ಮನೆ ರಾಜ್ಯ “ಹಿಂಬಾಗಿಲಿನಿಂದ ಅಧಿಕಾರ, ಜನರ ಸಮಾಧಿಗಳ ಮೇಲೆ ಸರ್ಕಾರ – ಬಿಜೆಪಿ ಶೈಲಿ”: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್...

“ಹಿಂಬಾಗಿಲಿನಿಂದ ಅಧಿಕಾರ, ಜನರ ಸಮಾಧಿಗಳ ಮೇಲೆ ಸರ್ಕಾರ – ಬಿಜೆಪಿ ಶೈಲಿ”: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ

0

ವಿಜಯನಗರ: ಬಿಜೆಪಿ ಸರ್ಕಾರದ ಆಡಳಿತ ಶೈಲಿಯನ್ನು ಟೀಕಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ಜನರ ಸಮಾಧಿಗಳ ಮೇಲೆ ಅಧಿಕಾರ ನಡೆಸುವುದು ಮತ್ತು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರುವುದು ಬಿಜೆಪಿಗರಿಗೆ ಮಾತ್ರ ಗೊತ್ತಿರುವ ಕೆಲಸ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರದಲ್ಲಿ ನಡೆದ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋಜು ಮಸ್ತಿಗಾಗಿ ಸಾಧನಾ ಸಮಾವೇಶ ಆಯೋಜಿಸುವ ಸರ್ಕಾರ ತಮ್ಮದಲ್ಲ, ಅದೇನಿದ್ದರೂ ಬಿಜೆಪಿಯವರಿಗೆ ಅನ್ವಯಿಸುವ ಮಾತು. ಬಿಜೆಪಿಯು ಕೋರೋನಾ ಸಮಯದಲ್ಲಿ ಜನರ ಜೀವನವನ್ನು ಹಾಳು ಮಾಡಿದ ಬಗ್ಗೆ ಜನತೆ ಇನ್ನೂ ಮರೆತಿಲ್ಲ ಎಂದರು. ಆ ಸಂದರ್ಭದಲ್ಲಿ ಜನತೆ ಸಂಕಷ್ಟದಲ್ಲಿ ಇದ್ದಾಗ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಲ್ಲಿ ಹೋದ್ರು? ಎಂದು ತೀವ್ರ ತಿರುಗೇಟು ನೀಡಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕೊಟ್ಟ ಭರವಸೆಗಳನ್ನು ಗ್ಯಾರಂಟಿ ಯೋಜನೆಗಳ ಮೂಲಕ ಜನತೆಗೆ ತಲುಪಿಸಿದ್ದು, ಇದರಿಂದ ಸಾವಿರಾರು ಕುಟುಂಬಗಳು ಲಾಭ ಪಡೆದಿದ್ದಾರೆಂದು ಅವರು ತಿಳಿಸಿದರು. ನಾವು ಜನರ ಜೀವನ ಸುಧಾರಣೆಗೆ ನಿಷ್ಟೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

“ಇದು ಎರಡು ವರ್ಷದ ಸಾಧನೆಯ ಸಂಭ್ರಮವಲ್ಲ, ಜನತೆಗಾಗಿ ನಾವು ಮಾಡಿರುವ ಕೆಲಸದ ಒಪ್ಪಿಗೆಯ ಆಚರಣೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ ಹೆಚ್ಚು ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು” ಎಂಬ ಭರವಸೆಯನ್ನೂ ನೀಡಿದರು.