ಮನೆ ಅಪರಾಧ ಕಾಡಾನೆ ದಾಳಿ: ಯುವಕ ಸಾವು

ಕಾಡಾನೆ ದಾಳಿ: ಯುವಕ ಸಾವು

0

ಹನೂರು: ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಂಬೆಗಲ್ಲು ಪೋಡಿನ ಪಾಲದ ಸಮೀಪ ನಡೆದಿದೆ.

ಹನೂರು ತಾಲೂಕಿನ ಕಡಕಲಕಂಡಿ ಗ್ರಾಮದ ನಾಗೇಶ್ (20) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಸ್ನೇಹಿತರಾದ ಬಸವ, ನಾಗೇಶ್ ,ನಂಜುಂಡ, ಬಿಳಿಗಿರಿರಂಗನ ಬೆಟ್ಟಕ್ಕೆ ಪೂಜೆಗೆ ತೆರಳಿದ್ದು, ವಾಪಸ್ ಗ್ರಾಮಕ್ಕೆ ಬರುವ ಮಾರ್ಗ ಮಧ್ಯದಲ್ಲಿ ಗೊಂಬೆ ಗಲ್ಲು ಪೋಡಿನ ಪಾದದ ಹತ್ತಿರ ಮದ್ಯಪಾನ ಮಾಡಿ ಗೊಂಬೆಗಲ್ಲು ಪೋಡಿನ ಪಾಲದ ಹತ್ತಿರ ಮಧ್ಯಪಾನ ಮಾಡಿ ನಾಗೇಶ್ ಅಲ್ಲಿಯೇ ಬಿದ್ದಿದ್ದಾನೆ.  ಸಂಬಂಧಿಗಳಾದ ಬಸವ ಮತ್ತು ನಂಜುಂಡ ಮನೆಗೆ ತೆರಳಿದ್ದಾರೆ..

ತಡರಾತ್ರಿ ಕಾಡಾನೆ ದಾಳಿ ನಡೆಸಿದ ಪರಿಣಾಮ ನಾಗೇಶ್ ಮೃತ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹನೂರು ಠಾಣೆಯ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಹಿಂದಿನ ಲೇಖನ9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ
ಮುಂದಿನ ಲೇಖನಮಾದಕ ವಸ್ತು ಮಾರಾಟ: ಆರೋಪಿ ಬಂಧನ