ಮನೆ ಕ್ರೀಡೆ ಭಾರತ-ಅಫ್ಘಾನಿಸ್ತಾನ: ಇಂದು 3ನೇ ಟಿ20 ಪಂದ್ಯ

ಭಾರತ-ಅಫ್ಘಾನಿಸ್ತಾನ: ಇಂದು 3ನೇ ಟಿ20 ಪಂದ್ಯ

0

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು  ಭಾರತ ಮತ್ತು ಅಫ್ಘಾನಿಸ್ತಾನ್ ನಡುವಣ ಕೊನೆಯ ಟಿ20 ಪಂದ್ಯ ನಡೆಯಲಿದೆ.

ಇಂದು ಜರುಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿರುವ ಅಫ್ಘಾನಿಸ್ತಾನ್ ತಂಡವು ಕೊನೆಯ ಮ್ಯಾಚ್ ನಲ್ಲಿ ಗೆಲ್ಲುವ ಮೂಲಕ ವೈಟ್ ವಾಶ್ ತಪ್ಪಿಸಿಕೊಳ್ಳಲು ಪ್ಲ್ಯಾನ್ ರೂಪಿಸಿದೆ.

ಈ ಪಂದ್ಯವು ರಾತ್ರಿ 7 ಗಂಟೆಗೆ ಶುರುವಾಗಲಿದೆ. ಅದಕ್ಕೂ ಮುನ್ನ 6.30 ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ) , ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) , ಯಶಸ್ವಿ ಜೈಸ್ವಾಲ್ , ಶುಭ್ಮನ್ ಗಿಲ್ , ತಿಲಕ್ ವರ್ಮಾ , ರಿಂಕು ಸಿಂಗ್ , ಅಕ್ಷರ್ ಪಟೇಲ್ , ಅರ್ಷದೀಪ್ ಸಿಂಗ್ , ಅವೇಶ್ ಖಾನ್ , ಕುಲ್ದೀಪ್ ಯಾದವ್ , ಮುಕೇಶ್ ಕುಮಾರ್ , ಜಿತೇಶ್ ಶರ್ಮಾ , ಶಿವಂ ದುಬೆ, ವಾಷಿಂಗ್ಟನ್ ಸುಂದರ್, ವಿರಾಟ್ ಕೊಹ್ಲಿ.

ಅಫ್ಘಾನಿಸ್ತಾನ್ ತಂಡ: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ (ನಾಯಕ) , ಹಝರತುಲ್ಲಾ ಝಝೈ , ನಜಿಬುಲ್ಲಾ ಝದ್ರಾನ್ , ಮೊಹಮ್ಮದ್ ನಬಿ , ಅಜ್ಮತುಲ್ಲಾ ಒಮರ್ಝೈ , ಮುಜೀಬ್ ಉರ್ ರಹಮಾನ್ , ಶರಫುದ್ದೀನ್ ಅಶ್ರಫ್ , ಖೈಸ್ ಅಹ್ಮದ್ , ನವೀನ್ -ಉಲ್-ಹಕ್, ಫಝಲ್ ಹಕ್ ಫಾರೂಖಿ, ನೂರ್ ಅಹ್ಮದ್, ಮೊಹಮ್ಮದ್ ಸಲೀಂ ಶಫಿ, ಕರೀಂ ಜನತ್ , ಇಕ್ರಮ್ ಅಲಿಖಿಲ್ , ಫರೀದ್ ಅಹ್ಮದ್ ಮಲಿಕ್ , ರಹಮತ್ ಶಾ , ಗುಲ್ಬದಿನ್ ನೈಬ್.