ಗುಂಡ ಒಮ್ಮೆ ಜಿಲೇಬಿ ಮಾರಾಟ ಮಾಡುತ್ತಿದ್ದ. ಆದರೆ ಆಲೂಗಡ್ಡೆ ತಗೊಳ್ಳಿ ಎಂದು ಕೂಗುತ್ತಿದ್ದ.
ದಾರಿಹೋಕ: ಏನ್ರೀ, ನೀವು ಮಾರ್ತಾ ಇರೋದು ಜಿಲೇಬಿ, ಆಲೂಗಡ್ಡೆ ತಗೊಳ್ಳಿ ಅಂತ ಕೂಗ್ತಾ ಇದ್ದೀರಿ ಯಾಕೆ?
ಗುಂಡ: ಸುಮ್ಮನೆ ಇರಿ, ಜಿಲೇಬಿ ಅಂತ ಕೇಳಿಸಿಕೊಂಡ್ರೆ ಇಲ್ಲಿಗೆ ನೊಣಗಳು ಬರುತ್ತವೆ. ಅದಕ್ಕೆ ಅವಕ್ಕೆ ದಾರಿ ತಪ್ಪಿಸ್ತಾ ಇದ್ದೀನಿ..
*****
ಒಬ್ಬ ಮಹಾಕಂಜೂಸ್ ಪತಿ ತನ್ನ ಹೆಂಡತಿಯೊಂದಿಗೆ ಹೊರಗೆ ಸುತ್ತಾಡಲು ಹೋದನು. ಆಗ ದಾರಿಯಲ್ಲಿ,
ಹೆಂಡತಿ : ಏನ್ರೀ, ನನಗೆ ಬಾಯಾರಿಕೆಯಾಗಿದೆ. ಒಂದು ಬಾಟಲ್ ನೀರು ತಂದು ಕೊಡಿ.
ಗಂಡ : ನೀನು ದಹಿ ಪೂರಿ ತಿಂತೀಯಾ, ಕೊಡಿಸ್ಲಾ?
ಹೆಂಡತಿ : ರೀ ಅದರ ಹೆಸರು ಹೇಳಬೇಡ್ರಿ. ಅದರ ಹೆಸರು ಕೇಳಿನೇ ನನ್ನ ಬಾಯಲ್ಲಿ ನೀರು ಸುರಿಯುತ್ತೆ..
ಗಂಡ: ಬಾಯಲ್ಲಿ ನೀರು ಬಂತು ತಾನೇ? ಅದನ್ನೇ ಕುಡಿದು ಬಾಯಾರಿಕೆ ತೀರಿಸಿಕೋ ಸುಮ್ಮನೆ ಒಂದು ಬಾಟಲ್ ನೀರು ಯಾಕೆ ವೇಸ್ಟ್..?
******
ಒಂದು ಹಳೆಯ ಕಾರನ್ನು ಹರಾಜು ಹಾಕಲಾಗುತ್ತಿತ್ತು,
ಬಿಡ್ಡಿಂಗ್: 15 ಲಕ್ಷ… 20 ಲಕ್ಷ… 40 ಲಕ್ಷ!
ಗುಂಡ: ಈ ಗುಜರಿ ಕಾರಿಗೆ ಯಾಕೆ ಇಷ್ಟೊಂದು ರೇಟಾ?
ಪಕ್ಕದಲ್ಲಿದ್ದ ವ್ಯಕ್ತಿ – ಈ ಕಾರಿಗೆ ಇದುವರೆಗೂ ಒಂದಲ್ಲಾ ಎರಡಲ್ಲಾ 23 ಸಲ ಆಕ್ಸಿಡೆಂಟ್ ಆಗಿದೆ.. ವಿಚಿತ್ರ ಎಂದರೆ ಪ್ರತಿ ಸಲ ಆಕ್ಸಿಡೆಂಟಲ್ಲೂ ಗಂಡ ಸೇಫಾಗ್ತಾನೆ ಆದ್ರೆ ಹೆಂಡ್ತಿ ಸಾಯ್ತಾಳೆ..
