ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುಂಡ: ಡಾಕ್ಟರ್, ನಾನು ಕನ್ನಡಕ ಹಾಕ್ಕೊಂಡ್ರೆ ಖಂಡಿತ ಓದಬಹುದು ತಾನೇ?

ಡಾಕ್ಟರ್ : ಹೌದು ಖಂಡಿತ ಓದಬಹುದು ಧೈರ್ಯವಾಗಿರಿ.

ಗುಂಡ: ಹೌದಾ ಡಾಕ್ಟ್ರೇ.. ಈಗ ಸಮಾಧಾನ ಆಯ್ತು.. ಇಷ್ಟು ದಿನ ಎಲ್ರೂ ಓದೋಕೆ ಬರದೇ ಇರೋ ಅನಕ್ಷರಸ್ಥ ನೀನು, ನಿನ್ನ ಜೀವನಾನೂ ಒಂದು ಜೀವನಾನ ಅಂತ ಎಲ್ಲಾ ಗೇಲಿ ಮಾಡ್ತಾ ಇದ್ರು.. ಇನ್ಮೇಲೆ ಆ ಸಮಸ್ಯೆ ಇರಲ್ಲ……

ಅವನ ಮಾತು ಕೇಳಿ ಡಾಕ್ಟರ್ ಶಾಕ್…

Join Our Whatsapp Group

*******

ಟೀಚರ್: ಏ ಸಂಜು ಅಯೋಗ್ಯ, ಒಂದು ದಿನ ಆದ್ರೂ ಯಾವುದಾದ್ರೂ ಬುಕ್ ತೆಗೆದು ನೋಡಿದ್ಯಾ?

ಸಂಜು: ಡೈಲಿ ಒಂದು ಬುಕ್ ತೆಗೆದು ನೋಡ್ತಾನೇ ಇರ್ತೀನಿ.

ಟೀಚರ್: ಓ ಹಾಗಾದ್ರೆ ಒಳ್ಳೆ ಬುದ್ಧಿ ಬಂದಿದೆ ಅನ್ನು.. ಯಾವ ಬುಕ್ ನೋಡ್ತೀಯಾ?

ಸಂಜು: ಫೇಸ್ ಬುಕ್ ಟೀಚರ್.

******

ಒಮ್ಮೆ ಗಂಡ ಹೆಂಡತಿ ವಾಕ್ ಮಾಡಲು ಹೋದರು. ಅವರ ಮುಂದೆ ಒಂದು ಕತ್ತೆ ನಡೆದು ಹೋಗುತ್ತಿತ್ತು. ಹೆಂಡತಿಗೆ ತಮಾಷೆ ಮಾಡಬೇಕು ಅನಿಸಿತು..

ಹೆಂಡತಿ: ರೀ ನೋಡ್ರೀ ನಿಮ್ಮ ರಿಲೇಟಿವ್ ನಮಸ್ತೆ ಹೇಳ್ರೀ.

ಗಂಡ ಕೂಡಾ ಮಹಾ ಬುದ್ಧಿವಂತ.

ಗಂಡ: (ಕತ್ತೆ ಮುಂದೆ ಹೋಗಿ) ಸಮಸ್ತೆ ಮಾವ ಅಂದ.

ಅದನ್ನು ಕೇಳಿ ಹೆಂಡ್ತಿ ಮುಖ ಕೆಂಪಾಗಿತ್ತು.

******

ಗಂಡ ಹೆಂಡತಿ ತರಕಾರಿ ಮಾರುಕಟ್ಟೆಗೆ ಹೋದರು…

ಹೆಂಡತಿ: ರೀ ಈ ಕಡೆ ನೀಡಿ, ನಾಲ್ಕು ಕಿಲೋ ಹಸಿ ಬಟಾಣಿ ಕಾಯಿ ತಗೋಳ್ಳಾ?

