ಮನೆ ಕಾನೂನು ಅನಧಿಕೃತ ಟ್ಯೂಷನ್ ಕೇಂದ್ರಗಳ ಮೇಲೆ ಕ್ರಮಕ್ಕೆ ಸೂಚನೆ

ಅನಧಿಕೃತ ಟ್ಯೂಷನ್ ಕೇಂದ್ರಗಳ ಮೇಲೆ ಕ್ರಮಕ್ಕೆ ಸೂಚನೆ

0
ಸಾಂದರ್ಭಿಕ ಚಿತ್ರ

ಬೆಂಗಳೂರು(Bengaluru) : ಟ್ಯೂಷನ್ ತರಬೇತಿ ಕೇಂದ್ರಗಳು ಅನಧಿಕೃತವಾಗಿ ನಡೆಯುತ್ತಿದ್ದಲ್ಲಿ, ನಿಮಮಾನುಸಾರ ಪರಿಶೀಲಿಸಿ ಶಿಕ್ಷಣ ಕಾಯಿದೆಯ ಅನ್ವಯ ಕ್ರಮ ಕೈಗೊಳ್ಳುವಂತೆ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಆರ್. ಅವರು ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ

ಅನಧಿಕೃತ ಟ್ಯೂಷನ್ ತರಬೇತಿ ಹಾಗೂ ವಸತಿ ಮನೆ ಪಾಠಗಳ ಹಾವಳಿ ತಡೆಯುವಂತೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಕರ್ನಾಟಕ ಶಿಕ್ಷಣ ಕಾಯಿದೆ 1983 ರ ನಿಯಮ 35ರಡಿ ಟ್ಯುಟೋರಿಯಲ್ ಕೇಂದ್ರಗಳನ್ನ ನೊಂದಾಯಿಸುವುದು ಅವಶ್ಯವಾಗಿರುತ್ತದೆ. ಈ ಸಂಬಂಧ ಪ್ರಾಥ,ಮಿಕ ಮತ್ತು ಪ್ರೌಢ ಶಿಕ್ಷಣ ವಿಭಾಗಕ್ಕೆ ವಿದ್ಯಾಂಗ ಇಲಾಖೆ ಜಿಲ್ಲಾ ಉಪ ನಿರ್ದೇಶಕರನ್ನು ನೋಂದಣಿ ಪ್ರಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

1 ರಿಂದ 7 ಹಾಗೂ 8 ರಿಂದ 10 ನೇ ತರಗತಿವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಟ್ಯೂಷನ್ ತರಬೇತಿ ಕೇಂದ್ರಗಳು ಅನಧಿಕೃತವಾಗಿ ನಡೆಯುತ್ತಿದ್ದಲ್ಲಿ,, ನಿಮಮಾನುಸಾರ ಪರಿಶೀಲಿಸಿ ಶಿಕ್ಷಣ ಕಾಯಿದೆಯ ಅನ್ವಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಟ್ಯೂಷನ್’ಗೆ ಹೋಗಿದ್ದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಹಿಂದಿನ ಲೇಖನವಾಕಥಾನ್’ಗೆ ಚಾಲನೆ ನೀಡಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ
ಮುಂದಿನ ಲೇಖನಜನಪರ ಯೋಜನೆ ಜಾರಿಗೊಳಿಸಲು 123 ಸೀಟು ಗೆಲ್ಲುವ ಗುರಿ: ಹೆಚ್.ಡಿಕೆ