ಮನೆ ಉದ್ಯೋಗ ಭಾರತೀಯ ವಾಯುಪಡೆಯ ಏರ್‌’ಮನ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯ ಏರ್‌’ಮನ್ ಹುದ್ದೆಗೆ ಅರ್ಜಿ ಆಹ್ವಾನ

0

ಮೈಸೂರು:  ಭಾರತೀಯ ವಾಯುಪಡೆಯು ಭಾರತೀಯ ಮತ್ತು ಗೂರ್ಖಾ(ನೇಪಾಳ) ಪುರುಷ ಅಭ್ಯರ್ಥಿಗಳಿಂದ, ವೈ (ತಾಂತ್ರಿಕೇತರ) ಗುಂಪಿನಲ್ಲಿ ವೈದ್ಯಕೀಯ ಸಹಾಯಕ ಮತ್ತು ವೈದ್ಯಕೀಯ ಸಹಾಯಕ ಫಾರ್ಮಸಿ ಗುಂಪಿನಲ್ಲಿ ಏರ್‌’ಮೆನ್ ಆಗಿ ಸೇವೆ ಸಲ್ಲಿಸಲು ನೇರ ನೇಮಕಾತಿ ರ‍್ಯಾಲಿಯನ್ನು,2023ರ ಫೆಬ್ರವರಿ 4 ರಂದು “ಏರ್ ಫೋರ್ಸ್ ಸ್ಟೇಷನ್ ತಾಂಬರಂ” ಚೆನ್ನೈನಲ್ಲಿ ಆಯೋಜಿಸಲಾಗಿದೆ.

ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಯೋಮಿತಿ, ನೇಮಕಾತಿಗೆ ಸಂಬoಧಿಸಿದ ಮಾಹಿತಿಗಾಗಿ www.airmenselection.cdac.in ಭೇಟಿ ನೀಡಿ ಅಥವಾ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ಎನ್.ಆರ್.ಮೊಹಲ್ಲಾ ಮೈಸೂರು-07 ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಹಾಗೂ ಕಚೇರಿಯ ದೂರವಾಣಿ ಸಂಖ್ಯೆ 0821-2489972 ಕ್ಕೆ ಕರೆಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಫೆಬ್ರವರಿ ಮಾಸಿಕ ಭವಿಷ್ಯ
ಮುಂದಿನ ಲೇಖನರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ನೀಡುತ್ತಿದೆ 2 ಲಕ್ಷ ಸ್ಕಾಲರ್ ಶಿಪ್: ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