ಮನೆ ಅಪರಾಧ ಪ್ರತ್ಯೇಕ ಪ್ರಕರಣ: ಅಕ್ರಮ ಚಿನ್ನ ಸಾಗಾಣೆ ಮಾಡುತ್ತಿದ್ದ ಇಬ್ಬರ ಬಂಧನ- 90 ಲಕ್ಷ ಮೌಲ್ಯದ...

ಪ್ರತ್ಯೇಕ ಪ್ರಕರಣ: ಅಕ್ರಮ ಚಿನ್ನ ಸಾಗಾಣೆ ಮಾಡುತ್ತಿದ್ದ ಇಬ್ಬರ ಬಂಧನ- 90 ಲಕ್ಷ ಮೌಲ್ಯದ 1.7 ಕೆ.ಜಿ ಚಿನ್ನ ವಶ

0

ದೇವನಹಳ್ಳಿ( Devanahalli) : ಎರಡು ಪ್ರತ್ಯೇಕ ಪ್ರಕರಣದಲ್ಲಿ ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡಲು ಯತ್ನಿಸಿದ ಇಬ್ಬರು ಆರೋಪಗಳನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 90 ಲಕ್ಷ ಮೌಲ್ಯದ ಒಟ್ಟು 1.7 ಕೆ.ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಥಾಯ್ಲೆಂಡ್​ ದೇಶದ ಫುಕೆಟ್ ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 28 ವರ್ಷದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.‌
ಈ ಸಂದರ್ಭದಲ್ಲಿ ಆತ ಧರಿಸಿದ ಬಟ್ಟೆಯೊಳಗೆ ಚಿನ್ನದ 18 ಬಿಸ್ಕತ್ ಗಳು ಪತ್ತೆಯಾಗಿದೆ. ಬಟ್ಟೆಯೊಳಗೆ ಮರೆಮಾಚಿ ಚಿನ್ನವನ್ನಿಟ್ಟು ನಂತರ ಹೊಲಿಗೆ ಹಾಕಿ ಚಿನ್ನದ ಅಕ್ರಮ ಚಿನ್ನ ಸಾಗಣೆಗೆ ಮುಂದಾಗಿದ್ದ ಎಂಬುದು ತಿಳಿದುಬಂದಿದೆ.
ಬಂಧಿತ ಆರೋಪಿಯಿಂದ 63 ಲಕ್ಷ ಮೌಲ್ಯದ 1.199 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬಹ್ರೈನ್ ದೇಶದ ಮನಮದಿಂದ  ಆಗಮಿಸಿದ್ದ ವ್ಯಕ್ತಿಯ ಅನುಮಾನಾಸ್ಪದ ನಡಿಗೆಯಿಂದ ಸಂಶಯಗೊಂಡ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ತಪಾಸಣೆ ನಡೆಸಿದಾಗ ವಿಲಕ್ಷಣವಾದ ಒಳ ಉಡುಪಿನಲ್ಲಿ ಚಿನ್ನ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ.
ಬಂಧಿತ ಆರೋಪಿಯಿಂದ 27 ಲಕ್ಷ ಮೌಲ್ಯದ 519 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.

ಹಿಂದಿನ ಲೇಖನನಿಮ್ಹಾನ್ಸ್​ನಲ್ಲಿ ಒಪ್ಪಂದದ ಆಧಾರದ ಮೇಲೆ ಉದ್ಯೋಗ ನೇಮಕಾತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಕಬಿನಿ ಜಲಾಯದಿಂದ ಹೊರ ಹರಿವು ಹೆಚ್ಚಳ: ಶ್ರೀಕಂಠೇಶ್ವರ ದೇವಾಲಯದ ಸ್ನಾನಘಟ್ಟ ಮುಳುಗಡೆ