ಮನೆ ಅಪರಾಧ ಕೊಪ್ಪಳ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ : ಸಾರ್ವಜನಿಕರಿಂದ ಆಕ್ರೋಶ

ಕೊಪ್ಪಳ: ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರಕ್ಕೆ ಯತ್ನ : ಸಾರ್ವಜನಿಕರಿಂದ ಆಕ್ರೋಶ

0

ಕೊಪ್ಪಳ: ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸುವ ಘಟನೆ ಮತ್ತೊಮ್ಮೆ ನಡೆದಿದೆ. ಕೊಪ್ಪಳ ಜಿಲ್ಲೆಯ ಕನಕಗಿರಿ ಬಸ್ ನಿಲ್ದಾಣದಲ್ಲಿ ಹಾಡಹಗಲೇ ಮಾನಸಿಕ ಅಸ್ವಸ್ಥೆಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಅಮಾನವೀಯ ಘಟನೆ ನಡೆದಿದೆ.

ಈ ಹೀನ ಕೃತ್ಯ ಸಚಿವ ಶಿವರಾಜ್ ತಂಗಡಗಿ ಅವರ ವಿಧಾನಸಭಾ ಕ್ಷೇತ್ರವಾದ ಕನಕಗಿರಿಯಲ್ಲಿ ನಡೆದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಜಾಪ್ರಭುತ್ವದಲ್ಲಿ ನೈತಿಕತೆ ಮತ್ತು ಮಹಿಳಾ ಭದ್ರತೆಯ ವಿಷಯಗಳು ಪ್ರಾಮುಖ್ಯತೆ ಹೊಂದಬೇಕಾದರೂ, ದಿನದಿಂದ ದಿನಕ್ಕೆ ನಡೆಯುತ್ತಿರುವ ಇಂತಹ ಘಟನೆಗಳು ಆತಂಕ ಉಂಟುಮಾಡುತ್ತಿವೆ.

ಕೃತ್ಯ ಸ್ಥಳೀಯರ ದೃಷ್ಟಿಗೆ ಬಿದ್ದ ತಕ್ಷಣ, ಕೆಲವರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿ ಪೊಲೀಸರು ಮತ್ತು ಮಾಧ್ಯಮದ ಗಮನ ಸೆಳೆದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದು, ಸಾರ್ವಜನಿಕರ ಆಕ್ರೋಶ ಹೆಚ್ಚಿದೆ.

“ಮಹಿಳೆಯರ ಸುರಕ್ಷತೆ ಹಾಗೂ ಮಾನವೀಯತೆ ಸಂಪೂರ್ಣ ಹಾಳಾಗುತ್ತಿದೆ. ಶಾಸಕನ ತವರು ಕ್ಷೇತ್ರದಲ್ಲೇ ಮಹಿಳೆಯರು ಸುರಕ್ಷಿತರಲ್ಲವಾದರೆ ಬೇರೆಡೆ ಏನಾಗಬಹುದು?” ಎಂದು ಜನರು ಪ್ರಶ್ನಿಸಿದ್ದಾರೆ.
ಸಂಸ್ಕೃತಿ ಮತ್ತು ಕನ್ನಡ ಇಲಾಖೆಯ ಸಚಿವರಾಗಿರುವ ಶಿವರಾಜ್ ತಂಗಡಗಿ ಅವರ ಕ್ಷೇತ್ರದಲ್ಲಿ ಇಂತಹ ಘಟನೆ ಸಂಭವಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.