ಮನೆ ಅಪರಾಧ ಕೌಟುಂಬಿಕ ಕಲಹ: ಪತ್ನಿ ,ಮಾವನಿಗೆ ಚೂರಿ ಇರಿದು ಪರಾರಿಯಾದ ಪತಿ

ಕೌಟುಂಬಿಕ ಕಲಹ: ಪತ್ನಿ ,ಮಾವನಿಗೆ ಚೂರಿ ಇರಿದು ಪರಾರಿಯಾದ ಪತಿ

0

ಬಂಟ್ವಾಳ: ಕುಟುಂಬದ ಕಲಹದಿಂದಾಗಿ ಪತ್ನಿ ಹಾಗೂ ಮಾವನಿಗೆ ಪತಿ ಚೂರಿಯಿಂದ ಇರಿದು ಪರಾರಿಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ತುಂಬೆ ಜಂಕ್ಷನ್‌’ನಲ್ಲಿ ನಡೆದಿದೆ.

Join Our Whatsapp Group

ಜೂನ್ 15 ರಂದು ರಾತ್ರಿ 10.30 ರ ಸುಮಾರಿಗೆ ತುಂಬೆ ನಿವಾಸಿಗಳಾದ ರಾಜೀವ ಹಾಗೂ ಅವರ ಪುತ್ರಿ ದಿವ್ಯ ಅವರು ಅಟೋ ರಿಕ್ಷಾದಲ್ಲಿ ಮನೆಯಿಂದ ಬಂಟ್ವಾಳ ‌ಕಡೆಗೆ ಆಗಮಿಸುವ ವೇಳೆ ದಿವ್ಯಳ ಗಂಡ ಆರೋಪಿ ಕುಮಾರ ಆಟೋವನ್ನು ತುಂಬೆ ಜಂಕ್ಷನ್’ನಲ್ಲಿ ತಡೆದು , ಚೂರಿ ಹಿಡಿದುಕೊಂಡು ಬಂದು ಪತ್ನಿ ದಿವ್ಯಳಿಗೆ ಇರಿಯಲು ಯತ್ನಿಸಿದ್ದಾನೆ.

ಈ ವೇಳೆ ಬಿಡಿಸಲು ಹೋದ ಮಾವ ರಾಜೀವರಿಗೆ ಚೂರಿಯಿಂದ ಇರಿದಿದ್ದು, ಮೂವರ ಮಧ್ಯೆಯೂ ತಳ್ಳಾಟ ನಡೆದು ರಾಜೀವ ಹಾಗೂ ದಿವ್ಯ ಇಬ್ಬರು ಗಂಭೀರವಾಗಿ ಗಾಯಗೊಂಡು, ತಕ್ಷಣ ತುಂಬೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿರುತ್ತಾರೆ.

ಘಟನೆಯ ಕುರಿತು ಅಟೋ ಚಾಲಕ ಯಶೋಧರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಹಿಂದಿನ ಲೇಖನಪಿಎಸ್ ಐ ಹಗರಣ: ಆಯ್ಕೆಯಾದವರಲ್ಲಿ ಕಳಂಕರಹಿತರಿಗೆ ಮಾತ್ರವೇ ಒಂದು ಪರೀಕ್ಷೆ ನಡೆಸಲು ಸಾಧ್ಯವೇ ಎಂದು ಕೇಳಿದ ಹೈಕೋರ್ಟ್
ಮುಂದಿನ ಲೇಖನಅಧಿವೇಶನದಲ್ಲಿ ಸರ್ಕಾರಿ ವ್ಯಾಜ್ಯಗಳ ನಿರ್ವಹಣಾ ಮಸೂದೆ ಒಳಗೊಂಡು 10 ವಿಧೇಯಕ ಮಂಡನೆ: ಸಚಿವ ಎಚ್‌ ಕೆ ಪಾಟೀಲ್‌