ಮನೆ ಅಪರಾಧ ಕೌಟುಂಬಿಕ ಕಲಹ: ಅಳಿಯನಿಂದಲೇ ಅತ್ತೆಯ ಹತ್ಯೆ

ಕೌಟುಂಬಿಕ ಕಲಹ: ಅಳಿಯನಿಂದಲೇ ಅತ್ತೆಯ ಹತ್ಯೆ

0

ಬೆಂಗಳೂರು: ಕೌಟುಂಬಿಕ ಕಲಹದಲ್ಲಿ ಅಳಿಯನಿಂದಲೇ ಅತ್ತೆ ಕೊಲೆಯಾಗಿರುವ ಘಟನೆ ಬೆಂಗಳೂರಿನ ಕೆಂಗೇರಿಯ ಬೃಂದಾವನ ಲೇಔಟ್ ನಲ್ಲಿ ನಡೆದಿದೆ.

ಇಳವರಸಿ(48) ಹತ್ಯೆಯಾದವರು.

ದಿವಾಕರ್ ಎಂಬುವವನೇ ತನ್ನ ಅತ್ತೆ ಇಳವರಸಿಯನ್ನ ಹತ್ಯೆಗೈದಿದ್ದಾನೆ.

ದಿವಾಕರ್ ತನ್ನ ಪತ್ನಿಯ ಜೊತೆ ಜಗಳ ತೆಗೆದು ಮಗುವನ್ನು ಕರೆದೊಯ್ದಿದ್ದ. ನಂತರ ಮೊಮ್ಮಗನನ್ನು ಕರೆ ತರಲು ಅತ್ತೆ ಇಳವರಸಿ ಅಳಿಯನ ಮನೆಗೆ ತೆರಳಿದ್ದು, ಈ ವೇಳೆ ಅಳಿಯ ದಿವಾಕರ್ ಚಾಕುವಿನಿಂದ ಇರಿದು ಅತ್ತೆಯನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ.

ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಹಿಂದಿನ ಲೇಖನಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಭ್ರಷ್ಟಾಚಾರ ಮುಕ್ತ ಆಡಳಿತ: ಸಚಿವ ಸುಧಾಕರ್
ಮುಂದಿನ ಲೇಖನಅಗ್ನಿಪಥ್ ಯೋಜನೆ ಕುರಿತು ಸೋಮವಾರ ತೀರ್ಪು ಪ್ರಕಟಿಸಲಿರುವ ದೆಹಲಿ ಹೈಕೋರ್ಟ್