ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು ರೈಲಿನಲ್ಲಿ ಪ್ರಯಾಣಿಸುತ್ತಿದ್ದ, ಪಕ್ಕದಲ್ಲಿದ್ದ ವ್ಯಕ್ತಿ ರಾಜುವನ್ನು ಕೇಳಿದ.

ವ್ಯಕ್ತಿ : ಇದು ಯಾವ ಸ್ಟೇಷನ್ ?

ರಾಜು : ಇದು ರೈಲ್ವೆ ಸ್ಟೇಷನ್.

***

ರಾಜು ಒಮ್ಮೆ ಮಂತ್ರಿಯಾದ. ಕಾರಿನಲ್ಲಿ ಹೋಗುವಾಗ ತಾನು ಚಿಕ್ಕವನಿದ್ದಾಗ ಸಿನಿಮಾ ನೋಡುತ್ತಿದ್ದ ಥಿಯೇಟರ್ ಮುಂದೆ ಕಾರು ಸಾಗಿತು.

ರಾಜು : ಏನಯ್ಯ ಸೆಕ್ರೆಟರಿ, ಈ ಥಿಯೇಟರ್ ನಲ್ಲಿ ಯಾವ ಸಿನಿಮಾ ನಡಿತಾ ಇದೆ?

ಸೆಕ್ರೆಟರಿ : ಈಗ ರಿನೋವೇಷನ್ ನಡಿತಾ ಇದೆ

ರಾಜು : ಇಂಗ್ಲಿಷ್ ಚಿತ್ರ ಹಾಕ್ಬಿಟ್ಟಿದ್ದಾರ ಸರಿ.

***

ರಾಜ : (ಮಂತ್ರಗಳಿಗೆ ಫೋನ್ ಮಾಡಿ) ಮಂತ್ರಗಳೇ, ನಮಸ್ಕಾರ.

ಮಂತ್ರಿ : ನಮಸ್ಕಾರ ನನ್ನಿಂದ ನಿನಗೇನಾಗಬೇಕಿತ್ತು ?

ರಾಜು : ಸ್ವಾಮಿ, ನಿಮ್ಮ ಹಾಗೆ ನಾನೂ ಮಂತ್ರಿಯಾಗಬೇಕು ? ಅದಕ್ಕೇನು ಅರ್ಹತೆ ಬೇಕು ?

ಮಂತ್ರಿ : ನೀನು ಹುಚ್ಚನ

ರಾಜು : ಅಂದ್ರೆ ಈಗ ನೀವು ಕೇಳಿದ ಅರ್ಹತೆ ಇದ್ರೆ ಸಾಕು ಅಂತ ಗೊತ್ತಾಯ್ತು ಬಿಡು.