ಮನೆ ಅಪರಾಧ ಚೆಕ್ ದುರುಪಯೋಗ ಆರೋಪ: ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲು

ಚೆಕ್ ದುರುಪಯೋಗ ಆರೋಪ: ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಪ್ರಕರಣ ದಾಖಲು

0

ಮೈಸೂರು: ವ್ಯವಹಾರದ ನಿಮಿತ್ತ ಭದ್ರತೆಗಾಗಿ ನೀಡಿದ್ದ 4.5 ಲಕ್ಷ ರೂ. ಚೆಕ್ ದುರುಪಯೋಗ ಆರೋಪ ಕೇಳಿಬಂದ ಹಿನ್ನೆಲೆ ಪಾಲಿಕೆ ಆರೋಗ್ಯಾಧಿಕಾರಿ ವಿರುದ್ಧ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Our Whatsapp Group

ವ್ಯವಹಾರದ ನಿಮಿತ್ತ ನೀಡಿದ್ದ ಚೆಕ್​ನಲ್ಲಿ 4.5 ಲಕ್ಷ ರೂ. ನಮೂದಿಸಿಕೊಂಡು ಬೌನ್ಸ್​​ಗೆ ಯತ್ನಿಸಲಾಗಿದೆ. ಪಾಲಿಕೆ ಹಿರಿಯ ಆರೋಗ್ಯಾಧಿಕಾರಿ ವೆಂಕಟೇಶ್ ಹಾಗೂ ಹಾಸನ ನಿವಾಸಿ ಕೇಶವಮೂರ್ತಿ ಎಂಬುವರಿಂದ ವಂಚನೆ ಮಾಡಿದ್ದು, ಸರಸ್ವತಿಪುರಂ ನಿವಾಸಿ ಮೀರಾ ಎಂಬುವವರಿಂದ ದೂರು ನೀಡಲಾಗಿದೆ.

ಸದ್ಯ ಇಬ್ಬರ ವಿರುದ್ಧ ವಂಚನೆ ಕೇಸ್​ ದಾಖಲಿಸುವಂತೆ ಮೈಸೂರಿನ ಜೆಎಂಎಫ್​ಸಿ ನ್ಯಾಯಾಲಯದಿಂದ ಸರಸ್ವತಿಪುರಂ ಠಾಣಾ ಪೊಲೀಸರಿಗೆ ಆದೇಶ ನೀಡಲಾಗಿದೆ.

ದೂರು ನೀಡಿರುವ ಮೀರಾ ಎಂಬುವವರು ಸರಸ್ವತಿಪುರಂನಲ್ಲಿ ಅನ್ನಪೂರ್ಣ ಆಫ್ ಸೆಟ್ ಮುದ್ರಣಾಲಯ ಇಟ್ಟುಕೊಂಡಿದ್ದಾರೆ.

ಹಿಂದಿನ ಲೇಖನಬಿಹಾರದ ಮದರಸಾದಲ್ಲಿ ಬಾಂಬ್ ಸ್ಫೋಟ: ಮೌಲ್ವಿ ಸೇರಿ ಇಬ್ಬರಿಗೆ ಗಾಯ
ಮುಂದಿನ ಲೇಖನಕೇಂದ್ರದ ಬರ ಪರಿಹಾರದ ಹಣ ಸಾಲಕ್ಕೆ ಜಮೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಹೆಚ್ ​ಡಿ ಕುಮಾರಸ್ವಾಮಿ ವಾಗ್ದಾಳಿ