ಮನೆ ರಾಜ್ಯ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲ: ಡಿಸಿ ಕಚೇರಿ ಮುಂದೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

ಸ್ಮಶಾನಕ್ಕೆ ತೆರಳಲು ದಾರಿ ಇಲ್ಲ: ಡಿಸಿ ಕಚೇರಿ ಮುಂದೆ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

0

ಬೆಳಗಾವಿ(Belagavi) : ಜಿಲ್ಲೆಯ ಎರಡು ಸಮುದಾಯಗಳಿಗೆ ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದ  ಕಾರಣ ಮೃತ ಶವವನ್ನು ಡಿಸಿ ಕಚೇರಿಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಎಣಗಿ ಗ್ರಾಮದಲ್ಲಿ ನಡೆದಿದೆ.

ಏಣಗಿ ಗ್ರಾಮದ ಅಬ್ದುಲ್ ಖಾದರ್ ಮಿಶ್ರಿಕೋಟಿ(65) ಅನಾರೋಗ್ಯದಿಂದ ನಿಧನರಾಗಿದ್ದರು. ಮೃತರ ಶವವನ್ನು ಸಾಗಿಸಲು ದಾರಿ ಇಲ್ಲದೆ ಡಿಸಿ ಕಚೇರಿಯ ಮುಂದೆ ಶವವನ್ನು ಹೂಳುವುದಾಗಿ ಪ್ರತಿಭಟನೆ ನಡೆಸಿದ್ದಾರೆ .

Join Our WhatsApp Group

ಮೃತ ಸಂಬಂಧಿ ಇಬ್ರಾಹಿಂ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು ಶವವನ್ನು ಸಾಗಿಸಲು ದಾರಿ ಕೊಡದ ಸರ್ಕಾರದ ವಿರುದ್ಧ ಅಧಿಕಾರದ ಘೋಷಣೆಗಳನ್ನು ಕೂಗಿದ್ದಾರೆ.

ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಬಹುದು ಕ್ರಮ ಕೈಗೊಂಡಿಲ್ಲ,  ಹೀಗಾಗಿ ಸ್ಮಶಾನಕ್ಕೆ ದಾರಿ ಮಾಡಿಕೊಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.

ಇತ್ತ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ, ಅಡಿಷನಲ್ ಡಿಸಿ ಅಶೋಕ ದುಡಗುಂಟ್ಟಿ ರೈತರ ಮನವೊಲಿಸಲು ಪ್ರಯತ್ನಿಸಿದರು. ಆದರೆ, ರೈತರು ಪಟ್ಟು ಸಡಿಲಿಸದೇ ಇದ್ದಾಗ ಸ್ಥಳಕ್ಕೆ ಬೆಳಗಾವಿ ಡಿಸಿ ನಿತೇಶ ಪಾಟೀಲ ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಆ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಹಿಂದಿನ ಲೇಖನಅಂಜನಾದ್ರಿ ಬೆಟ್ಟಕ್ಕೆ ರಾಜವಂಶಸ್ಥ ಯದುವೀರ್ ಒಡೆಯರ್ ಕುಟುಂಬ ಭೇಟಿ
ಮುಂದಿನ ಲೇಖನನವಜಾತ ಶಿಶು ಹತ್ಯೆ:  ಆರೋಪದಿಂದ ತಾಯಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್