ಚಪಾತಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಕೆಲವೊಮ್ಮೆ ಮನೆಯಲ್ಲಿ ಚಪಾತಿ ಉಳಿಯುತ್ತದೆ. ಈ ಸಂದರ್ಭದಲ್ಲಿ ಚಪಾತಿಯನ್ನು ಬಿಸಾಕದೇ ಮಕ್ಕಳಿಗೆ ಟಿಫನ್ ಅಥವಾ ಲಂಚ್ ಬಾಕ್ಸ್‌ಗೆ ನೂಡಲ್ಸ್ ಮಾಡಿಕೊಡಬಹುದು. ಚಪಾತಿ ನೂಡಲ್ಸ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ಒಂದ್ಸಲ ಇದನ್ನು ಮಾಡಿಕೊಡಿ.
ಬೇಕಾಗುವ ಸಾಮಗ್ರಿಗಳು :
ಚಪಾತಿ – 3 ರಿಂದ 4
ಎಣ್ಣೆ – 1 ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾರೆಟ್ – 1
ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ – 1 ಕಪ್
ಹೆಚ್ಚಿದ ಟೊಮಾಟೊ – 1
ಉಪ್ಪು – ರುಚಿಗೆ ತಕ್ಕಷ್ಟು
ಟೊಮಾಟೊ ಸಾಸ್, ಸೋಯಾ ಸಾಸ್ ಮತ್ತು ಚಿಲ್ಲಿ ಸಾಸ್ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ :
- ಮೊದಲಿಗೆ ಉಳಿದ ಚಪಾತಿಗಳನ್ನು ತೆಗೆದುಕೊಂಡು ಚಾಕುವಿನಿಂದ ನೂಡಲ್ಸ್ ಮಾದರಿಯಲ್ಲಿ ಉದ್ದವಾಗಿ ಮತ್ತು ತಳ್ಳಗೆ ಕತ್ತರಿಸಿಕೊಳ್ಳಿ.
- ನಂತರ ಒಂದು ಪ್ಯಾನ್ ಅಥವಾ ಕಡಾಯಿಯಲ್ಲಿ ಎಣ್ಣೆ ಬಿಸಿಮಾಡಿ.
- ಎಣ್ಣೆ ಕಾದ ಬಳಿಕ ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸಿ ಒಂದು ನಿಮಿಷ ಹುರಿಯಿರಿ.
- ಈಗ ಈರುಳ್ಳಿ, ಕ್ಯಾರಟ್ ಮತ್ತು ಕ್ಯಾಪ್ಸಿಕಂ ಸೇರಿಸಿ ಮಧ್ಯಮ ಉರಿಯಲ್ಲಿ ಎರಡು ಮೂರು ನಿಮಿಷ ಫ್ರೈ ಮಾಡಿ.
- ತರಕಾರಿಗಳು ಸ್ವಲ್ಪ ಮೃದುವಾದ ನಂತರ ಉಪ್ಪು ಹಾಗೂ ಸಾಸ್‌ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಕತ್ತರಿಸಿದ ಚಪಾತಿ ತುಂಡುಗಳನ್ನು ಹಾಕಿ ಎಲ್ಲಾ ಸಾಸ್ ಹಾಗೂ ತರಕಾರಿಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.
- ಎರಡು ನಿಮಿಷಗಳ ಕಾಲ ಹುರಿದರೇ ಬಿಸಿಬಿಸಿ ಚಪಾತಿ ನೂಡಲ್ಸ್ ಸವಿಯಲು ಸಿದ್ಧ.














