ಮನೆ ಅಪರಾಧ ಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ ಯುವತಿಯನ್ನು ರೈಲಿನಿಂದ ಹೊರ ಎಸೆದ ಕಾಮುಕ

ಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ ಯುವತಿಯನ್ನು ರೈಲಿನಿಂದ ಹೊರ ಎಸೆದ ಕಾಮುಕ

0

ಬಂಡಾ(ಉತ್ತರ ಪ್ರದೇಶ)(Uttarpradesh): ಯುವತಿಯ ಮೇಲೆ ಕಾಮುಕನೋರ್ವ ಅತ್ಯಾಚರಕ್ಕೆ ಯತ್ನಿಸಿದ್ದು, ಈ ವೇಳೆ ಯುವತಿ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಯುವತಿಯನ್ನು ರೈಲಿನಿಂದ ಹೊರ ಎಸೆದಿರುವ ಘಟನೆ ಮಧ್ಯಪ್ರದೇಶಧ ರಾಜ್​ನಗದಲ್ಲಿ ನಡೆದಿದೆ.

ಮಧ್ಯಪ್ರದೇಶದ ಛತ್ತರ್​​ಪುರದಿಂದ ಉತ್ತರ ಪ್ರದೇಶದ ಬಂಡಾ ಜಿಲ್ಲೆಗೆ ಆಗಮಿಸುತ್ತಿದ್ದ ಖಜುರಾಹೊ-ಮಹೋಬಾ ಪ್ಯಾಸೆಂಜರ್​ ರೈಲಿನಲ್ಲಿ ಘಟನೆ ನಡೆದಿದ್ದು, ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

25 ವರ್ಷದ ಅವಿವಾಹಿತ ಯುವತಿ ಪ್ರಯಾಣ ಮಾಡ್ತಿದ್ದಳು. ಆಕೆಯ ಪಕ್ಕದಲ್ಲೇ ಕುಳಿತುಕೊಂಡಿದ್ದ ವ್ಯಕ್ತಿ ಆಕೆಗೆ ನಿಂದಿಸಿದ್ದು, ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಈ ವೇಳೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಆತನ ಕೈಗೆ ಕಚ್ಚಿದ್ದಾಳೆ. ಇದರಿಂದ ಆಕ್ರೋಶಗೊಂಡಿರುವ ವ್ಯಕ್ತಿ, ಯುವತಿಯ ಕೂದಲು ಹಿಡಿದು ರೈಲಿನಲ್ಲಿ ಎಳೆದಾಡಿದ್ದು, ನಂತರ ಹೊರಗೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡಿರುವ ಯುವತಿ ಮಧ್ಯಪ್ರದೇಶದ ಖಜುರಾಹೋ ಆಸ್ಪತ್ರೆಗೆ ದಾಖಲಾಗಿದ್ದು, ಜೀವನ್ಮರಣದ ಮಧ್ಯೆ ಹೋರಾಟ ನಡೆಸಿದ್ದಾಳೆ. ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಎಸೆದಿರುವ ರಭಸಕ್ಕೆ ಯುವತಿಯ ದೇಹದಲ್ಲಿನ ಕೆಲ ಮೂಳೆಗಳು ಮುರಿದಿವೆ.

ಘಟನಾ ಸ್ಥಳಕ್ಕೆ ಝಾನ್ಸಿ ರೈಲ್ವೆ ವಿಭಾಗದ ಕಮಿಷನರ್​ ಅಲೋಕ್ ಕುಮಾರ್​ ಭೇಟಿ ನೀಡಿದ್ದಾರೆ. ಈ ವೇಳೆ ಆರೋಪಿಯನ್ನ ಆದಷ್ಟು ಬೇಗ ಬಂಧಿಸುವ ಭರವಸೆ ನೀಡಿದ್ದಾರೆ.

ಹಿಂದಿನ ಲೇಖನಎಂಟು ತಿಂಗಳ ಮಗುವನ್ನು ಹತ್ಯೆಗೈದ ಮಾವ
ಮುಂದಿನ ಲೇಖನಹಿಂದಿ ಹೇರಿಕೆ ವಿರುದ್ಧ ವಾಟಾಳ್ ನಾಗರಾಜ್ ಧರಣಿ