ಮನೆ ಸುದ್ದಿ ಜಾಲ ಭೂ ಪರಿವರ್ತನೆಯಿಂದ ಜೀವ ವೈವಿದ್ಯಕ್ಕೆ ಧಕ್ಕೆ: ಚೊಟ್ಟೀರ್‌ಮಾಡ ರಾಜೀವ್‌ ಬೋಪಯ್ಯ

ಭೂ ಪರಿವರ್ತನೆಯಿಂದ ಜೀವ ವೈವಿದ್ಯಕ್ಕೆ ಧಕ್ಕೆ: ಚೊಟ್ಟೀರ್‌ಮಾಡ ರಾಜೀವ್‌ ಬೋಪಯ್ಯ

0

ಮೈಸೂರು(Mysuru): ‘ಕೊಡಗು ಜಿಲ್ಲೆಯಲ್ಲೂ ಭೂ ಪರಿವರ್ತನೆ ಮೇಲಿನ ನಿರ್ಬಂಧಗಳನ್ನು ತೆರವು ಮಾಡಿದರೆ ಜಿಲ್ಲೆಯಾದ್ಯಂತ ಬಡಾವಣೆ, ರೆಸಾರ್ಟ್‌ಗಳು ತಲೆ ಎತ್ತಲಿವೆ. ಇಲ್ಲಿನ ಜೀವವೈವಿಧ್ಯ ಹಾಗೂ ಕಾವೇರಿ ನದಿ ಹರಿವಿಗೆ ಧಕ್ಕೆಯಾಗಲಿದೆ  ಕೊಡಗು ಸಂರಕ್ಷಣಾ ವೇದಿಕೆ ಅಧ್ಯಕ್ಷ ಚೊಟ್ಟೀರ್‌ಮಾಡ ರಾಜೀವ್‌ ಬೋಪಯ್ಯ ಎಂದು ತಿಳಿಸಿದ್ದಾರೆ.

ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಮೂರೇ ದಿನದಲ್ಲಿ ಭೂ ಪರಿವರ್ತನೆಗೆ ಅವಕಾಶ ನೀಡಲಾಗುವುದು ಎಂಬ ಕಂದಾಯ ಸಚಿವ ಆರ್‌.ಅಶೋಕ ಹೇಳಿಕೆಯನ್ನು ವೇದಿಕೆ ಖಂಡಿಸಿದೆ.

ಮಿತಿಮೀರಿದ ಮಾನವ ಹಸ್ತಕ್ಷೇಪದಿಂದಲೇ ಕಳೆದ ಐದು ವರ್ಷಗಳಲ್ಲಿ ಭೂ ಕುಸಿತದಂತ ಘಟನೆಗಳು ಮುಂದುವರಿದಿವೆ. ಬೆಂಗಳೂರಿನಲ್ಲಿ ಕೂತು ಆದೇಶಗಳನ್ನು ಹೊರಡಿಸುವುದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕಾವೇರಿ ನದಿ ಹರಿವಿಗೆ ಧಕ್ಕೆಯಾದರೆ ಕರ್ನಾಟಕ, ತಮಿಳುನಾಡಿನ 8 ಕೋಟಿ ಜನ ನೀರಿಗಾಗಿ ಯುದ್ಧಕ್ಕಿಳಿಯುವ ಸನ್ನಿವೇಶ ಸೃಷ್ಟಿಯಾಗುತ್ತದೆ ಎಂದರು.

ಕೊಡವ ಕುಟುಂಬಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸದಸ್ಯರು ಇರುತ್ತಾರೆ. ಅವರಿಗೆ ಪಟ್ಟೆದಾರ ಮುಖ್ಯಸ್ಥ. ಇದೀಗ ರಾಜ್ಯದಾದ್ಯಂತ ಒಂದೇ ಕಾನೂನು ಹೊರಡಿಸಿದ್ದರಿಂದ ಪೌತಿ ಖಾತೆ ವರ್ಗಾವಣೆಯಾಗುತ್ತಿಲ್ಲ. ನೇರ ವಾರಸುದಾರರಿಗೆ ಆಸ್ತಿ ಸೇರುತ್ತಿದೆ. ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ಕಡತಗಳು ವಿಲೇವಾರಿಯಾಗದೇ ಉಳಿದಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಜನಪ್ರತಿನಿಧಿಗಳು ಕೊಡವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೊಡವ ಸಮಸ್ಯೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು. ಅವರು ಪ್ರತಿಕ್ರಿಯಿಸಿ ಕ್ರಮವಹಿಸುವರೆಂಬ ಭರವಸೆ ಇದೆ’ ಎಂದು ರಾಜೀವ್‌ ಬೋಪಯ್ಯ ಹೇಳಿದರು.

ಹಿಂದಿನ ಲೇಖನಪ್ರಭಾವಿಗಳ ಬಗ್ಗೆ ತನಿಖೆ ಮಾಡಿದ್ದಕ್ಕೆ ರವೀಂದ್ರನಾಥ್ ರನ್ನು ವರ್ಗಾವಣೆ ಮಾಡಿದ್ದರೇ ಅದು ಅಪರಾದ: ಸಿದ್ಧರಾಮಯ್ಯ
ಮುಂದಿನ ಲೇಖನವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಲು ಕೋರಿದ ಮನವಿ: ಭಿನ್ನ ತೀರ್ಪು ನೀಡಿದ ದೆಹಲಿ ಹೈಕೋರ್ಟ್