ಮನೆ ಆರೋಗ್ಯ ಬ್ರೆಸ್ಟ್( ಸ್ತನ) ಕ್ಯಾನ್ಸರ್

ಬ್ರೆಸ್ಟ್( ಸ್ತನ) ಕ್ಯಾನ್ಸರ್

0

 ಸ್ತನಗಳ ಸ್ವಯಂಪರೀಕ್ಷೆ

Join Our Whatsapp Group

 ಬ್ರೆಸ್ಟ್ ಸೆಲ್ಫ್ ಎಕ್ಸಾಮಿನೇಷನ್ ಈ ಕೆಳಗಿನ ರೀತಿಯಲ್ಲಿ ಮಾಡಬೇಕು.

       ದೊಡ್ಡ ಕನ್ನಡಿಯ ಮುಂದೆ ಈ ಕೆಳಗಿನ ಭಂಗಿಗಳಲ್ಲಿ ನಿಂತುಕೊಂಡು ಬದಲಾವಣೆಗಳೇನಾದರೂ ಕಂಡುಬರುತ್ತವೆಯೇ ಪರೀಕ್ಷೆ ಮಾಡಿಕೊಳ್ಳಬೇಕು.

1. ಚಿತ್ರ ಒಂದರಲ್ಲಿ ತೋರಿಸಿದಂತೆ ಕೈಗಳನ್ನು ಪಕ್ಕಕ್ಕೆ ಇಳಿಬಿಡಿ

2. ಚಿತ್ರ ಎರಡರಲ್ಲಿ ತೋರಿಸಿದಂತೆ ಕೈಗಳನ್ನು ಮೇಲೆತ್ತಿ.

3. 3 ರಲ್ಲಿ ತೋರಿಸಿದಂತೆ ಕೈಗಳನ್ನು ಸೊಂಟದ ಮೇಲಿ ರಿಸಿ.4.  ನಂತರ ಹೆಬ್ಬೆಟ್ಟು ತೋರು ಬೆರಳುಗಳಿಂದ ಮೊಲೆ ತೊಟ್ಟನ್ನು  ಅದುಮಿ ಅಸಾಧಾರಣ ಸ್ರಾವವೇನಾದರೂ ಹಳದಿ ಹಸಿರಾಗಿಯೂ ರಕ್ತದಿಂದ ಕೂಡಿ ಯಾಗಲೀ, ಬಿಳುಪಾಗಿಯಾಗಲಿ ಹೊರ ಬಿಳುತ್ತಿದಯೇನೋ ನೋಡಬೇಕು.

5. ಈಗ ಹಾಸಿಗೆಯ ಮೇಲೆ ಮಲಗಿ ಭುಜದ ಕೆಳಗೆ ಒಂದು ದಿಂಬನ್ನಿಟ್ಟುಕೊಂಡುಮ್ಮ ನಿಟ್ಟುಕೊಂಡು ಪರೀಕ್ಷೆ ಮಾಡಿಕೊಳ್ಳಬೇಕು. ಬಲ ಸ್ತನವನ್ನು ಪರೀಕ್ಷೆಸಿಕೊಳ್ಳುವಾಗ ದಿಂಬನ್ನು ಬಲ ಭುಜದ ಹಿಂಭಾಗಕ್ಕಿಟ್ಟುಕೊಂಡು ತಲೆಯ ಕೆಳಕ್ಕೆ ಬಲಗೈನಿಟ್ಟುಕೊಳ್ಳಬೇಕು.

ನಂತರ ಎಡಗೈನ ಬೆರಳು ತುದಿಗಳಿಂದ ಇಡೀ, ಸ್ತನವನ್ನು ಮೃದುವಾಗಿ ವೃತ್ತಾಕಾರದ ಚಲನೆ ಯೊಂದಿಗೆ ಅದುಮುತ್ತಾ ಒಳಗಡೆ ಎಲ್ಲಾದರೂ ನಿಪ್ಪಲ್ ಕೆಳಗಾಗಲೀ, ಕಂಕುಳ ಬಳಿಯಾಗಲಿ ಗಡ್ಡೆಯಂತಹದು ಊತದಂತಹದು ಇಲ್ಲವೇ ಚರ್ಮ ದಪ್ಪವಾಗಿರುವುದು ಕೈಗೆ ಸಿಗುತ್ತದೆಯೇ ನೋಡಬೇಕು.

