ಮನೆ ಯೋಗಾಸನ ಊರ್ಧ್ವಪ್ರಸಾರಿತ ಏಕಪಾದಾಸನ

ಊರ್ಧ್ವಪ್ರಸಾರಿತ ಏಕಪಾದಾಸನ

0

ʼಊರ್ಧ್ವʼವೆಂದರೆ ನೇರ, ಎತ್ತರ, ಮೇಲೆ ʼಪ್ರಸಾರಿತʼ ಎಂದರೆ ನೀಳವಾಗಿ ಚಾಚಿದ, ʼಏಕʼ = ಒಂದು ʼಪಾದʼ = ಹೆಜ್ಜೆ ಅಡಿ. ಈ ಆಸನದ ಭಂಗಿಯಲ್ಲಿ ಒಂದೇ ಕಾಲಮೇಲೆ ನಿಂತು ಮುಂದಕ್ಕೆ ಬಾಗಿ, ಮತ್ತೊಂದು ಕಾಲನ್ನು ನೀಳವಾಗಿ ಚಾಚುವುದರಿಂದ ಈ ಹೆಸರು.

ಅಭ್ಯಾಸ ಕ್ರಮ :-

೧. ಮೊದಲು ತಾಡಾಸನದಲ್ಲಿ ನಿಲ್ಲಬೇಕು.

೨. ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು ದೇಹದ ಮುಂಡಭಾಗವನ್ನು ಮುಂದಕ್ಕೆ ಭಾಗಿಸಬೇಕು. ಆನಂತರ ಎಡಗೈನಿಂದ ಬಲಗಾಲಿನ ಹರಡಿನ(ಗಿಣ್ಣಿನ) ಹಿಂಭಾಗವನ್ನು ಹಿಡಿದುಕೊಳ್ಳಬೇಕು. ಆಮೇಲೆ ಬಲಗೈಯನ್ನು ಬಲಗಾಲಿನ ಮೇಲೆ ನೆಲದ ಮೇಲೂರಿ, ತಲೆಯನ್ನೂ ಗದ್ದವನ್ನೂ ಬಲಮಂಡಿಯಮೇಲೆ ಒರಗಿಸಿಡಬೇಕು.

೨. ಈಗ ಎಡಗಾಲನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ ನಿಲ್ಲಿಸಬೇಕು. ಎರಡುಮಂಡಿಗಳನ್ನೂ ಬಿಗಿಗೊಳಿಸಿ, ಎತ್ತಿದ ಕಾಲಿನ ಬೆರಳುಗಳನ್ನ ಮೇಲ್ಮೋಗವಾಗುವಂತೆ ನೀಡಬೇಕು. ಕಾಲುಗಳನ್ನು ನೇರವಾಗಿ ಮೇಲಿನ ದಿಕ್ಕಿಗಿರಬೇಕೇ ವಿನಾ ಅವನ್ನು ಪಕ್ಕಕ್ಕೆ ತಿರುಗಿಸಬಾರದು.

೩. ಈ ಭಂಗಿಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ನಿಲ್ಲಿಸಬೇಕು. ಆ ಸಮಯದಲ್ಲಿ ಉಸಿರಾಟವನ್ನು ಸಮನಾಗಿರಿಸಬೇಕು. ಬಳಿಕ ಉಸಿರನ್ನು ಒಳಕ್ಕೆಳೆದು, ಎಡಗಾಲನ್ನು ಮೆಲ್ಲಗೆ ನೆಲದ ಮೇಲಿಳಿಸಿ, ಮತ್ತೆ ʼತಡಾಸನʼದ ಸ್ಥಿತಿಗೆ ಬಂದ ನಿಲ್ಲಬೇಕು.

೪. ಇದೇ ಭಂಗಿಯಲ್ಲಿ ಅಭ್ಯಾಸವನ್ನು ಇನ್ನೊಂದು ಕಡೆಗೂ ನಡೆಸಬೇಕು. ಅದರಲ್ಲಿ ಎಡಗಾಲನ್ನು ನೆಲದ ಮೇಲೂರಿ, ಬಲಗಾಲನ್ನು ಮೇಲಕ್ಕೆ ನೇರವಾಗಿ ನೀಡಬೇಕು. ಎರಡು ವಿಧವಾದ ಭಂಗಿಗಳ ಅಭ್ಯಾಸದಲ್ಲಿ ಕಾಲಾಂತರ ಸಮವಾಗಿರಬೇಕು.

ಪರಿಣಾಮಗಳು :-

ಈ ಆಸನಾಭ್ಯಾಸದಿಂದ ಕಾಲಿನ ಮಾಂಸಖಂಡಗಳು ಬಲಗೊಳ್ಳುವುದಲ್ಲದೆ, ಟೋಂಕಗಳ ಸುತ್ತ ಶೇಖರವಾಗಿರುವ ಕೊಬ್ಬಿನ ಅಂಶವು ಕಡಿಮೆಯಾಗುತ್ತದೆ.