ಮನೆ ಅಪರಾಧ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ, ಓರ್ವನ ಬಂಧನ: ಸಂತ್ರಸ್ತೆಯ ರಕ್ಷಣೆ

ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ, ಓರ್ವನ ಬಂಧನ: ಸಂತ್ರಸ್ತೆಯ ರಕ್ಷಣೆ

0

ಉಡುಪಿ: ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ವ್ಯಕ್ತಿಯೊಬ್ಬರನ್ನು ಬಂಧಿಸಿರುವ ಘಟನೆ ಕಾರ್ಕಳದ ಸಾಣೂರು ಗ್ರಾಮದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Join Our Whatsapp Group

ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪ್ರಮೀಳಾ ವಿಜಯ್‌ ಕುಮಾರ್‌ ಎಂಬಾಕೆಯ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿ, ಭರತ್‌ ಎಂಬಾತನನ್ನು ಬಂಧಿಸಿರುವುದಾಗಿ ವರದಿ ವಿವರಿಸಿದೆ.

ಈ ಸಂದರ್ಭದಲ್ಲಿ ಓರ್ವ ಸಂತ್ರಸ್ಥೆ ಮಹಿಳೆಯನ್ನು ರಕ್ಷಿಸಿದ್ದು, ಆಪಾದಿತರಾದ ಭರತ್‌ ಕುಮಾರ್‌, ಮನೆಯ ಮಾಲೀಕರಾದ ಪ್ರಮೀಳಾ ವಿಜಯ್‌ ಕುಮಾರ್‌ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿ ತಿಳಿಸಿದೆ.