ಮನೆ ಮನರಂಜನೆ ಹರಿಪ್ರಿಯಾ – ವಸಿಷ್ಠ ಸಿಂಹ ಎಂಗೇಜ್’ಮೆಂಟ್ ಫೋಟೋ ವೈರಲ್

ಹರಿಪ್ರಿಯಾ – ವಸಿಷ್ಠ ಸಿಂಹ ಎಂಗೇಜ್’ಮೆಂಟ್ ಫೋಟೋ ವೈರಲ್

0

ದುಬೈನಲ್ಲಿ ಕೈ-ಕೈ ಹಿಡಿದುಕೊಂಡು ಸುತ್ತಾಡುವ ಮೂಲಕ ಸ್ಯಾಂಡಲ್​’ವುಡ್​ನಲ್ಲಿ ಹಲವು ದಿನಗಳಿಂದ ಹಲ್ ​ಚಲ್​ ಎಬ್ಬಿಸಿದ ಜೋಡಿ ಅಂದರೆ ಅದು ನಟಿ ಹರಿಪ್ರಿಯಾ ಹಾಗೂ ನಟ ವಸಿಷ್ಠ ಸಿಂಹ.

ಈ ಜೋಡಿ ಮದ್ವೆಗೆ ಸಜ್ಜಾಗುತ್ತಿದೆ ಎನ್ನುವ ಅಂತೆ-ಕಂತೆಗಳು ಹುಟ್ಟಿಕೊಂಡಿದ್ದವು. ಇದೀಗ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಬಿದಿದ್ದು, ಸದ್ಯ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಎಂಗೇಜ್’ಮೆಂಟ್ ಮಾಡಿಕೊಂಡಿರುವುದು ಕನ್ಫರ್ಮ್ ಆಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ರಿಂಗ್ ಬದಲಿಸಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ. ಆ ಮೂಲಕ ನಿಶ್ಚಿತಾರ್ಥವಾಗಿರುವುದು ಖಚಿತವಾಗಿದ್ದು, ಹಸೆಮಣೆ ಏರೋಕೆ ಈ ಜೋಡಿ ರೆಡಿಯಾಗಿದೆ.

ನಟಿ ಹರಿಪ್ರಿಯಾ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಶುಭಕಾರ್ಯ ನಡೆದಿದ್ದು, ಕುಟುಂಬಗಳ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದು, ಈ ವೇಳೆ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನಲಾಗುತ್ತಿದೆ.

 ಸದ್ಯ ಈ ವಿಚಾರ ತಿಳಿದ ಇಬ್ಬರ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದಾರೆ.

ಹಿಂದಿನ ಲೇಖನನಮ್ಮದು ಸ್ತ್ರೀ ಸಂವೇದಿ ಸಂವಿಧಾನ: ಸಿಜೆಐ ಡಿ ವೈ ಚಂದ್ರಚೂಡ್
ಮುಂದಿನ ಲೇಖನ2047ರ ವೇಳೆಗೆ ಆತ್ಮನಿರ್ಭರತೆಯ ಗುರಿ ಸಾಧಿಸಲಿರುವ ನೌಕಾಪಡೆ: ಅಡ್ಮಿರಲ್‌ ಆರ್‌.ಹರಿಕುಮಾರ್‌