ಡಾಕ್ಟರ್: ಮತ್ತೇನು ಬಂದ್ರೀ?
ನಾಣಿ: ಅದೇ ನನಗೆ ನೆನಪಿನ ಶಕ್ತಿ ಕಮ್ಮಿಯಾಗಿದೆ ಡಾಕ್ಟೇ.
ಡಾಕ್ಟರ್: ಅದಕ್ಕೆ ಅವತ್ತೇ ಮಾತ್ರೆಗಳನ್ನು ಕೊಟ್ಟಿಲ್ಲ.
ನಾಣಿ: ನೀವು ಮಾತ್ರೆ ಕೊಟ್ಟಿದ್ದು ಈಗ ನೆನಪಿಗೆ ಬಂತು. ಮತ್ತೊಂದು ತೊಂದ್ರೆ.
ಡಾಕ್ಟರ್: ಮತ್ತೇನು ತೊಂದ್ರೆ?
ನಾಣಿ: ಮಾತ್ರೆ ನುಂಗೋದೇ ಮರ್ತುರುಹೋಗುತ್ತೆ.
ಪರೀಕ್ಷಕ: (ಪ್ರಾಣಿ ಶಾಸ್ತ್ರದ ಬಗ್ಗೆ ನಾಣಿಗೆ ಪ್ರಶ್ನೆ ಕೇಳುತ್ತಿದ್ದರು.) ಇದೇನು ನೋಡು?
ನಾಣಿ: ಅದು ಯಾವುದೋ ಪಕ್ಷಿ ಕಾಲಿನಂತಿದೆ.
ಪರೀಕ್ಷಕ: ಸರಿಯಾಗಿ ಹೇಳಿದೆ. ಇದು ಯಾವ ಪಕ್ಷಿ ಕಾಲು ಸರಿಯಾಗಿ ನೋಡಿ ಹೇಳು.
ನಾಣಿ: ನನಗೆ ಗೊತ್ತಾಗ್ತಾ ಇಲ್ಲಾ ಸಾರ್,
ಪರೀಕ್ಷಕ: ಹಾಗಾದರೆ ಈ ವಿಷಯದಲ್ಲಿ ನೀನು ಫೇಲಾದೆ. ಅಂದಹಾಗೆ ನಿನ್ನ ಹೆಸರು?
ನಾಣಿ: ನನ್ನ ಕಾಲು ನೋಡಿ ನೀವೇ ನನ್ನ ಹೆಸರು ತಿಳ್ಕೊಬಹುದಲ್ಲಾ.
ನಾಣಿ: ಸ್ವಾಮಿ ಸಚಿವರೇ, ನಮ್ಮೂರ್ಗೂದು ಸೇತುವೆ ಸ್ಯಾಂಕ್ಷನ್ ಮಾಡಿ.
ಸಚಿವರು: ನಿಮ್ಮೂರಲ್ಲಿ ಹೊಳೇನೇ ಇಲ್ಲಾ.
ನಾಣಿ: ಹೌದಲ್ಲಾ, ಹಾಗಾದ್ರೆ ಮೊದಲು ಒಂದು ಹೊಳೆ ಸ್ಯಾಂಕ್ಷನ್ ಮಾಡಿ. ಅನಂತರ ಸೇತುವೆ ಸ್ಯಾಂಕ್ಷನ್ ಮಾಡಿ.














