ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಇದೇ ವೇಳೆ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕತ್ವವನ್ನು ಬಯಲು ಮಾಡಿದ್ದಾರೆ. ಶಶಿ ತರೂರ್ ಬರೆದ ಲೇಖನದಲ್ಲಿ ಮೋದಿ ನಾಯಕತ್ವ, ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಗುತ್ತಿರುವ ಮನ್ನಣೆಯನ್ನು ಹೊಗಳಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿಗೆ ಜೊತೆಯಾಗಿ ನಿಲ್ಲಬೇಕಿದೆ ಎಂದು ಶಶಿ ತರೂರ್ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹಾಗೂ ರಾಹುಲ್ ಕಾಂಧಿ ನಾಯಕತ್ವ ಕುರಿತು ಶಶಿ ತರೂರ್ ಕೆಲ ಪ್ರಶ್ನೆಗಳನ್ನು ಎತ್ತಿತ್ತಿದ್ದಾರೆ.
ಕಾಂಗ್ರೆಸ್ ನಾಯಕತ್ವ ಬದಲಾಗಬೇಕು
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿದೆ. ತಿರುವನಂತಪುರಂ ಸಂಸದ ಶಶಿ ತರೂರ್ ಪಕ್ಷದ ನಾಯಕತ್ವವನ್ನ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಗೆಲ್ಲಬೇಕಾದ್ರೆ ಬದಲಾವಣೆ ಅನಿವಾರ್ಯ ಅಂತ ಟ್ವೀಟ್ ಮಾಡಿದ್ದಾರೆ. ಚುನಾವಣಾ ಸೋಲು ಕಾಂಗ್ರೆಸ್‌ನಲ್ಲಿ ನಂಬಿಕೆ ಇಟ್ಟವರೆಲ್ಲರಿಗೂ ನೋವು ತಂದಿದೆ ಅಂತ ತರೂರ್ ಹೇಳಿದ್ದಾರೆ. ದೇಶಕ್ಕೆ ಸ್ಪೂರ್ತಿ ತುಂಬುವ ಪಾಸಿಟಿವ್ ಅಜೆಂಡಾ ಬೇಕು ಅಂತ ಕಾಂಗ್ರೆಸ್ ಅರ್ಥ ಮಾಡ್ಕೋಬೇಕು ಅಂತಲೂ ಹೇಳಿದ್ದಾರೆ. ಪಕ್ಷದ ನಾಯಕತ್ವ ಬದಲಾವಣೆ ಆಗಬೇಕು ಅಂತ ತರೂರ್ ಪರೋಕ್ಷವಾಗಿ ಹೇಳಿದ್ದಾರೆ.
ಇದಕ್ಕೂ ಮೊದಲು ಹಿಂದೂ ಮಾಧ್ಯಮದಲ್ಲಿ ಲೇಖನ ಬರೆದ ಶಶಿ ತರೂರ್, ಪ್ರಧಾನಿ ಮೋದಿ ನಾಯಕತ್ವವನ್ನು ಹೊಗಳುವ ಮೂಲಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ಬದಲಾಗಬೇಕಿದೆ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಾಯಕತ್ವ ಮಾಡುತ್ತಿರುವ ಪ್ರಮುಖ ತಪ್ಪುಗಳ ಕುರಿತು ಶಶಿ ತರೂರ್ ಬೆಳಕು ಚೆಲ್ಲಿದ್ದಾರೆ.
ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಪ್ರಮುಖ ಶಕ್ತಿಯಾಗಿ ಬೆಳೆದಿದ್ದಾರೆ. ಮೋದಿ ಶಕ್ತಿ, ಚೈತನ್ಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ರೀತಿಯಿಂದ ಜಗತ್ತೇ ಮಚ್ಚಿಕೊಂಡಿದೆ. ಜಾಗತಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾರತಕ್ಕೆ ಪ್ರಮುಖ ಶಕ್ತಿಯಾಗಿದೆ. ಮೋದಿಗೆ ಉತ್ತಮ ಬೆಂಬಲ ನೀಡಬೇಕು ಎಂದು ಶಶಿ ತರೂರ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಆಪರೇಶನ್ ಸಿಂದೂರ್ ಬಳಿಕ ಭಾರತ ಒಂದೇ ಧ್ವನಿಯಿಂದ ವಿಶ್ವದ ಮುಂದೆ ಪಾಕಿಸ್ತಾನ ನಾಟಕ ಬಯಲು ಮಾಡಿತ್ತು. ಸ್ಪಷ್ಟವಾಗಿ ಜಾಗತಿಕ ವೇದಿಕೆಗೆ ಒಂದೇ ಧ್ವನಿಯಲ್ಲಿ ತಿಳಿಸುವ ಈ ವಿಧಾನ ಪರಿಣಾಮಕಾರಿಯಾಗಿತ್ತು. ಸ್ಪಷ್ಟ ನಿಲುವು ಹಾಗೂ ಭಾರತವನ್ನು ಒಗ್ಗಟ್ಟಾಗಿ ಪ್ರತಿನಿಧಿಸುವ ನಾಯಕರಿಂದ ಸಾಧ್ಯ ಎಂದ ಶಶಿ ತರೂರ್ ಹೇಳಿದ್ದಾರೆ.