ಗಂಡ : ಓಕೆ ಓಕೆ ತಗೋ..,

ಹೆಂಡತಿ: ಹಲೋ, ನಾನು ಕೊಂಡುಕೊಳ್ಳೋದಿಕ್ಕೆ ನಿಮ್ಮ ಪರ್ಮಿಷನ್ ಕೇಳ್ತಾ ಇಲ್ಲ,

ಅಷ್ಟು ಕಾಯಿಸಿಪ್ಪೆ ಬಿಡಿಸೋಕೆ ನಿಮ್ಮ ಕೈಲಿ ಆಗುತ್ತಾ ಅಂತ ಡೌಟಿತ್ತು ಅದ್ಕೆ ಕೇಳ್ದೆ.

******

ಗುಂಡ ಒಮ್ಮೆ ಜಿಲೇಬಿ ಮಾರಾಟ ಮಾಡುತ್ತಿದ್ದ. ಆದರೆ ಆಲೂಗಡ್ಡೆ ತಗೊಳ್ಳಿ ಎಂದು ಕೂಗುತ್ತಿದ್ದ.

ದಾರಿಹೋಕ: ಏನ್ರೀ, ನೀವು ಮಾರ್ತಾ ಇರೋದು ಜಿಲೇಬಿ, ಆಲೂಗಡ್ಡೆ ತಗೊಳ್ಳಿ ಅಂತ ಕೂಗ್ತಾ ಇದ್ದೀರಿ ಯಾಕೆ?

ಗುಂಡ: ಸುಮ್ಮನೆ ಇರಿ, ಜಿಲೇಬಿ ಅಂತ ಕೇಳಿಸಿಕೊಂಡ್ರೆ ಇಲ್ಲಿಗೆ ನೊಣಗಳು ಬರುತ್ತವೆ‌. ಅದಕ್ಕೆ ಅವಕ್ಕೆ ದಾರಿ ತಪ್ಪಿಸ್ತಾ ಇದ್ದೀನಿ..

******

ಒಬ್ಬ ಮಹಾಕಂಜೂಸ್ ಪತಿ ತನ್ನ ಹೆಂಡತಿಯೊಂದಿಗೆ ಹೊರಗೆ ಸುತ್ತಾಡಲು ಹೋದನು. ಆಗ ದಾರಿಯಲ್ಲಿ,

ಹೆಂಡತಿ : ಏನ್ರೀ, ನನಗೆ ಬಾಯಾರಿಕೆಯಾಗಿದೆ. ಒಂದು ಬಾಟಲ್ ನೀರು ತಂದು ಕೊಡಿ.

ಗಂಡ : ನೀನು ದಹಿ ಪೂರಿ ತಿಂತೀಯಾ, ಕೊಡಿಸ್ಲಾ?

ಹೆಂಡತಿ : ರೀ ಅದರ ಹೆಸರು ಹೇಳಬೇಡ್ರಿ. ಅದರ ಹೆಸರು ಕೇಳಿನೇ ನನ್ನ ಬಾಯಲ್ಲಿ ನೀರು ಸುರಿಯುತ್ತೆ..

ಗಂಡ: ಬಾಯಲ್ಲಿ ನೀರು ಬಂತು ತಾನೇ? ಅದನ್ನೇ ಕುಡಿದು ಬಾಯಾರಿಕೆ ತೀರಿಸಿಕೋ ಸುಮ್ಮನೆ ಒಂದು ಬಾಟಲ್ ನೀರು ಯಾಕೆ ವೇಸ್ಟ್..?

******

ಒಂದು ಹಳೆಯ ಕಾರನ್ನು ಹರಾಜು ಹಾಕಲಾಗುತ್ತಿತ್ತು,

ಬಿಡ್ಡಿಂಗ್: 15 ಲಕ್ಷ… 20 ಲಕ್ಷ… 40 ಲಕ್ಷ!

ಗುಂಡ: ಈ ಗುಜರಿ ಕಾರಿಗೆ ಯಾಕೆ ಇಷ್ಟೊಂದು ರೇಟಾ?

ಪಕ್ಕದಲ್ಲಿದ್ದ ವ್ಯಕ್ತಿ – ಈ ಕಾರಿಗೆ ಇದುವರೆಗೂ ಒಂದಲ್ಲಾ ಎರಡಲ್ಲಾ 23 ಸಲ ಆಕ್ಸಿಡೆಂಟ್ ಆಗಿದೆ.. ವಿಚಿತ್ರ ಎಂದರೆ ಪ್ರತಿ ಸಲ ಆಕ್ಸಿಡೆಂಟಲ್ಲೂ ಗಂಡ ಸೇಫಾಗ್ತಾನೆ ಆದ್ರೆ ಹೆಂಡ್ತಿ ಸಾಯ್ತಾಳೆ..