     ಇದೇ ರೀತಿಯಾಗಿ ಎಡಸ್ತನವನ್ನು ಪರೀಕ್ಷಿಸಿ ಮಾಡಬೇಕು.

    ಸ್ತನ ಪರೀಕ್ಷೆಯನ್ನು ಸ್ವಂತ ಸಕ್ರಮವಾಗಿ ಮಾಡಲು, ಒಂದು ಬಾರಿ ಫ್ಯಾಮಿಲಿ ಡಾಕ್ಟರಿಂದ ಅದನ್ನು ಹೇಗೆ ಮಾಡಬೇಕೆಂಬುದನ್ನು ತಿಳಿಯುವುದು ಒಳ್ಳೆಯದು. ಇಲ್ಲವೇ ಮನೆಯಲ್ಲಿ ಯಾರಾದರೂ ಹಿರಿಯರ ಮಹಿಳೆಯರಿಗೆ ತಿಳಿದಿದ್ದರೆ ಅವರಿಂದ ಕಲಿಯಬಹುದು.

    ಬಹು ಮೂಲಗಳಲ್ಲಿ ಕಂಕುಳ ಊತ ಅಥವಾ ಗಡ್ಡೆಯಂತಹುದು ಇರುವುದೇ ಎಂದು ಪರೀಕ್ಷಿಸಲು ಚಿತ್ರ ಏಳರಲ್ಲಿ  ತೋರಿಸಿರುವಂತೆ ಕೈಗಳನ್ನು ಶರೀರದ ಪಕ್ಕ ಅನಿಸಿ ಪರೀಕ್ಷೆ ಮಾಡಿಕೊಳ್ಳಬೇಕು.

ಲಕ್ಷಣಗಳು 

 ಬೆಸ್ಟ್ ಕ್ಯಾನ್ಸಲ್ ಲಕ್ಷಣಗಳು ಈ ಕೆಳಗಿನಂತಿರುತ್ತವೆ.

1. ಸ್ತನಗಳ ಒಳಗಾಗಲಿ, ಕಂಕುಳಲ್ಲಾಗಲಿ ಗಡ್ಡೆ ಅಥವಾ ಊತದಂತಹುದು ಇರುತ್ತದೆ.

2. ಮೊಲೆ ತೊಟ್ಟುಗಳು ಒಳಗೆ ತಿರುಗಿರುತ್ತವೆ,

3. ಮೊಲೆ ತೊಟ್ಟುಗಳ ಚರ್ಮ ದಪ್ಪದಾಗಾಗುವುದು ಇಲ್ಲವೇ ಸುಕ್ಕಾಗುವುದು.

4. ಸ್ಥಾನಗಳ ಭಾರ ಹೆಚ್ಚುವುದು.

5. ಮೂಲೆ ತೊಟ್ಟುಗಳಿಂದ ರಕ್ತದಿಂದ ಕೂಡಿದ ದ್ರವ ಸವಿಸಲ್ಪಟ್ಟಂತ್ತಿರುವುದು.

6. ಸ್ಥಾನಗಳ ಗಾತ್ರ, ಆಕಾರಗಳಲ್ಲಿ ಬದಲಾವಣೆ.

7. ಸ್ಥಾನಗಳ ಬಳಿ ಯಾವುದಾದರೂ ಗುಣವಾಗದ ಹುಣ್ಣು.

 ಮೇಲಿನ ಲಕ್ಷಣಗಳಲ್ಲಿ ಯಾವುದೊಂದು  ಕಾಣಿಸಿದರೂ, ಆ ಮಹಿಳೆ ಡಾಕ್ಟರ್ ಸಲಹೆ ಪಡೆಯಬೇಕು. ಡಾಕ್ಟರ್ ಆ ಗಡ್ಡೆಯ ಬಳಿ Mammographyಯನ್ನಾಗಲಿ, Sonographyಯನ್ನಾಗಲಿ, Fine Needle Aspiration Biopsyಯನ್ನಾಗಲಿ ಮಾಡಿಸಿ, ಪೂರ್ವ ನಿರ್ಣಯಕ್ಕಾಗಿ ಓಪನ್ ಬಯಾಪ್ಸಿ ಮಾಡಿಸುತ್ತಾರೆ

