ಮನೆ ದೇವರ ನಾಮ ಮಹಾದೇವ

ಮಹಾದೇವ

0

ಗಂಗಾಧರಾ, ಜಗದೀಶ್ವರಾ, ಪರವೇಶ್ವರಾ |

ನೀ ಜಗವ ಉದ್ಧರಿಸಯ್ಯ ಕರುಣಾಸಾಗರ || ಪ    

ಅಣುರೇಣು ತೃಣಕಾಷ್ಟ ನಿನ್ನ ವಶವಯ್ಯ |

ನಿನ್ನಾಜ್ಞೆ, ಇಲ್ಲದೇ ಹುಲ್ಲು ಕಡ್ಡಿಯು |

ಅಲುಗಲಾರದಯ್ಯ || 

ಪ್ರೇರಿಪಿಸು ಸತ್ಕಾರ್ಯ ಮಾಡುವಂತೆ ನನ್ನ |

ಮತಿ ಗೇಡಿ ಎಂದೆನಿಸಿಸದಿರು ಜಗದಿ ನನ್ನ ||  1

ಕಾಲವು ನೀನೆ, ಕಾಲಾನು ನೀನೆ |

ನಿನ್ನಣತಿಯಂತೆ ತಿರುಗುವೆ ನಾನೇ |

ಮತ್ಯಾಕೆ ಆಟ ಆಡಿಸುವೆ ನಾ ಕಾಣೆ |

ಬಲು ಭಾರವು ಈ ಸಂಸಾರದ ಸಾಗರ |

ಈಜಲಾರೆನೆ ಇರದೆ ನಿನ್ನಾ ಸಹಕಾರ || 2

ಪತಿತ ಪಾವನ ಪರಮಾತ್ಮ ನೀನು |

ಪತಿದೋದ್ಧಾರ ಪರಿಪಾಲಿಸು ನಮ್ಮನು |

ಭಾವ ಬಂಧುರ ಬಂಧನದ ಲೋಕ |

ಸಾರವಿರದ ಸಂಸಾರ ಸುಖ

ಕೊನೆಗೆಲ್ಲ ನೀನೆ ಅಯ್ಯಾ ಪರಿಪಾಲಕ |

ಜಾಹ್ನವಿ ವಿಠಲನ ಪ್ರಪೌತ್ರ || 3