ಮನೆ ದೇವರ ನಾಮ ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ

0

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ

ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ||

ಕರುಣಸಾಗರ ಹರಿತರುಣಿಯೆ ನೀ ಕೋಟಿ

ತರುಣ ಕಿರಣ ರತ್ನಾಭರಣನಿಟ್ಟು

ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ

ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1||

ಪಂಕಜಾಕ್ಷಿ ಪಂಕಜೋದ್ಭವನ ಜನನಿ

ಪಂಕಜಮುಖಿ ಪಾಲಿಸೆ ಎನ್ನ

ಪಂಕಜನಾಭನ ಅಂಕದಲ್ಲೊಪ್ಪುವ

ಪಂಕಜೆ ನಿನ್ನ ಪಾದಪಂಕಜಕೆರಗುವೆ ||2||

ಮುಗುಳುನಗೆಯ ಮುತ್ತುಗಳು ಜಡಿತ ಕ-

ರ್ಣಗಲ ವಾಲೆಯು ಕದಪಿನಲ್ಲೊ ್ಹಳೆಯೆ

ಬಗೆ ಬಗೆ ಸರ ಬಂಗಾರವನಿಟ್ಟು ಮೂ-

ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ||3||

ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ

ಬ್ಯಾಗ ನೋಡಿ ಪರಮೋತ್ಸವದಿ

ನಾಗಶಯನ ನಾಗಾರಿವಾಹನನ-

ರ್ಧಾಂಗಿ ಎನಿಸಿದಾನಂತ ಮಹಿಮಳೆ ||4||

ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ

ವಾಸವಾಗಿರಲ್ಯತಿ ಪ್ರೇಮದಲಿ

ಈಶ ನಾರದ ಬ್ರಹ್ಮಾಸುರರೊಡೆಯ ಭೀ-

ಮೇಶಕೃಷ್ಣನ ನಿಜ ದಾಸರಿಗ್ವರನೀಹೊ ||5||

ಹಿಂದಿನ ಲೇಖನಭಾರತದ ಸಮಾಜ ಬದಲಾಗಿದೆ; ಲೈಂಗಿಕ ಅಪರಾಧಗಳಲ್ಲಿ ತಪ್ಪಾಗಿ ಸಿಲುಕಿಸುವುದು ಹೆಚ್ಚಿದೆ: ಅಲಾಹಾಬಾದ್ ಹೈಕೋರ್ಟ್
ಮುಂದಿನ ಲೇಖನಮಾನಸಿಕ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಈ ಆಸನಗಳು ಬೆಸ್ಟ್