      ಟ್ರೀಟ್ ಮೆಂಟ್ ಪೂರ್ಣಗೊಂಡ ನಂತರ,ರೋಗಿ ಮತ್ತೆ 10 ವರ್ಷಗಳವರೆಗೆ ವ್ಯಾಧಿ, ಪುನರಾರಂಭವಾಗಿಲ್ಲವೆಂದು ತೀರ್ಮಾನಿಸಿಕೊಳ್ಳಲು, ರೆಗ್ಯುಲರ್ ಚೆಕಪ್ ಗಳನ್ನು ಮಾಡಿಸಿಕೊಳ್ಳುತ್ತಿರಬೇಕು. ಹತ್ತು ವರ್ಷದವರೆಗೆ ಮತ್ತೆ ಬರೆದಿದ್ದರೆ,  ಬ್ರೆಸ್ಟ್ ಕ್ಯಾನ್ಸರ್ ಪೂರ್ತಿಯಾಗಿ ಗುಣವಾಗಿದೆಯೆಂದು ತೀರ್ಮಾನಿಸುತ್ತಾರೆ.

ಕಾರಣಗಳು

   1.ಸ್ತನ ಕ್ಯಾನ್ಸರ್ ಗೆ ಪ್ರತ್ಯೇಕ ಕಾರಣಗಳೇನು ಕಾಣಿಸವು ಈ ಕೆಲವು ಜಾಗೃತೆಗಳನ್ನು ತೆಗೆದುಕೊಳ್ಳುವುದರಿಂದ, ಅಪಾಯದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು.

2. 20 ವರ್ಷಗಳ ನಂತರ ವಿವಾಹಿತ ಸ್ತ್ರೀಯರು ಗರ್ಭ ನಿರೋಧಕ ಕ್ರಮಗಳನ್ನು ದೀರ್ಘಕಾಲ ಅನುಸರಿಸಿತ್ತಿರುವುದು ಒಳ್ಳೆಯದು.

3. 35 ವರ್ಷಗಳ ನಂತರ ಮೊದಲ ಮಗು ಹುಟ್ಟಿದ ಸ್ತ್ರೀಗಿಂತ 25 ವರ್ಷಗಳ ಒಳಗೆ ಮೂಗು ಪಡೆದ ಸ್ತ್ರೀಗೆ, ಬ್ರೆಸ್ಟ್ ಕ್ಯಾನ್ಸರ್ ಬರುವ ಅವಕಾಶಗಳು  ಮೂರನೆಯ ಒಂದು ಭಾಗ ಮಾತ್ರವಿರುತ್ತದೆ ಆದ್ದರಿಂದ ಈ ವಿಷಯದಲ್ಲಿ ಹೆಂಗಸರು ಎಷ್ಟು ಬೇಗ ತಾಯಿಯಾದರೆ ಅಷ್ಟು ಒಳ್ಳೆಯದು.

4. ಬಾಣಂತಿಯರು ತಮ್ಮ ಮಗುವಿಗೆ ತಾವೇ, ಹಾಲು ಕೊಡುವುದನ್ನು ರೂಢಿ ಮಾಡಿಕೊಳ್ಳಬೇಕು. ಒಂದು ವೇಳೆ ಮಗು ಮರಣಿಸಿದಲ್ಲಿ  ಆಗಾಗ ಹಾಲನ್ನು ಹಿಂಡಿ ತೆಗೆಯುವುದು ಒಳ್ಳೆಯದು.

5. ಹಾರ್ಮೋನ್ ಗಳಲ್ಲಿರುವ ಗರ್ವ ನಿರೋಧಕ ಮಾತ್ರೆಗಳನ್ನು ಹೆಚ್ಚು ಕಾಲ ಬಳಸಬಾರದು

6. ಕೊಬ್ಬು ಹೆಚ್ಚಾಗಿರುವ ಆಹಾರಗಳನ್ನು ಕಡಿಮೆ ಮಾಡಬೇಕು. ಹಾಗೆಯೇ ದೇಹದ ಭಾರವನ್ನೂ ಕಡಿಮೆ ಮಾಡಿಕೊಳ್ಳಬೇಕು.

7. ಇಂತಹ ಜಾಗರೂತೆಗಳನ್ನು ವಹಿಸಿದರೆ,ಸ್ವಲ್ಪ ಮಟ್ಟಿಗಾದರೂ ಬ್ರೀಸ್ಟ್  ಕ್ಯಾನ್ಸರ್ ಅಪಾಯದಿಂದ ಪಾರಾಗಬಹುದು.