ಮನೆ ಸುದ್ದಿ ಜಾಲ ತರಬೇತಿ ವಿಮಾನ ಪತನ: ಪೈಲಟ್, ಟ್ರೈನಿ ಪೈಲಟ್ ದುರ್ಮರಣ

ತರಬೇತಿ ವಿಮಾನ ಪತನ: ಪೈಲಟ್, ಟ್ರೈನಿ ಪೈಲಟ್ ದುರ್ಮರಣ

0

ತೆಲಂಗಾಣ: ತರಬೇತಿ ವಿಮಾನ ಪತನವಾಗಿ ಪೈಲಟ್​ ಮತ್ತು ಟ್ರೈನಿ ಪೈಲಟ್​ ಸಾವನ್ನಪ್ಪಿರುವ ಘಟನೆ ನಲ್ಗೊಂಡ ನಲ್ಗೊಂಡ ಜಿಲ್ಲೆಯ ಪೆದ್ದವೂರ ಮಂಡಲದ ರಾಮಣ್ಣಗುಡೆಂ ತಾಂಡಾದಲ್ಲಿ ಸಂಭವಿಸಿದೆ.

ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಮೃತರ ಕುರಿತ ಮಾಹಿತಿ ಇನ್ನೂ ತಿಳಿದುಬಂದಿಲ್ಲ.

ವಿಮಾನ ಪತನದ ದೃಶ್ಯಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯರೊಬ್ಬರು ‘ನಾವು ಕೃಷಿ ಕೆಲಸದಲ್ಲಿ ತೊಡಗಿದ್ದಾಗ ಸಿಡಿಲು ಬಡಿದಂತೆ ಭಾರಿ ಶಬ್ದ ಕೇಳಿತು. ಏನಾಯಿತು ಎಂದು ನೋಡುತ್ತಿದ್ದಂತೆ ಆ ಸ್ಥಳದಿಂದ ದಟ್ಟವಾದ ಹೊಗೆ ಮತ್ತು ಬೆಂಕಿ ಬರುತ್ತಿರುವುದು ಕಂಡುಬಂತು. ಯಾರ ಜಮೀನಿಗಾದರೂ ಬೆಂಕಿ ಬಿದ್ದಿದೆಯೇ ಎಂಬುದನ್ನು ನೋಡಲು ನಾವು ಸ್ಥಳಕ್ಕೆ ಬಂದೆವು. ಅಲ್ಲಿ ವಿಮಾನವೊಂದು ಹೊತ್ತಿ ಉರಿಯುತ್ತಿತ್ತು. ಕಿರುಚಾಟ ಕೇಳಿಸಿದ್ದು, ಸ್ವಲ್ಪ ಸಮಯದಲ್ಲಿ ಕಿರುಚಾಟ ನಿಂತುಹೋಯಿತು. ಏನು ಮಾಡಬೇಕೆಂದು ಗೊತ್ತಾಗಲಿಲ್ಲ ಎಂದಿದ್ದಾರೆ.

ಹಿಂದಿನ ಲೇಖನಕೋವಿಡ್ ಕಾಲದಲ್ಲಿ ವೈದ್ಯರು, ವಿಜ್ಞಾನಿಗಳೇ ದೇವರಾದರು: ಪ್ರೊ.ಎಸ್.ಅಯ್ಯಪ್ಪನ್
ಮುಂದಿನ ಲೇಖನದಸರಾ ಮಾದರಿಯಲ್ಲಿ ನಂದಿ ಗಿರಿಧಾಮದಲ್ಲಿ ಶಿವೋತ್ಸವ: ಸಚಿವ ಡಾ.ಕೆ.ಸುಧಾಕರ್