ಮನೆ ರಾಷ್ಟ್ರೀಯ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆರೋಗ್ಯ ವಿಚಾರಿಸಿದ ಸಚಿವ ಪ್ರಹ್ಲಾದ್‌ ಜೋಶಿ

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಆರೋಗ್ಯ ವಿಚಾರಿಸಿದ ಸಚಿವ ಪ್ರಹ್ಲಾದ್‌ ಜೋಶಿ

0

ನವದೆಹಲಿ : ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದ ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಚಿತ್ರನಟ ಪವನ್ ಕಲ್ಯಾಣ್ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ಜೋಶಿ ಫೋನ್ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಕಾರ್ಯದೊತ್ತಡದ ಪರಿಣಾಮ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದ ಆಂಧ್ರ ಡಿಸಿಎಂಗೆ ಇಂದು (ಮೇ 19) ಬೆಳಗ್ಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದರು.

ಆಂಧ್ರಪ್ರದೇಶಕ್ಕೆ ಬಂದಾಗ ನಿಮ್ಮನ್ನು ಭೇಟಿಯಾಗುತ್ತೇನೆ. ಆರೋಗ್ಯವೇ ಭಾಗ್ಯ. ಹೀಗಾಗಿ ನೀವು ಮೊದಲು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರೋಗ್ಯವಾಗಿದ್ದರೆ ನಿಮ್ಮಿಂದ ಮತ್ತಷ್ಟು ಜನಸೇವೆ ಸಾಧ್ಯವಾಗಲಿದೆ. ಹಾಗಾಗಿ ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯಿರಿ. ಸದಾ ಜನಸೇವೆ, ಸಿನಿಮಾ ಎಂದೆಲ್ಲಾ ಶ್ರಮಿಸುತ್ತಿರುವ ನಿಮ್ಮ ಆರೋಗ್ಯಕ್ಕಾಗಿ ನಾನು ತಿರುಪತಿ ಬಾಲಾಜಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.