ಮಂಡ್ಯ: ಗಾಂಧಿನಗರ ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನೂತನವಾಗಿ ಜವರೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಜಯಶೀಲ ಅವರು ಆಯ್ಕೆಯಾದರು.
ನಿರ್ದೇಶಕ ಸ್ಥಾನಕ್ಕೆ ಶಿವಣ್ಣ, ಕೃಷ್ಣ, ರವಿ, ಪ್ರಶಾಂತ್, ವೆಂಕಟೇಶ್, ಚಂದನ್, ಸತ್ಯ, ಮಮತಾ, ಗಿರೀಶ್ ಅವರು ಆಯ್ಕೆಯಾದರು. ಆಯ್ಕೆಯಾದ ಎಲ್ಲರಿಗೂ ಭಗವದ್ಗೀತೆ ಕೃತಿ ಕೊಟ್ಟು ಅಭಿನಂದಿಸಲಾಯಿತು. ನಗರಸಭೆ ಮಾಜಿ ಸದಸ್ಯ ಶಿವಕುಮಾರ್ ಕೆಂಪಯ್ಯ, ಸಂಘದ ಮುಖ್ಯ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ನವೀನ್, ಮುಖಂಡರಾದ ರಾಘವೇಂದ್ರ, ಶಿವು ಭಾಗವಹಿಸಿದ್ದರು.