ರಾಜ : ಅಲ್ವೇ ಇದೇನೇ ಅನ್ನದಲ್ಲಿ ಇಷ್ಟು ಕಲ್ಲು ಸಿಕ್ತಾ ಇದೆ.ನಿನಗೆ ಒಂದಲ್ಲ ಅಂತ ಎರಡು ಕಣ್ಣುಗಳಿವೆ.ಕಣ್ಣು ತೆಗೆಯಲಾಗಲಿಲ್ವೇ?
ರಾಣಿ : ನಂದು ಹಾಗಿರಲಿ, ದೇವರು ನಿಮಗೆ ಒಂದಲ್ಲ ಅಂತ 32 ಹಲ್ಲು ಕೊಟ್ಟಿದ್ದಾನೆ. ಒಂದು ಸಣ್ಣ ಕಲ್ಲು ಆಗಿಯೋಕೆ ಆಗೋದಿಲ್ವೇನು?
ಜ್ಯೋತಿ : ರೀ ಇವತ್ತು ಯಾವ ದಿನ ಗೊತ್ತಾ
ವಾಸು : ಗೊತ್ತಿದೆ ಏನೇ? ಶುಕ್ರವಾರ
ಜ್ಯೋತಿ : ಅದಲ್ರೀ ನಾನು ಹೇಳ್ತಾ ಇರೋದು ಇಂದಿಗೆ ನಾವು ಮದುವೆಯಾಗಿ ಒಂದು ವರ್ಷವಾಯಿತು ಈ ವಾರ್ಷಿಕೋತ್ಸವವನ್ನು ಹೇಗೆ ಆಚರಿಸೋಣಾ?
ವಾಸು : ಅದಕ್ಕೆನಂತೆ,ಒಂದೈದು ನಿಮಿಷ ಮೌನಾಚರಣೆ ಮಾಡಿದ್ದರಾಯ್ತು.
****
ಶಿಕ್ಷಕ : ಇಂಡಿಯನ್ ಟೀಮ್ ನವರು ಆಡುವ ಎಲ್ಲಾ ಕ್ರಿಕೆಟ್ ಮ್ಯಾಚ್ ಗಳನ್ನು ನಿಮ್ಮ ಹುಡುಗ ನೋಡ್ತಾನಾ
ಅಪ್ಪ : ಹೌದು ಒಂದು ಮ್ಯಾಚೂ ಬಿಡೋಲ್ಲ ಹಾಗೆ ನೋಡ್ತಾನೆ ಏಕೆ
ಶಿಕ್ಷಕ : ಯಾಕೋ ಇಲ್ಲಾ ಶಾಲೆಯಲ್ಲಿ ಎಲ್ಲಾ ಟೆಸ್ಟುಗಳನ್ನು ಚೆನ್ನಾಗೇ ಮಾಡ್ತಾನೆ.ಆದರೆ ಫೈನಲ್ ಟೆಸ್ಟಿನಲ್ಲಿ ಮಾತ್ರ ಫೇಲ್ ಆಗ್ತಾನೆ.