ಮನೆ ಮನರಂಜನೆ “ಜೈಲರ್‌’: ನಟ ಶಿವರಾಜ್‌ ಕುಮಾರ್‌ ನಟನೆಗೆ ತಮಿಳು ಅಭಿಮಾನಿಗಳು ಫಿದಾ

“ಜೈಲರ್‌’: ನಟ ಶಿವರಾಜ್‌ ಕುಮಾರ್‌ ನಟನೆಗೆ ತಮಿಳು ಅಭಿಮಾನಿಗಳು ಫಿದಾ

0

ನಟ ಶಿವರಾಜ್‌ ಕುಮಾರ್‌ ಅವರ ಖಡಕ್‌ ಲುಕ್‌ ನೋಡಿ ತಮಿಳು ಅಭಿಮಾನಿಗಳು ಫಿದಾ ಆಗಿದ್ದಾರೆ. “ಇವರನ್ನು ಹೆಚ್ಚೆಚ್ಚು ತಮಿಳು ಸಿನಿಮಾಗಳಲ್ಲಿ ಬಳಸಿಕೊಳ್ಳಿ’ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಕಾರಣವಾಗಿರುವುದು “ಜೈಲರ್‌’ ಚಿತ್ರ. ರಜನಿಕಾಂತ್‌ ನಟನೆಯ “ಜೈಲರ್‌’ ಚಿತ್ರ ಆ.10ರಂದು ತೆರೆಕಂಡಿದೆ. ಈ ಚಿತ್ರದಲ್ಲಿ ಶಿವಣ್ಣ ಕೂಡಾ ಕೆಲವು ದೃಶ್ಯಗಳಲ್ಲಿ ನಟಿಸಿದ್ದು, ಖಡಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರ ಈ ಲುಕ್‌ ನೋಡಿ ತಮಿಳು ಫ್ಯಾನ್ಸ್‌ ಕೂಡಾ ಫಿದಾ ಆಗಿದ್ದು, ಮುಂದೆ ಮತ್ತಷ್ಟು ತಮಿಳು ಸಿನಿಮಾಗಳಲ್ಲಿ ಶಿವಣ್ಣ ಅವರನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು, ಶಿವಣ್ಣ “ಜೈಲರ್‌’ ಅಲ್ಲದೇ “ಕ್ಯಾಪ್ಟನ್‌ ಮಿಲ್ಲರ್‌’ ಚಿತ್ರದಲ್ಲೂ ನಟಿಸಿದ್ದು ಆ ಚಿತ್ರ ಕೂಡಾ ಬಿಡುಗಡೆಯ ಹಂತಕ್ಕೆ ಬಂದಿದೆ.

ಹಿಂದಿನ ಲೇಖನಡಿ ಕೆ ಶಿವಕುಮಾರ್ ನನಗಿಂತ ಹೆಚ್ಚು ಕೆಲಸ ಮಾಡುವ ವ್ಯಕ್ತಿ: ಮಾಜಿ ಸಚಿವ ವಿ.ಸೋಮಣ್ಣ.
ಮುಂದಿನ ಲೇಖನದೃಢ ಸಂಕಲ್ಪದಿಂದ ವ್ಯಸನ ಮುಕ್ತರಾಗಬಹುದು: ಸಾಹಿತಿ ಬನ್ನೂರು ರಾಜು