ಗುಂಡ: ಅರೆರೆ, ಬಂಪರ್ ಆಫರ್,ಮಿಸ್ ಮಾಡ್ಕೋ ಬಾರದು, ಹಾಗಾದ್ರೆ ಈ ಕಾರಿಗೆ ನನ್ನ ಬಿಡ್ ಒಂದು ಕೋಟಿ..‌

******

ಆ ವ್ಯಕ್ತಿ ವಿಮಾನದಿಂದ ಇಳಿಯುವಾಗ, ಬಾಗಿಲಲ್ಲಿ ನಿಂತಿದ್ದ ಏರ್ ಹೋಸ್ಟೆಸ್ ಕೇಳಿದಳು.

ಸರ್, ವಿಮಾನದಲ್ಲಿ ನಿಮಗೆ ಮನೆಯ ರೀತಿಯ ವಾತಾವರಣವೇ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ!

ಆ ವ್ಯಕ್ತಿ ಹೇಳಿದರು : ಇಲ್ಲ, ಖಂಡಿತ ಇಲ್ಲ. ಯಾಕಂದ್ರೆ ನಮ್ಮ ಮನೇಲಿ ಯಾರೂ ನನ್ನ ಮಾತನ್ನು ಕೇಳೋದಿಲ್ಲ, ಆದರೆ ಇಲ್ಲಿ , ವಿಮಾನದಲ್ಲಿ ಪ್ರತಿ ಬಾರಿ ನಾನು ಒಂದು ಬಟನ್ ಒತ್ತಿದರೆ ಸಾಕು ನಾಲ್ಕು ಜನ ಬರ್ತಾ ಇದ್ರು!!!!!!!

******

ಹೆಂಡತಿ ಕುಡುಕ ಗಂಡನಿಗೆ ಬುದ್ಧಿ ಕಲಿಸಬೇಕು ಎಂದು ಒಂದು ದಿನ ರಾತ್ರಿ ಕಪ್ಪು ಬಟ್ಟೆಗಳನ್ನು ಧರಿಸಿ ನಿಂತಳು.

ಗಂಡ: ಏ ಯಾರು ನೀನು? ಇಲ್ಲೇನು ಮಾಡ್ತಾ ಇದ್ದೀಯಾ?

ಹೆಂಡತಿ : ನಾನೊಬ್ಬಳು ಹೆಣ್ಣು ದೆವ್ವ…

ಗಂಡ: ಓ ಹಾಗಾ, ಹಾಗಾದ್ರೆ ಕೊಡು ಶೇಕ್ ಹ್ಯಾಂಡ್, ನಾನು ನಿಮ್ಮ ಅಕ್ಕನ ಗಂಡ…‌

******

ಅಂಕಲ್ ಒಬ್ಬರು ಒಬ್ಬ ಹುಡುಗನನ್ನು ಕೇಳಿದರು..

ಪುಟ್ಟು ಓದು ಹೇಗೆ ನಡೀತಾ ಇದೆ?

ಹುಡುಗ ಉತ್ತರಿಸಿದ : ಅಂಕಲ್ ಸಮುದ್ರದಷ್ಟು ಸಿಲೆಬಸ್, ನದಿ ಯಷ್ಟು ನಾವು ಓದ್ತೀವಿ, ಬಕೆಟ್ ಅಷ್ಟು ನೆನಪಿರುತ್ತೆ, ಎಕ್ಸಾಮ್ ನಲ್ಲಿ ಒಂದು ಲೋಟದಷ್ಟು ಬರೆಯೋದಕ್ಕೆ ಸಮರ್ಥರಾಗಿರ್ತೀವಿ, ಕಡೆಗೆ ಸಣ್ಣ ಹನಿಗಳಷ್ಟು ಅಂಕಗಳು ಸಿಗುತ್ತೆ, ಅದೇ ನಮ್ಮ ಕರ್ಮ…‌