ಮನೆ ಅಪರಾಧ ಮಗನಿಂದಲೇ ತಂದೆಯ ಹತ್ಯೆ: ತಾಯಿಯ ಸಾಥ್

ಮಗನಿಂದಲೇ ತಂದೆಯ ಹತ್ಯೆ: ತಾಯಿಯ ಸಾಥ್

0

ಬೆಂಗಳೂರು:  21 ಗುಂಟೆ ಜಮೀನಿಗಾಗಿ ಮಗನೇ ತಂದೆಯ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಹೊರ ವಲಯದ ಬನ್ನೇರುಘಟ್ಟದಲ್ಲಿ ನಡೆದಿದೆ.

ಕೊರಟಗೆರೆ ಮೂಲದ ಚನ್ನಿಗರಾಯಪ್ಪ ಕೊಲೆಯಾದ ವ್ಯಕ್ತಿ. ಮೃತ ಚನ್ನಿಗರಾಯಪ್ಪ ಎರಡು ಮದುವೆಯಾಗಿದ್ದು, ಆಸ್ತಿ ಹಂಚಿಕೆ ವೇಳೆ ಮಡದಿಯರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಇದೇ ಹಿನ್ನೆಲೆ ಪತ್ನಿ ಯಶೋಧಾ ಮತ್ತು ಮಗ ನಿಖಿಲ್ ಕೊಲೆಗೆ ಸಂಚು ರೂಪಿಸಿದ್ದರು. ಸಂಚಿನಂತೆ ಚನ್ನಿಗರಾಯಪ್ಪನನ್ನು ಅಪಹರಿಸಿ, ಕೈ ಕಾಲು ಕಟ್ಟಿ 22 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ತದನಂತರ ದೇಹವನ್ನು ಗುರುತು ಸಿಗದ ರೀತಿಯಲ್ಲಿ ಸುಟ್ಟು ಪರಾರಿಯಾಗಿದ್ದರು. ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಬನ್ನೇರುಘಟ್ಟ ಪೊಲೀಸರು ಆರೋಪಿಗಳಾದ ಚನ್ನಿಗರಾಯಪ್ಪ ಪತ್ನಿ ಯಶೋಧ , ಮಗ ನಿಖಿಲ್, ಮಂಜುನಾಥ್, ವಿಶ್ವಾಸ್ ನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

ಹಿಂದಿನ ಲೇಖನಸಿಎಂ ಇಬ್ರಾಹಿಂ ಕಾಂಗ್ರೆಸ್ ನಲ್ಲೇ ಉಳಿಯುತ್ತಾರೆ: ತನ್ವೀರ್ ಸೇಠ್
ಮುಂದಿನ ಲೇಖನವಿಷಯದ ಜ್ಞಾನದ ಜೊತೆ ಕೌಶಲ್ಯವೂ ಮುಖ್ಯ: ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್