ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಒಬ್ಬ ಸಿನಿಮಾ ನಟಿ ತನ್ನ ಗಂಡನನ್ನು ವಿಮಾನದಲ್ಲಿ ಎಲ್ಲಿಗೋ ಕಳಿಸಿ ಕೊಡ್ತಾ ಇದಾಳಲ್ಲ
ಇನ್ನೊಬ್ಬ ಅವಳ ಗಂಡ ಸ್ವಾಮಿಯಾಗಲು ಹೋಗುತ್ತಿದ್ದಾರಂತೆ ಅವರನ್ನು ಹಷಿಕೇಶಕ್ಕೆ ಬಿಟ್ಟು ಬಿಟ್ಟು ಕಾಶ್ಮೀರಕ್ಕೆ ಷೂಟಿಂಗ್ ಗೆ ಹೋಗ್ತಾಳಂತೆ.

Join Our Whatsapp Group

ದಂತವೈದ್ಯನ ಮಗಳು : ಏನ್ರೀ ಇವತ್ತು ನಮ್ಮ ಮನೆಗೆ ಬಂದು ನಮ್ಮ ಮದುವೆ ವಿಷಯ ನಮ್ಮ ತಂದೆ ಹತ್ತಿರ ಮಾತಾಡ್ತೀರಾ?
ಪ್ರೇಮಿ ಯುವಕ : ಬೇಡ ಬೇಡ. ನಿನ್ನೆ ತಾನೆ ನಿಮ್ಮ ತಂದೆ ನನ್ನ ಒಂದು ಹಲ್ಲು ಕಿತ್ತಿದ್ದಾರೆ.
ಹಳ್ಳಿ : ಡಾಕ್ಟರ್ ರೀ ಕಾಂಪೌಂಡರ್, ನಾಳೆ ಆಸ್ಪತ್ರೆಗೆ ಸ್ವಲ್ಪ ಬೇಗನೆ ಬಂದು ಮಾಮೂಲು ವಿಕ್ಚರ್ ಗಳನ್ನೆಲ್ಲ ಸಿದ್ಧಮಾಡಿಡಿ.
ಕಂಪೌಂಡರ್ :ಅದೇನು ಸಾರ್?
ಹಳ್ಳಿ ಡಾಕ್ಟರ್ : ಇವತ್ತು ಜಾಗೀರದಾರರ ಮನೇಲಿ ನರಸಿಂಹ ಜಯಂತಿ ಸಂತರ್ಪಣೆ ಅಲ್ವೇನ್ರಿ ಅಂದ ಮೇಲೆ ನಾಳೆ ಆಸ್ಪತ್ರೆಗೆ ಜನ ಜಾಸ್ತಿ ಅಲ್ವೆ?’

***

ಶಾಲೆಗೆ ಒಬ್ಬಳು ಹೊಸ ಹುಡುಗಿ ಬಂದಳು.ಗುರುಗಳು ನೀನು ಯಾರ ಮಗಳು ಎಂದು ಕೇಳಿದರು ನಾನು ವಿಶ್ವ ಸುಂದರಿಯ ಮಗಳು ಎಂದಳು ಹುಡುಗಿ. ಗುರುಗಳು ಸುಳ್ಳೇಕೆ ಹೇಳುತ್ತಿದ್ದಿ ಎಂದು ಗದರಿಸಿದರು.ಇಲ್ಲ ಸುಳ್ಳು ಹೇಳುತ್ತಿಲ್ಲ.ನಮ್ಮ ತಂದೆಯ ಹೆಸರು ವಿಶ್ವ ತಾಯಿಯ ಹೆಸರು ಸುಂದರಿ ಎಂದಳು ಹುಡುಗಿ.