ಗುಂಡ: ಅರೆರೆ, ಬಂಪರ್ ಆಫರ್,ಮಿಸ್ ಮಾಡ್ಕೋ ಬಾರದು, ಹಾಗಾದ್ರೆ ಈ ಕಾರಿಗೆ ನನ್ನ ಬಿಡ್ ಒಂದು ಕೋಟಿ..
*****
ಆ ವ್ಯಕ್ತಿ ವಿಮಾನದಿಂದ ಇಳಿಯುವಾಗ, ಬಾಗಿಲಲ್ಲಿ ನಿಂತಿದ್ದ ಏರ್ ಹೋಸ್ಟೆಸ್ ಕೇಳಿದಳು.
ಸರ್, ವಿಮಾನದಲ್ಲಿ ನಿಮಗೆ ಮನೆಯ ರೀತಿಯ ವಾತಾವರಣವೇ ಸಿಕ್ಕಿದೆ ಎಂದು ನಾನು ಭಾವಿಸುತ್ತೇನೆ!
ಆ ವ್ಯಕ್ತಿ ಹೇಳಿದರು : ಇಲ್ಲ, ಖಂಡಿತ ಇಲ್ಲ. ಯಾಕಂದ್ರೆ ನಮ್ಮ ಮನೇಲಿ ಯಾರೂ ನನ್ನ ಮಾತನ್ನು ಕೇಳೋದಿಲ್ಲ, ಆದರೆ ಇಲ್ಲಿ , ವಿಮಾನದಲ್ಲಿ ಪ್ರತಿ ಬಾರಿ ನಾನು ಒಂದು ಬಟನ್ ಒತ್ತಿದರೆ ಸಾಕು ನಾಲ್ಕು ಜನ ಬರ್ತಾ ಇದ್ರು!!!!!!!
******
ಹೆಂಡತಿ ಕುಡುಕ ಗಂಡನಿಗೆ ಬುದ್ಧಿ ಕಲಿಸಬೇಕು ಎಂದು ಒಂದು ದಿನ ರಾತ್ರಿ ಕಪ್ಪು ಬಟ್ಟೆಗಳನ್ನು ಧರಿಸಿ ನಿಂತಳು.
ಗಂಡ: ಏ ಯಾರು ನೀನು? ಇಲ್ಲೇನು ಮಾಡ್ತಾ ಇದ್ದೀಯಾ?
ಹೆಂಡತಿ : ನಾನೊಬ್ಬಳು ಹೆಣ್ಣು ದೆವ್ವ…
ಗಂಡ: ಓ ಹಾಗಾ, ಹಾಗಾದ್ರೆ ಕೊಡು ಶೇಕ್ ಹ್ಯಾಂಡ್, ನಾನು ನಿಮ್ಮ ಅಕ್ಕನ ಗಂಡ…
*****
ಅಂಕಲ್ ಒಬ್ಬರು ಒಬ್ಬ ಹುಡುಗನನ್ನು ಕೇಳಿದರು..
ಪುಟ್ಟು ಓದು ಹೇಗೆ ನಡೀತಾ ಇದೆ?
ಹುಡುಗ ಉತ್ತರಿಸಿದ : ಅಂಕಲ್ ಸಮುದ್ರದಷ್ಟು ಸಿಲೆಬಸ್, ನದಿ ಯಷ್ಟು ನಾವು ಓದ್ತೀವಿ, ಬಕೆಟ್ ಅಷ್ಟು ನೆನಪಿರುತ್ತೆ, ಎಕ್ಸಾಮ್ ನಲ್ಲಿ ಒಂದು ಲೋಟದಷ್ಟು ಬರೆಯೋದಕ್ಕೆ ಸಮರ್ಥರಾಗಿರ್ತೀವಿ, ಕಡೆಗೆ ಸಣ್ಣ ಹನಿಗಳಷ್ಟು ಅಂಕಗಳು ಸಿಗುತ್ತೆ, ಅದೇ ನಮ್ಮ ಕರ್ಮ…