ಮನೆ ಅಪರಾಧ ಭೀಕರ ರಸ್ತೆ ಅಪಘಾತ: ಅಜ್ಜ -ಮೊಮ್ಮಗ ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತ: ಅಜ್ಜ -ಮೊಮ್ಮಗ ಸ್ಥಳದಲ್ಲೇ ಸಾವು

0

ರಾಮನಗರ: ಟಿಪ್ಪರ್ ಢಿಕ್ಕಿಯಾಗಿ ಟಿವಿಎಸ್ ಮೊಪೆಡ್ ನಲ್ಲಿದ್ದ ಅಜ್ಜ -ಮೊಮ್ಮಗ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವನಪುರ ಗೇಟ್ ಬಳಿ ಎಕ್ಸ್ ಪ್ರೆಸ್ ಹೈವೆಯ ಸರ್ವಿಸ್ ರಸ್ತೆಯಲ್ಲಿ ಶನಿವಾರ ಸಂಭವಿಸಿದೆ.

Join Our Whatsapp Group

ಕನಕಪುರ ಮೂಲದ ಚಿಕ್ಕಣ್ಣ (55) ಮತ್ತು ಯಶಸ್ಸ್ (10) ಮೃತ ದುರ್ದೈವಿಗಳು.

ರಾಮನಗರದಿಂದ ಬಿಡದಿಯ ಮಗನ ಮನೆಗೆ ಮೊಮ್ಮಗನನ್ನು ಕರೆದುಕೊಂಡು ಹೋಗುವಾಗ ಟಿಪ್ಪರ್ ಢಿಕ್ಕಿಯಾಗಿದ್ದು ಮೊಪೆಡ್ ನಿಂದ ಕೆಳಗೆ ಬಿದ್ದ ಅಜ್ಜ ಮತ್ತು ಮೊಮ್ಮಗನ ತಲೆ ಮೇಲೆ ಟಿಪ್ಪರ್ ಚಕ್ರ ಹರಿದಿದೆ.

ಸ್ಥಳಕ್ಕೆ ರಾಮನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಮನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.