ಮನೆ ಕಾನೂನು ನ್ಯಾಯಾಂಗ ಸಂಸ್ಥೆಗಳು ತಂತ್ರಜ್ಞಾನದ ಬಳಕೆಗೆ ಇರುವ ಅಡೆತಡೆಗಳನ್ನು ತೊಡೆದುಹಾಕಬೇಕು: ನ್ಯಾ. ಡಿ ವೈ ಚಂದ್ರಚೂಡ್

ನ್ಯಾಯಾಂಗ ಸಂಸ್ಥೆಗಳು ತಂತ್ರಜ್ಞಾನದ ಬಳಕೆಗೆ ಇರುವ ಅಡೆತಡೆಗಳನ್ನು ತೊಡೆದುಹಾಕಬೇಕು: ನ್ಯಾ. ಡಿ ವೈ ಚಂದ್ರಚೂಡ್

0

ನ್ಯಾಯಾಂಗ ಸಂಸ್ಥೆಗಳು ಮತ್ತು ನ್ಯಾಯಾಧೀಶರು ತಂತ್ರಜ್ಞಾನ ಬಳಕೆ ಹೆಚ್ಚಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಕರೆ ನೀಡಿದರು.

ನವದೆಹಲಿಯಲ್ಲಿ ಭಾನುವಾರ ಸಮಾರೋಪಗೊಂಡ ಅಖಿಲ ಭಾರತ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಇದೇ ಮೊದಲ ಬಾರಿಗೆ ದೇಶದ ಎಲ್ಲಾ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಭಾಗವಹಿಸಿದ್ದ ಸಮಾವೇಶ ಅದಾಗಿತ್ತು.

ನ್ಯಾಯಾಂಗಸಂಸ್ಥೆಗಳುತಂತ್ರಜ್ಞಾನದಬಳಕೆಗೆ ಇರುವ ಅಡೆತಡೆಗಳನ್ನು ತೊಡೆದುಹಾಕಬೇಕು. ಬದಲಾವಣೆ ತರುವಲ್ಲಿ ಮುಂಚೂಣಿಯಲ್ಲಿರಬೇಕು ಎಂದು ಸುಪ್ರೀಂಕೋರ್ಟ್‌ನಇ-ಸಮಿತಿಅಧ್ಯಕ್ಷರೂಆಗಿರುವನ್ಯಾಯಮೂರ್ತಿಗಳು ಹೇಳಿದರು.

ನ್ಯಾ. ಚಂದ್ರಚೂಡ್‌ ಭಾಷಣದ ಪ್ರಮುಖಾಂಶಗಳು

  • ಕಾನೂನು ನೆರವು ಪಡೆಯುವ ಫಲಾನುಭವಿಗಳಲ್ಲಿ ಹೆಚ್ಚಿನವರು ಅನಕ್ಷ್ರಸ್ಥರು. ಎರಡು ಭಿನ್ನ ತುದಿಗಳಲ್ಲಿ ಪ್ರಭುತ್ವ ಮತ್ತು ಫಲಾನುಭವಿಗಳಿದ್ದಾರೆ. ಸರ್ಕಾರದ ಅಂಗಗಳು ಮಾಡದ ಕೆಲಸವನ್ನು ಅಂದರೆ ಫಲಾನುಭವಿಗಳೊಂದಿಗೆ ಮಾತನಾಡುವ ಕೆಲಸನವನ್ನು ಮಾಡಲು ನ್ಯಾಯಾಂಗಕ್ಕೆ ಅನುವು ಮಾಡಿಕೊಟ್ಟಿದೆ.
  • ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪ್ರಮುಖ ಅಂಶವೆಂದರೆ ಅದು ಪ್ರಕರಣದ ಮಾಹಿತಿ ವ್ಯವಸ್ಥೆಯಾಗಿದೆ. ಪ್ರಮುಖ ಭಾಗ ಸಿಐಎಸ್.ವಿಚಾರಣಾಧೀನ ಕೈದಿಗಳ ಜೈಲು ಶಿಕ್ಷೆ ಬಗ್ಗೆ ನ್ಯಾಯಾಧೀಶರಿಗೆ ಅರಿವು ಮೂಡಿಸುವಂತಹ ಕಾರ್ಯವಿಧಾನ ಜಾರಿಗೆ ತರುತ್ತಿದ್ದೇವೆ.
  • ದೇಶದ ಕಾನೂನು ಶಿಕ್ಷಣದಲ್ಲಿ ಆಳವಾದ ವಿಭಜನೆಯಿದೆ. ಒಂದು ತುದಿಯಲ್ಲಿ ರಾಷ್ಟ್ರೀಯ ಕಾನೂನು ಶಾಲೆಗಳಿವೆ. ಇನ್ನೊಂದು ತುದಿಯಲ್ಲಿ ನೆಪಮಾತ್ರಕ್ಕೆ ಅಸಿತ್ವದಲ್ಲಿರುವ ಕಾನೂನು ಕಾಲೇಜುಗಳಿವೆ. ಆದರೆ ನಿಜವಾಗಿಯೂ ಅಸ್ತಿತ್ವದಲ್ಲಿರುವುದರ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಿದೆ. ನಾಲ್ಕು ಮತ್ತು 5ನೇ ವರ್ಷದ ಕಾನೂನು ವಿದ್ಯಾರ್ಥಿಗಳು ವ್ಯವಸ್ಥೆಯಿಂದ ನಿರ್ಲಕ್ಷ್ಯಕ್ಕೊಳಗಾಗುವ ಮುನ್ನ ಅವರ ಸದುಪಯೋಗ ಪಡೆಯಬೇಕಿದೆ. ಈ ವಿದ್ಯಾರ್ಥಿಗಳು ಭವಿಷ್ಯದ ಆಶಾಕಿರಣಗಳು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ಪಿ ಎಸ್ ನರಸಿಂಹ ಮತ್ತು ವಿಕ್ರಮ್ ನಾಥ್ ಅವರು ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.

ಹಿಂದಿನ ಲೇಖನಲಂಚಕ್ಕೆ ಬೇಡಿಕೆ: ಬೆಸ್ಕಾಂ ಸಹಾಯಕ ಅಭಿಯಂತರ ಎಸಿಬಿ ಬಲೆಗೆ
ಮುಂದಿನ ಲೇಖನವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ದಸರಾ ಬಹಿಷ್ಕರಿಸಿ ಪ್ರತಿಭಟಿಸಲು ಆನೆ ಮಾವುತ, ಕವಾಡಿಗರ ಸಂಘ‌ ನಿರ್ಧಾರ