ಮನೆ ಆರೋಗ್ಯ ದೇಹದಲ್ಲಿ ಈ ಲಕ್ಷಣಗಳು ಕ್ಯಾನ್ಸರ್‌ನ ಸೂಚನೆಯಾಗಿರಬಹುದು..!

ದೇಹದಲ್ಲಿ ಈ ಲಕ್ಷಣಗಳು ಕ್ಯಾನ್ಸರ್‌ನ ಸೂಚನೆಯಾಗಿರಬಹುದು..!

0

ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿವೆ. ವೈದ್ಯರ ಪ್ರಕಾರ, ಜನರ ದೈನಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದೇ ಈ ರೀತಿಯ ರೋಗಗಳ ಅಪಾಯವನ್ನು ಹೆಚ್ಚಿಸುತ್ತಿವೆ. ವಿಶೇಷವಾಗಿ ಧೂಮಪಾನ ಮತ್ತು ನಿದ್ರೆ ಕೊರತೆ ಪ್ರಮುಖ ಕಾರಣಗಳಾಗಿವೆ. ಅದಲ್ಲದೆ ತಂಬಾಕು ಮತ್ತು ಧೂಮಪಾನವು ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ.

ಇದರಿಂದ ಬಾಯಿ, ಶ್ವಾಸಕೋಶ ಮತ್ತು ಗಂಟಲಿನ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಇದಲ್ಲದೆ, ಪ್ಯಾಸಿವ್ ಸ್ಮೋಕಿಂಗ್‌ ಮಾಡುವವರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾದರೆ ಕ್ಯಾನ್ಸರ್ ಆರಂಭಿಕ ಲಕ್ಷಣಗಳು ಹೇಗಿರುತ್ತವೆ, ದಿನನಿತ್ಯದ ಯಾವ ಅಭ್ಯಾಸಗಳು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಇಂದಿನ ದಿನಗಳಲ್ಲಿ ಜನರು ಹೆಚ್ಚು ಪ್ರಾಸೆಸ್ಡ್ ಮತ್ತು ಪ್ಯಾಕೇಜ್ಡ್ ಆಹಾರಗಳನ್ನು ಸೇವಿಸುತ್ತಿದ್ದಾರೆ. ಇವುಗಳಲ್ಲಿ ಇರುವ ಕೆಮಿಕಲ್ಸ್, ಪ್ರಿಸರ್ವೇಟಿವ್ಸ್ ಮತ್ತು ಹೆಚ್ಚಿನ ಸಕ್ಕರೆ ದೇಹದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹೆಚ್ಚು ಎಣ್ಣೆ ಬಳಸಿ ತಯಾರಿಸಿದ ಅಥವಾ ಸುಟ್ಟ ಆಹಾರ ಪದಾರ್ಥಗಳ ಸೇವನೆಯೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೊರಗಿನಿಂದ ತರಿಸಿಕೊಳ್ಳುವ ಆಹಾರವನ್ನು ಬಿಸಿ ಪ್ಲಾಸ್ಟಿಕ್‌ನಲ್ಲಿ ಸಂಗ್ರಹಿಸುವುದು ಕೂಡ ಹಾನಿಕಾರಕ ರಾಸಾಯನಿಕಗಳನ್ನು ದೇಹಕ್ಕೆ ಸೇರಿಸಬಹುದು.

ನಿದ್ರೆ ಕೊರತೆ ಮತ್ತು ಒತ್ತಡದ ಪಾತ್ರ – ಸಾಕಷ್ಟು ನಿದ್ರೆ ಆಗದಿದ್ದರೆ, ದೇಹದ ಸಹಜ ಸಮತೋಲನ ಹಾಳಾಗುತ್ತದೆ. ರಾತ್ರಿ ತಡವಾಗಿ ಮಲಗುವುದು, ಹೆಚ್ಚು ಸ್ಕ್ರೀನ್ ಬಳಕೆ ಮತ್ತು ಅನಿಯಮಿತ ದಿನಚರಿ ದೇಹದ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಜೊತೆಗೆ ನಿರಂತರ ಒತ್ತಡ ಮತ್ತು ವ್ಯಾಯಾಮದ ಕೊರತೆ ಕೂಡ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.

ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು – ದೀರ್ಘಕಾಲದ ದೌರ್ಬಲ್ಯ, ದೇಹದಲ್ಲಿ ಅನಿರೀಕ್ಷಿತವಾಗಿ ತೂಕ ಇಳಿಕೆಯಾಗುವುದು, ಯಾವುದೇ ಭಾಗದಲ್ಲಿ ಗುಡ್ಡೆ ಕಾಣಿಸಿಕೊಳ್ಳುವುದು ಅಥವಾ ನಿರಂತರ ನೋವು ಇರುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇವು ಕಾಣಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಜೊತೆಗೆ ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. ಸಮಯಕ್ಕೆ ತಕ್ಕ ಪರೀಕ್ಷೆ ಮತ್ತು ವೈದ್ಯರ ಸಲಹೆ ಪಡೆಯುವುದು ಆರೋಗ್ಯ ಕಾಪಾಡಲು ಅತ್ಯಂತ ಅಗತ್ಯವಾಗಿದೆ.