ಮನೆ ಕಾನೂನು ರಿಜ್ವಾನ್ ಅರ್ಷದ್ ವಿರುದ್ಧದ ಚುನಾವಣಾ ತಕರಾರು ಅರ್ಜಿ ವಜಾ

ರಿಜ್ವಾನ್ ಅರ್ಷದ್ ವಿರುದ್ಧದ ಚುನಾವಣಾ ತಕರಾರು ಅರ್ಜಿ ವಜಾ

0

ಬೆಂಗಳೂರು: ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್  ವಜಾಗೊಳಿಸಿದೆ.

ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಿಂದ ಶಾಸಕರಾಗಿ ರಿಜ್ವಾನ್​ ಅರ್ಷದ್​ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್​​ಗೆ ಸಂಪಂಗಿ ರಾಮನಗರದ ಬಿ.ಲಕ್ಷ್ಮಿದೇವಿ ಎಂಬುವರು ಅರ್ಜಿ ಸಲ್ಲಿಸಿದ್ದರು.

ಅಲ್ಲದೆ ಕಾಂಗ್ರೆಸ್​ ಗ್ಯಾರೆಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಿದೆ. ಇದು ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್​ 123 (1) ಪ್ರಕಾರ ಮತ್ತು ಸೆಕ್ಷನ್​​ 123 (2) ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್​ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವೂದು ಅಪರಾಧವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಶಾಸಕ ರಿಜ್ವಾನ್​ ಅರ್ಷದ್​ ಪರ ವಕೀಲ: ಚುನಾವಣಾ ಪ್ರಣಾಳಿಕೆಯನ್ನು ಅಭ್ಯರ್ಥಿಯ ಅಕ್ರಮವೆಂದು ಪರಿಗಣಿಸಬಾರದು. ಮತ್ತು ಚುನಾವಣಾ ಅಕ್ರಮಕ್ಕೆ ಸಾಕ್ಷ್ಯವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸಬೇಕೆಂದು ರಿಜ್ವಾನ್ ಅರ್ಷದ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದಿಸಿದ್ದರು.

ವಾದ-ಪ್ರತಿವಾದವನ್ನು ಆಲಿಸಿದ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ​ಚುನಾವಣಾ ಅಕ್ರಮಕ್ಕೆ ಪೂರಕ ಸಾಕ್ಷ್ಯ ನೀಡಿಲ್ಲವೆಂದು ಅರ್ಜಿ ವಜಾಗೊಳಿಸಿದೆ.

ಹಿಂದಿನ ಲೇಖನಯಾವುದು ಕಲ್ಪಿತ, ಯಾವುದು ಕಪೋಲ ಕಲ್ಪಿತ ಎಲ್ಲವನ್ನೂ ಹೇಳುವೆ: ಶಿವರಾಮ ಹೆಬ್ಬಾರ್
ಮುಂದಿನ ಲೇಖನಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಏ.೯ರ ವರೆಗೆ ನ್ಯಾಯಾಂಗ ಬಂಧನ