿಗಳು. ಆಟೋ ಮತ್ತು ಬೊಲೆರೋ ವಾಹನಗಳು ಫರೂಕಾಬಾದ್ ನೋಂದಣಿ ಹೊಂದಿವೆ. ಅಪಘಾತವಾದ ತಕ್ಷಣ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯಕ್ಕೆ ಸಾಥ್ ಕೊಟ್ಟರು.