ಮನೆ ಕ್ರೀಡೆ ಇಂದು ಐಪಿಎಲ್ 2023ಕ್ಕೆ ತೆರೆ: ಗ್ರ್ಯಾಂಡ್ ಆಗಿ ನಡೆಯಲಿರುವ ಸಮಾರೋಪ ಸಮಾರಂಭ

ಇಂದು ಐಪಿಎಲ್ 2023ಕ್ಕೆ ತೆರೆ: ಗ್ರ್ಯಾಂಡ್ ಆಗಿ ನಡೆಯಲಿರುವ ಸಮಾರೋಪ ಸಮಾರಂಭ

0

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇನ್ನು ಉಳಿದಿರುವುದು ಕೇವಲ ಒಂದು ಪಂದ್ಯ ಮಾತ್ರ. ಶುಕ್ರವಾರ ನಡೆದ ಕ್ವಾಲಿಫೈಯರ್-2 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಗುಜರಾತ್ ಟೈಟಾನ್ಸ್ ಫೈನಲ್​ ಗೆ ಪ್ರವೇಶ ಪಡೆದಿದೆ.

Join Our Whatsapp Group

ಈ ಮೂಲಕ ಮೇ 28 ಭಾನುವಾರದಂದು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾರ್ದಿಕ್ ಪಾಂಡ್ಯ ಅವರ ಗುಜರಾತ್ ಟೈಟಾನ್ಸ್ ಐಪಿಎಲ್ 2023 ಫೈನಲ್ ​ನಲ್ಲಿ ಮುಖಾಮುಖಿ ಆಗಲಿದೆ. ಹಾಲಿ ಚಾಂಪಿಯನ್ ಮತ್ತು ಮಾಜಿ ಚಾಂಪಿಯನ್ನರ್ ಕಾದಾಟಕ್ಕೆ ಇಡೀ ವಿಶ್ವವೇ ಕಾದುಕುಳಿತಿದೆ.

ಈ ರೋಚಕ ಕಾದಾಟ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಐಪಿಎಲ್ 2023 ಸಮಾರೋಪ ಸಮಾರಂಭ ಏರ್ಪಡಿಸಲು ಮುಂದಾಗಿದೆ. ಇದನ್ನು ಅದ್ಧೂರಿಯಾಗಿ ನೆರವೇರಿಸಲು ತೀರ್ಮಾನಿಸಿದೆ. ಇದರಲ್ಲಿ ಖ್ಯಾತ ರ‍್ಯಾಪರ್ ​​ಗಳು ಪ್ರದರ್ಶನ ನೀಡಲಿದ್ದಾರೆ. ರ‍್ಯಾಪರ್​​ಗಳಾದ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ, ಡಿವೈನ್ ಮತ್ತು ಜೋನಿತಾ ಗಾಂಧಿ ಮಿಡ್ ಟೈಮ್ ಶೋನಲ್ಲಿ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಪಂದ್ಯಕ್ಕೂ ಮುನ್ನ ಕಿಂಗ್​ ಮತ್ತು ನ್ಯೂಕ್ಲಿಯಾ ಅಭಿಮಾನಿಗಳನ್ನು ರಂಜಿಸಿದರೆ, ಪಂದ್ಯದ ಮೊದಲ ಇನ್ನಿಂಗ್ಸ್ ನಂತರ, ಜೋನಿತಾ ಗಾಂಧಿ ಮತ್ತು ಡಿವೈನ್ ತಮ್ಮ ಪ್ರದರ್ಶನ ನೀಡಲಿದ್ದಾರೆ.

ಐಪಿಎಲ್ 2023 ಕ್ಲೋಸಿಂಗ್ ಸೆರಮನಿಯ ಮಾಹಿತಿ ಇಲ್ಲಿದೆ

ಐಪಿಎಲ್ 2023 ಸಮಾರೋಪ ಸಮಾರಂಭ ಅಹ್ಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿದೆ. ಅದ್ಧೂರಿ ಕಾರ್ಯಕ್ರಮ ಸಂಜೆ ಸುಮಾರು 6 ಗಂಟೆಯಿಂದ ಶುರುವಾಗುವ ನಿರೀಕ್ಷೆಯಿದೆ.

ರ‍್ಯಾಪರ್ ​​ಗಳಾದ ಕಿಂಗ್ ಮತ್ತು ಡಿಜೆ ನ್ಯೂಕ್ಲಿಯಾ ಪ್ರದರ್ಶನ ನೀಡಲಿದ್ದಾರೆ. ಅವರ ಜೊತೆಗೆ, ಡಿವೈನ್ ಮತ್ತು ಜೋನಿತಾ ಗಾಂಧಿ ಮಿಡ್ ಟೈಮ್ ಶೋನಲ್ಲಿ ರಂಜಿಸಲಿದ್ದಾರೆ.

ವೀಕ್ಷಕರು ಸ್ಟಾರ್ ಸ್ಪೋರ್ಟ್ಸ್ ನೆಟ್‌ ವರ್ಕ್‌ ನಲ್ಲಿ ಐಪಿಎಲ್ 2023 ರ ಸಮಾರೋಪ ಸಮಾರಂಭದ ನೇರ ಪ್ರಸಾರವನ್ನು ವೀಕ್ಷಿಸಬಹುದು. ಲೈವ್ ಸ್ಟ್ರೀಮ್ ಜಿಯೋ ಸಿನಿಮಾದಲ್ಲಿ ವೀಕ್ಷಿಸಬಹುದು.

ಹಿಂದಿನ ಲೇಖನಶಾರುಖ್ ಖಾನ್ ನೀಡಿದ 300 ರೂ ಜೋಪಾನವಾಗಿಟ್ಟಿರುವ ಪ್ರಿಯಾಮಣಿ
ಮುಂದಿನ ಲೇಖನಮೊರಾರ್ಜಿ ದೇಸಾಯಿ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ನೇಮಕ: ಅರ್ಜಿ ಆಹ್ವಾನ